ಅನಧಿಕೃತ ಮಧ್ಯ ವಿತರಣೆ ಮತ್ತು ಮಾರಾಟ ಮಾಡುವುದನ್ನು ತಡೆಗಟ್ಟಿ ತಹಸೀಲ್ದಾರ್‌ಗೆ ಮನವಿ.

ಗಂಗಾವತಿ ತಾಲೂಕಿನ ಸಂಗಾಪುರ, ಕೊರ್ರಂ ಕ್ಯಾಂಪ್, ಬಂಡಿಬಸಪ್ಪ ಕ್ಯಾಂಪ್ ಗ್ರಾಮಗಳಲ್ಲಿ ಅನಧಿಕೃತವಾಗಿ ಮಧ್ಯ ಮಾರಾಟ ಮಾಡುತ್ತಿದ್ದು, ಕಿರಾಣಿ ಅಂಗಡಿ, ಪಾನ್‌ಶಾಪ್, ಮನೆಗಳಲ್ಲಿ ಅಬಕಾರಿ ಕಾನೂನುಗಳನ್ನು ಗಾಳಿಗೆ ತೂರಿ ಮಾರಾಟ ನಡೆಯುತ್ತಿದೆ. ಈ ಗ್ರಾಮಗಳಲ್ಲಿ ಹೆಚ್ಚಾಗಿ ದಲಿತರು, ಕೂಲಿಕಾರರು, ಬಡವರು ವಾಸ ಮಾಡುತ್ತಿದ್ದು,  ದುಡಿದ ಹಣ ಕುಡಿತಕ್ಕೆ ಇಟ್ಟು ಸಂಸಾರ ಬೀದಿ ಪಾಲು ಮಾಡಿದ್ದಾರೆ. ಗಂಗಾವತಿಯಲ್ಲಿನ ಗಂಗಾಬಾರ್ ಮಾಲೀಕರು ಟಾಟಾ ಸುಮೋ ವಾಹನದಲ್ಲಿ ಅಕ್ರಮವಾಗಿ ಈ ಗ್ರಾಮಗಳಿಗೆ ಮಧ್ಯ ಸರಬರಾಜು ಮಾಡಿಸುತ್ತಿದ್ದಾರೆ. ಗಂಗಾಬಾರ್‌ನವರಿಗೆ ತಮ್ಮ ಕಟ್ಟಡದಲ್ಲಿ ಮಾತ್ರ ಮಧ್ಯ ಮಾರಾಟ ಮಾಡಲು ಅನುಮತಿ ಹೊಂದಿದ್ದಾರೆ. ಅಬಕಾರಿ ಕಾನೂನು ಪ್ರಕಾರ ಈ ಬಾರ್‌ನ ಲೈಸನ್ಸ್ ರದ್ದು ಪಡಿಸದಿದ್ದರೆ ಧರಣಿ ಸತ್ಯಾಗ್ರಹ, ಗಂಗಾವತಿ ಬಂದ್ ಮಾಡಲಾಗುವುದು ಎಂದು ಅಬಕಾರಿ ಇಲಾಖೆಗೆ, ಗ್ರಾಮೀಣ ಪೊಲೀಸ್ ಸ್ಟೇಷನ್ ಮತ್ತು ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಯಿತು ಎಂದು ಗಂಗಾವತಿ ನಗರ ಘಟಕದ ಅಧ್ಯಕ್ಷ ವೀರೇಶ, ಸಂಗಾಪುರ ಹೋಬಳಿ ಘಟಕದ ಅಧ್ಯಕ್ಷರಾದ ಯಮನೂರಪ್ಪ ನಾಯಕ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಕೊರ್ರಂಕ್ಯಾಂಪ್ ಹೋಬಳಿ ಅಧ್ಯಕ್ಷರಾದ ರವಿನಾಯ್ಕ, ಸಂಗಾಪುರ ಹೋಬಳಿ ಘಟಕದ ಉಪಾಧ್ಯಕ್ಷರಾದ ಶ್ರೀನಿವಾಸ ನಾಯಕ, ಹೆಚ್. ಮತ್ತು ಹೆಚ್. ಮಂಜುನಾಥ, ಹನುಮಂತಪ್ಪ ನಾಯಕ, ಶರಣಪ್ಪ, ಹನುಮಂತಪ್ಪ ನಾಯ್ಕ, ಗಾಳೆಮ್ಮ, ಭಾಗ್ಯಮ್ಮ ಹಾಜರಿದ್ದರು.

Please follow and like us:
error