ಎನ್.ಪಿ.ಎಸ್. ನೌಕರರ ಸಮಾವೇಶ ಸಂಘದಿಂದಲ್ಲ ಬೀರಪ್ಪ ಅಂಡಗಿ ಚಿಲವಾಡಗಿ.

ಕೊಪ್ಪಳ-03- ನವೆಂಬರ್ ೧೫ ರಂದು ಹುಬ್ಬಳ್ಳಿಯ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿರುವ ಎನ್.ಪಿ.ಎಸ್.ನೌಕರರ ಬೆಳಗಾವಿ ವಿಭಾಗ ಮಟ್ಟದ ಸಮಾವೇಶವನ್ನು ಸಂಘದ ವತಿಯಿಂದ ಹಮ್ಮಿಕೊಂಡಿಲ್ಲ ಎಂದು ನೂತನ ಪಿಂಚಣಿ ಯೋಜನೆಗೆ ಒಳಪಡುವ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಸ್ಪಷ್ಟಪಡಿಸಿದ್ದಾರೆ.
    ಈ ವಿಷಯದ ಕುರಿತಂತೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು ಎನ್.ಪಿ.ಎಸ್.ನೌಕರರ ಸಂಘವು ಈಗಾಗಲೇ ೨೦೧೨ರಲ್ಲೇ ಕೊಪ್ಪಳ ಜಿಲ್ಲೆಯಲ್ಲಿ ನೊಂದಣೆಯಾಗುವುದರೊಂದಿಗೆ ಎನ್.ಪಿ.ಎಸ್.ಕುರಿತಾಗಿ ನೌಕರರಿಗೆ ಮಾಹಿತಿ ಕಾರ್ಯಗಾರದಂತಹ ಅನೇಕ ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ.ಅಲ್ಲದೇ ಕಳೆದ ಅಕ್ಟೋಬರ್‌ನಲ್ಲಿ ರಾಜ್ಯ ಘಟಕವನ್ನು ಕೂಡಾ ರಚನೆಯನ್ನು ಮಾಡಲಾಗಿದೆ.ಎನ್.ಪಿ.ಎಸ್.ಯೋಜನೆಯನ್ನು ರದ್ದುಗೊಳಿಸುವಂತೆ ಮುಖ್ಯಮಂತ್ರಿಗಳು ಸೇರಿದಂತೆ  ವಿವಿಧ ಸಚಿವರಿಗೆ ಮನವಿ ಪತ್ರವನ್ನು ನೀಡುವುದರ ಮೂಲಕ ಸರ್ಕಾರದ ಗಮನವನ್ನು ಸೆಳೆಯಲಾಗಿದೆ.ಡಿಸೆಂಬರ್‌ನಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬಿ.ಪಿ.ಮಂಜೇಗೌಡ ಹಾಗೂ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷರಾದ ಬಸವರಾಜ ಗುರಿಕಾರವರ ನೇತೃತ್ವದಲ್ಲಿ ಮುಖ್ಯಮಂತ್ರಿಗಳು ದಿನಾಂಕ ನೀಡಿದ ನಂತರ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೇಟ್ ಹಾಲಿನಲ್ಲಿ ರಾಜ್ಯ ಮಟ್ಟದ ಎನ್.ಪಿ.ಎಸ್.ನೌಕರರ ಸಮ್ಮೇಳನವನ್ನು ನಡೆಸಲು ತಿರ್ಮಾನಿಸಲಾಗಿದೆ.ಆದರೆ ನವೆಂಬರ್ ೧೫ರಂದು ಹುಬ್ಬಳ್ಳಿಯ ಆರ್.ಎನ್.ಶೆಟ್ಟಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿರುವ ಬೆಳಗಾವಿ ವಿಭಾಗದ ಎನ್.ಪಿ.ಎಸ್.ನೌಕರರ ಸಮಾವೇಶ ನಮ್ಮ ಸಂಘದಿಂದ ಹಮ್ಮಿಕೊಂಡಿಲ್ಲ.ಕೆಲವರು ನಮ್ಮ ಸಂಘವನ್ನು ಇಬ್ಬಾಗ ಮಾಡಬೇಕು ಎಂಬ ಉದ್ದೇಶವನ್ನು ಹೊಂದಿದ್ದಾರೆ.ಆದರೆ ಯಾವ ಎನ್.ಪಿ.ಎಸ್.ನೌಕರರು ಇಂತಹ ವಿಷಯಗಳಿಗೆ ಕಿವಿಗೊಡಬಾರದು ಎಂದು ತಿಳಿಸಿದ್ದಾರೆ.
Please follow and like us:
error