ಡಾ|| ಬಿ.ಆರ್. ಅಂಬೇಡ್ಕರ ರವರ ಭಾವಚಿತ್ರಕ್ಕೆ ಅಪಮಾನ ಖಂಡನೆ.

ಕೊಪ್ಪಳ-03-  ೨ ರಂದು ಯಲಬುರ್ಗಾ ತಾಲೂಕ ತಳಕಲ್ಲ್ ಗ್ರಾಮದಲ್ಲಿ ಡಾ|| ಬಿ.ಆರ್ ಅಂಬೇಡ್ಕರವರ ಭಾವಚಿತ್ರಕ್ಕೆ ಅಪಮಾನ ಮಾಡಲಾಗಿದೆ. ಈ ಕುರಿತು ಸೂಕ್ತ ಕ್ರಮ ಕೈಗೊಂಡು ೨೪ ಗಂಟೆಗಳ ಒಳಗೆ ಪುನಃ ಅಂಬೇಡ್ಕರ ರವರ ಭಾವಚಿತ್ರ ಸ್ಥಾಪಿಸಿ ಮಾನ್ಯ ಜಿಲ್ಲಾಧಿಕಾರಿಗಳಿಂದ ಗೌರವವನ್ನು ಸಲ್ಲಿಸಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರವಾದ) ಜಿಲ್ಲಾ ಘಟಕ ಒತ್ತಾಯಿಸಿದೆ. 
    ಸದರಿ ಘಟನೆ ಕುರಿತು ಸೂಕ್ತವಾದ ತನಿಖೆ ಕೈಗೊಂಡು ಈ ಕೃತ್ಯವನ್ನು ಮಾಡಿದ ಆರೋಪಿಯಾದ ಸಂಗಮೇಶ ಭೀಮರಡ್ಡಿಯನ್ನು ಗಡಿಪಾರು ಮಾಡಿ ಮತ್ತು ಇಂತಹ ಘಟನೆಗಳು ಮರಳಿ ನಡೆಯದಂತೆ ಮುನ್ನೆಚರಿಕೆ ಕ್ರಮಗಳನ್ನು ಕೈಗೊಳ್ಳಬೇಕೆಂದು ಒತ್ತಾಯಿಸಿದೆ.
Please follow and like us:
error