ಚುನಾವಣೆಗೆ ೧೨೬ ಬಸ್ ಬಳಕೆ : ಕೆಲ ಬಸ್ ಸಂಚಾರ ಮಾರ್ಗ ರದ್ದು ಸಾಧ್ಯತೆ

 ವಿಧಾನಸಭಾ ಸಾರ್ವತ್ರಿಕ ಚುನಾವಣೆ ನಿಮಿತ್ಯ ಮೇ ೦೫ ರಂದು ಮತದಾನ ನಡೆಯಲಿದ್ದು, ಚುನಾವಣೆ ಪ್ರಕ್ರಿಯೆಗಾಗಿ ಈ.ಕ.ರ.ಸಾ.ಸಂಸ್ಥೆಯ ಒಟ್ಟು ೧೨೬ ಬಸ್‌ಗಳನ್ನು ನಿಯೋಜಿಸಿರುವುದರಿಂದ ಅಂದು ಕೊಪ್ಪಳ ಜಿಲ್ಲಾ ವ್ಯಾಪ್ತಿಯ ವಿಭಾಗಗಳ ಕೆಲವು ಬಸ್ ಸಂಚಾರ ಮಾರ್ಗಗಳನ್ನು ರದ್ದುಪಡಿಸುವ ಸಾಧ್ಯತೆ ಇದ್ದು, ಪ್ರಯಾಣಿಕರು ಸಹಕರಿಸಬೇಕು ಎಂದು ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿ ಮಿನುಲ್ಲಾ ಸಾಹೇಬ್ ಅವರು ಮನವಿ ಮಾಡಿದ್ದಾರೆ.
  ಚುನಾವಣೆ ನಿಮಿತ್ಯ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಗಳಿಗೆ ಸಾರಿಗೆ ಸಂಸ್ಥೆಯ ಹೆಚ್ಚಿನ ಬಸ್‌ಗಳನ್ನು ಒದಗಿಸಲಾಗಿದ್ದು, ಕೊಪ್ಪಳ ಘಟಕದಿಂದ ೨೦, ಕುಷ್ಟಗಿ- ೨೭, ಯಲಬುರ್ಗಾ-೩೫ ಹಾಗೂ ಗಂಗಾವತಿ ಘಟಕದಿಂದ ೪೪ ಬಸ್‌ಗಳು ಸೇರಿದಂತೆ ಒಟ್ಟು ೧೨೬ ಬಸ್‌ಗಳನ್ನು ಒದಗಿಸಲಾಗಿದೆ.  ಆದ್ದರಿಂದ ಅನಿವಾರ್ಯವಾಗಿ ಕೆಲವು ಅನುಸೂಚಿಗಳನ್ನು ಈ ಅವಧಿಯಲ್ಲಿ ರದ್ದುಪಡಿಸುವ ಸಾಧ್ಯತೆಗಳು ಇರುತ್ತದೆ.  ಆದ್ದರಿಂದ ಪ್ರಯಾಣಿಕರು ಸಾರಿಗೆ ಸಂಸ್ಥೆಯೊಂದಿಗೆ ಸಹಕರಿಸುವಂತೆ ಈ.ಕ.ರ.ಸಾ. ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಮಿನುಲ್ಲಾ ಸಾಹೇಬ್  ಕೋರಿದ್ದಾರೆ.

Leave a Reply