ಮರಗಳನ್ನು ಪ್ರೀತಿಯಿಂದ ಮನೆಯ ಮಕ್ಕಳಂತೆ ಸಂರಕ್ಷಿಸಬೇಕು

ವನಮೋತ್ಸವ ಕಾರ್ಯಕ್ರಮಕ್ಕೆ ಚಾಲನೆ

ಕೊಪ್ಪಳ: ಮರ ದೇವನಿತ್ತ ವರ.  ಮರಗಳನ್ನು ಪ್ರೀತಿಯಿಂದ ಮನೆಯ  ಮಕ್ಕಳಂತೆ  ಸಂರಕ್ಷಿಸಬೇಕು. ಅಂದಾಗ ಮಾತ್ರ ಪರಿಸರ ಸಮತೋಲನವಾಗುತ್ತದೆ. ಈಗಾಗಲೇ ವಿಶ್ವ ಜಾಗತಿಕ ತಾಪಮಾನದಿಂದ ತತ್ತರಿಸುತ್ತಲಿದೆ.  ಇದರಿಂದಾಗಿ ಪರಿಸರದಲ್ಲಿ ಏರುಪೇರಿನ ವಾತವರಣ ಕಾಣಲಾರಂಭಿಸಿದೆ. ಮತ್ತೊಮ್ಮೆ ನಾವೆಲ್ಲ ಗಿಡಮರ ಬೆಳೆಸುವದರ ಮೂಲಕ ಪ್ರಕೃತಿಯ ಸಮತೋಲನ ಕಾಪಾಡುವ ಅವಶ್ಯಕತೆಯಿದೆ. ಎಂದು ಪೂಜ್ಯ ಶ್ರೀಗವಿಸಿದ್ಧೇಶ್ವರ ಮಹಸ್ವಾಮೀಗಳು ನುಡಿದರು. ಅವರು ವನಶ್ರೀ ಟ್ರಸ್ಟ, ಶ್ರೀಗವಿಮಠ,ಜಿಲ್ಲಾಡಳಿತ, ನಗರಸಭೆ, ಅರಣ್ಯ ಇಲಾಖೆ, ನಗರಾಭಿವೃದ್ಧಿ ಪ್ರಾಧಿಕಾರ, ಹಾಗೂ ಪರಿಸರ ಪ್ರಿಯ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ  ನಡೆಯುತ್ತಿರುವ ವನಮಹೋತ್ಸವ ಕಾರ್ಯಕ್ರಮದ ಅಂಗವಾಗಿ  ಪ್ರಥಮವಾಗಿ ನಗರದ ಆಶ್ರಯಕಾಲನಿಯಲ್ಲಿ ಈ ಕಾರ್ಯಕ್ರಮಕ್ಕ ಚಾಲನೆ ನೀಡಿ ಮಾತನಾಡಿದರು. ಮಾಜಿ ಶಾಸಕರಾದ ಸಂಗಣ್ಣ ಕರಡಿ ಮಾತನಾಡಿ ಗಿಡಮರಗಳ ಮರಣ ಹೋಮದಿಂದಾಗಿ ಭೂಮಿ ಬರಡಾಗುತ್ತಲಿದೆ. ಮತ್ತೊಮ್ಮೆ ನಾವೆಲ್ಲಾ ಮರಗಿಡಗಳನ್ನು ಬೆಳೆಸುವದರ ಮೂಲಕ ಜಗತ್ತಿನ ವಿನಾಶವನ್ನು ತಪ್ಪಿಸಬಹುದುಗಾಗಿದೆ. ಪೂಜ್ಯ ಶ್ರೀಗಳ ಸಂಕಲ್ಪಕ್ಕೆ ನಾವೆಲ್ಲ ಸಹಕಾರ ನೀಡೋಣವೆಂದರು.
ಈ ಸಂದರ್ಭದಲ್ಲಿ ಪೂಜ್ಯ ಹೆಬ್ಬಾಳ ಶ್ರೀಗಳು, ಅರಣ್ಯಾಧಿಕಾರಿ ರಾಜಶೇಖರಮೂರ್ತಿ,ಎಸ್.ಪಿ.ಮಂಜುನಾಥ ಅಣ್ಣಿಗೇರಿ,ನಗರಸಭಾ ಅಭಿಯಂತ ಆರ್.ಆರ್.ಪಾಟೀಲ, ನಗರಸಭಾ ಆಯುಕ್ತೆ ಶ್ರೀಮತಿ ಅಶ್ವಿನಿ, ೩ ನೇ ವಾರ್ಡ ನಗರಸಭಾ ಸದಸ್ಯ ಅಮ್ಜದ್ ಪಟೇಲ, ಮೌಲಾಹುಸೇನ ಜಮಾದರ, ಸಂಜಯಕೊತಬಾಳ ಮೊದಲಾದವರು ಉಪಸ್ಥಿತರಿದ್ದರು.
ನಂತರ ಪೂಜ್ಯ ಶ್ರೀಗಳ ಸಂಕಲ್ಪದಂತೆ ಇಂದು ಆಶ್ರಯ ಕಾಲನಿ,ಹಮಾಲರ ಕಾಲಲಿ,ನಿರ್ಮಿತಿಕೇಂದ್ರ, ಶಾರದಾಟಾಕೀಸ್ ಹಿಂದುಗಡೆ,ಶ್ರೀಶೈಲನಗರ,ಗೋಶಾಲಾ,ಹುಲಿಕೆರಿ,ವಡಕರಾಯನದೇವಸ್ಥಾನದ ಹತ್ತಿರ ಗಿಡಗಳನ್ನು ನೆಡಲಾಯಿತು. ಪ್ರತಿ ವಾರ್ಡನಲ್ಲಿ ಆಯಾ ನಗರಸಭಾ ಸದಸ್ಯರ ನೇತೃತ್ವದಲ್ಲಿ 

ಜನಸ್ತೋಮ ಹರ್ಷದಿಂದ ಭಾಗಿಯಾಗಿ ಶ್ರೀಗಳ ಆಶಿರ್ವಾದ ಪಡೆದು ಸಸಿಗಳನ್ನು ಪಡೆದು ತಮ್ಮ ಮನೆಯಂಗಳದಲ್ಲಿ ಸ್ವಯಂ ನೆಡುವಮೂಲಕ ಈ ವನಮೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದರು.

Please follow and like us:
error