ಗೆಲ್ಲುವ ಅಭ್ಯರ್ಥಿಗೆ ಮತ್ತು ಸ್ಥಳೀಯ ಕಾಂಗ್ರೇಸ್ ಕಾರ್ಯಕರ್ತರಿಗೆ ಟಿಕೇಟ್ ನೀಡುನಂತೆ ಆಗ್ರಹ.

ಕೊಪ್ಪಳ-03- ತಾಲೂಕಿನ ಇರಕಲ್ಲಡಾ ಜಿ.ಪಂ ಕ್ಷೇತ್ರಕ್ಕೆ ಎಸ್.ಟಿ. ಮೀಸಲು ನಿಗದಿಯಾಗಿದ್ದು ಸ್ಥಳೀಯರಾದ ಭೀಮನಗೌಡ ಪಾಟೀಲ್ ಅವರಿಗೆ ಟಿಕೇಟ್ ನೀಡಬೇಕೇಂದು ನಾನಾ ಸಮುದಾಯದ ಮುಖಂಡರು ಆಗ್ರಹಿಸಿದ್ದಾರೆ. ಜಿಲ್ಲೆಯಲ್ಲಿ ನಿರಂತರವಾಗಿ ಕಾಂಗ್ರೇಸ್ ಪಕ್ಷದ ಬೆಳವಣಿಗೆಗೆ ಶ್ರಮಿಸಿದ್ದಾರೆ. ಸಾಮಾಜಿಕ ನ್ಯಾಯ ದೊರಕಿಸಲು ಹಗಲಿರುಳು ದುಡಿದ್ದಿದ್ದಾರೆ. ಅಲ್ಲದೆ ಬೇರೆಯವರಿಗೆ ಈ ಕ್ಷೇತ್ರದ ಟಿಕೇಟ್ ಕೊಡುವುದಕ್ಕಿಂತ ಸ್ಥಳಿಯರಿಗೆ ಟಿಕೇಟ್ ಕೊಡುವುದು ಉತ್ತಮ. ಬೇರೆಯವರಿಗೆ ಟಿಕೇಟ್ ಕೊಡುವುದರಿಂದ ಸೋಲು ಅನುಭವಿಸುವ ಸಾಧ್ಯತೆ ಇದೆ. ಸುತ್ತಮುತ್ತಲಿನ ಹಳ್ಳಿಗಳ ಜನರು ಭೀಮನಗೌಡ ಪಾಟೀಲ್ ಅವರಿಗೆ ಟಿಕೇಟ್ ನೀಡುವಂತೆ ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಹೈಕಮಾಂಡ ಇವರಗೆ ಟಿಕೇಟ್ ಕೊಡುವುದು ಸೂಕ್ತ ಇಲ್ಲವಾದಲ್ಲಿ ಪಕ್ಷದ ಮುಖಭಂಗ ಅನುಭವಿಸಲಿದೆ ಎಂದು ಹಿರಿಯ ಕಾಂಗ್ರೇಸ್ ಮುಖಂಡರಾದ ಗುರಪ್ಪ ಮೂಲಿಮನಿ, ಎಪಿಎಮ್‌ಸಿ  ಮಾಜಿ ಸದಸ್ಯ ಬಾಳನಗೌಡ ಪಾಟೀಲ್, ತಾ.ಪಂ ಮಾಜಿ ಸದಸ್ಯ ಮುಕ್ಕಣ್ಣ ಮಂತ್ರಿ, ಮುಖಂಡರಾದ ಗವಿಸಿದ್ದನಗೌಡ ಪಾಟೀಲ್, ಬಸಣ್ಣ ವೆಂಕಟಾಪೂರ, ತೋಟಪ್ಪ ಕುದರಿಮೊತಿ, ಶರಣಗೌಡ ಪಾಟೀಲ್, ಹನುಮಂತಪ್ಪ ಗೊಸಲಿದೊಡ್ಡಿ, ದ್ಯಾಮಣ್ಣ ಪೂಜಾರ, ಕರೆಗೌಡ ವಡ್ಡರಟ್ಟಿ ಹಾಗೂ ಇತರ ಕಾಂಗ್ರೇಸ್ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.

Please follow and like us:
error