You are here
Home > Koppal News > ಅತಿಥಿ ಉಪನ್ಯಾಸಕರ ಗೋಳು ಪೂರ್ಣಕಾಲಿಕ ಕೆಲಸ, ಅರೆಕಾಲಿಕ ವೇತನ

ಅತಿಥಿ ಉಪನ್ಯಾಸಕರ ಗೋಳು ಪೂರ್ಣಕಾಲಿಕ ಕೆಲಸ, ಅರೆಕಾಲಿಕ ವೇತನ

ಕೊಪ್ಪಳ : ರಾಜ್ಯದಾಧ್ಯಂತ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರ ನೇಮಕಾತಿಯು ಪ್ರತಿ ವರ್ಷ ಆನ್ ಲೈನ್ ಮೂಲಕ   ಜರುಗುತ್ತಿರುವುದು ಶ್ಲಾಘನೀಯ. ಶೈಕ್ಷಣಿಕ ಅರ್ಹತೆಗಳು,  ಸೇವಾಪರಿಗಣನೆ., ಯುಜಿಸಿ ನಿಯಯಮಾವಳಿಗಳಂತೆ ಈ ನೇಮಕಾತಿಯೂ ನೇಮಕಾತಿ ಜರುಗುತ್ತಿದ್ದೂ ಇತ್ತೀಚಿಗೆ ಅತಿಥಿ ಉಪನ್ಯಾಸರಿಗೂ ಖಾಯಂ ಉಪನ್ಯಾಸಕರಂತೆ ಬಯೋಮೆಟ್ರಿಕ್ ಪದ್ದತಿ ಅಳವಡಿಸಲಾಗಿದೆ. ಇದರಿಂದಾಗಿ ಅತಿಥಿ ಉಪನ್ಯಾಸಕರಿಗೆ ಖಾಯಂ ಉಪನ್ಯಾಸಕರಂತೆ ಕೆಲಸ, ಆದರೆ ಸಂಭಳ ಮಾತ್ರ ಅರೆಕಾಲಿಕರಂತಿದೆ.  ಇದು ಯಾವ ನ್ಯಾಯ?  
ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಟಿಯಿಂದ  ಅತಿಥಿ ಉಪನ್ಯಾಸಕರು ಪೂರ್ಣಕಾಲಿಕ ಉಪನ್ಯಾಸಕರಂತೆ ಶ್ರಮಿಸುತ್ತಿದ್ದೂ ಅವರ ಬದುಕು  ಸರ್ಕಾರ ನೀಡುವ ಕನಿಷ್ಠ ವೇತನದಿಂದ  ಜೀವನಮಟ್ಟದ ನಿರ್ವಹಣೆ ಶೋಚನೀಯವಾಗಿದೆ. ನೆರೆ ರಾಜ್ಯಗಳಂತೆ ಹಾಗೂ ಯು.ಜಿ.ಸಿ ನಿಯಮಾವಳಿಗಳಂತೆ  ಪ್ರತಿ ತಿಂಗಳ ೨೫೦೦೦ ರೂಪಾಯಿ ಸಂಭಳ, ಸೇವಾಭದ್ರತೆ, ವರ್ಷದ ೧೨ ತಿಂಗಳು ಸಂಬಳ, ವಯೋಮಿತಿ ಮೀರುತ್ತಿರುವವರಿಗೆ ಖಾಯಾಂತಿ ಮಾಡುವ ಬಗ್ಗೆ ಸರ್ಕಾರ ಗಮನ ಹರಿಸಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯವೆಂದು ಕೊಪ್ಪಳ ಸ.ಪ್ರ.ದ. ಕಾಲೇಜಿನ ಜಿಲ್ಲಾ ಅತಿಥಿ ಉಪನ್ಯಾಸಕ ಸಂಘದ ಅಧ್ಯಕ್ಷರು ಹಾಗೂ ರಾಜ್ಯ ಸಂಚಾಲಕರಾದ ವೀರಣ್ಣ ಸಜ್ಜನರ ಹಾಗೂ ಪದಾಧಿಕಾರಿಗಳಾದ ರವಿಕುಮಾರ ಹಿರೇಮಠ, ಅಶೋಕ ಎಕಸಲಾಪುರ, ಡಾ.ಪ್ರಕಾಶ ಬಳ್ಳಾರಿ,  ಡಾ.ಗಿರಿಜಾತುರಮುರಿ, ಅನುರಾದ, ಸುಧಾ ತುಮ್ಮರಗುದ್ದಿ, ಸುಷ್ಮಾದೇಶಪಾಂಡೆ, ಕಲ್ಲೇಶ ಅಬ್ಬಿಗೇರಿ, ಬಸವರಾಜ ಹುಳುಕಣ್ಣವರ್, ಪ್ರಕಾಶ ಜಡಿ, ಜ್ಞಾನೇಶ, ಗೋಣಿಬಸ[ಪ್ಪ, ರಾಜಕುಮಾರ, ಮಹೇಶ, ಶಿವಕುಮಾರ, ಮಹಾಂತೇಶ ನೆಲಗಣಿ  ತಿಳಿಸಿದ್ದಾರೆ.

Leave a Reply

Top