ಪಯೋನಿಯರ್ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವ.

ಭಾಗ್ಯನಗರ-03- ಯಾವುದಾದರೂ ವಸ್ತು ವಿಷಯವನ್ನಿಟ್ಟುಕೊಂಡು ವಾರ್ಷಿಕೋತ್ಸವವನ್ನು ಆಚರಿಸುವುದು ಮಕ್ಕಳಿಗೆ ಮನರಂಜನೆಯ ಜೊತೆಗೆ ಉತ್ತಮ ಜ್ಞಾನಾರ್ಜನೆಯೂ ಆಗುತ್ತದೆ ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಎಸ್.ಹೆಸ್.ಪಾಟೀಲ್ ಅಭಿಪ್ರಾಯಪಟ್ಟರು.
    ಅವರು ಭಾಗ್ಯನಗರ ಪಯೋನಿಯರ್ ಪಬ್ಲಿಕ್ ಸ್ಕೂಲಿನ ಸವಿಜೇನ ಸಿಹಿಸಂಜೆ ವಾರ್ಷಿಕೋತ್ಸವದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.  ಖ್ಯಾತ ಶಿಕ್ಷಣ ತಜ್ಞರಿಂದ ಶಿಕ್ಷಕರಿಗೆ ತರಬೇತಿಯನ್ನು ಒದಗಿಸಿ, ನೂತನ ಕ್ರಮಕ್ಕೆ ಒಗ್ಗಿಸಿ ಅವರಿಂದ ಗುಣಮಟ್ಟದ ಶಿಕ್ಷಣವನ್ನು ನೀಡಿ ಅದನ್ನು ಸದಾ ಗಮನಿಸುವ ವ್ಯವಸ್ಥೆಯನ್ನು ಈ ಶಿಕ್ಷಣ ಸಂಸ್ಥೆ ಹೊಂದಿದ್ದು ಅದನ್ನು ಹಳ್ಳಿಯಲ್ಲಿ ಪ್ರಾರಂಭಿಸಿದ್ದು ಶ್ಲಾಘನೀಯ ಎಂದರು.  ಪ್ರಕೃತಿಯ ಬಗ್ಗೆ ವಾರ್ಷಿಕೋತ್ಸವನ್ನು ಮಾಡಿ ನಮ್ಮಂತಹರಿಗೂ – ವಯಸ್ಸಾಗಿದೆಯೆಂದು ಸುಮ್ಮನೆ ಕೂರಬೇಡಿ ಎಂದು ಪ್ರೀತಿಯಿಂದ ಎಚ್ಚರಿಸಿದ್ದೀರಿ, ಇದೇ ರೀತಿಯಲ್ಲಿ ಸಂಸ್ಥೆ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಕರೆನೀಡಿದರು. ಮನೆಯೇ ಮೊದಲ ಪಾಠಶಾಲೆ, ತಾಯಿಯೇ ಮೊದಲ ಗುರು .  ತಾಯಿಯ ಆರೈಕೆಯಲ್ಲಿ ಬೆಳೆದ ಮಗ ಸಮಾಜಕ್ಕೆ ಆಸ್ತಿಯಾಗಬಲ್ಲ ಎಂದು ಅಭಿಪ್ರಾಯಪಟ್ಟರು.
  ಇನ್ನೋರ್ವ ಸನ್ಮಾನಿತರಾದ ಮಾಧ್ಯಮ ಸಿರಿ ಪ್ರಶಸ್ತಿ ಪುರಸ್ಕೃತ ಕನ್ನಡ ಪ್ರಭಾ ಜಿಲ್ಲಾ ವರದಿಗಾರ ಸೋಮರಡ್ಡಿ ಅಳವಂಡಿ.  ಶಾಲೆಯಿಂದ ದಡ್ಡ ವಿದ್ಯಾರ್ಥಿ ಎಂದು ಪರಗಣಿಸಲ್ಪಟ್ಟ ಥಾಮಸ್ ಆಲ್ವಾ ಎಡಿಸನ್ ತಾಯಿಯ ಪ್ರಬುದ್ಧತೆಯಿಂದಾಗಿ ವಿಶ್ವವಿಖ್ಯಾತ ವಿಜ್ಞಾನಿಯಾದ ಎಂದರು.  ಯಾವುದೋ ಮಹಾನಗರದ ಶಾಲೆಯನ್ನು ನೆನಪಿಸುವಂತಹ ನಿಮ್ಮ ಕಾರ್ಯಕ್ರಮದ ಗುಣಮಟ್ಟ ಸಂಸ್ಥೆಯ ಉದ್ದೇಶವನ್ನು ತೋರಿಸುತ್ತದೆ.  ಇದು ಭಾಗ್ಯನಗರದಲ್ಲಿ ಇರುವುದು ಸ್ಥಳೀಯರ ಭಾಗ್ಯ ಎಂದರು.
 ಇದೇ ಸಂದರ್ಭದಲ್ಲಿ ಮಾಧ್ಯಮ ಸಿರಿ ಪ್ರಶಸ್ತಿಗೆ ಭಾಜನರಾದ ಕನ್ನಡಪ್ರಭ ಜಿಲ್ಲಾ ವರದಿಗಾರ ಸೋಮರೆಡ್ಡಿ ಅಳವಂಡಿ ಅವರನ್ನೂ ಸನ್ಮಾನಿಸಲಾಯಿತು.  ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮ ಪ್ರಕೃತಿ-ಪ್ರಸ್ತುತಿಯಲ್ಲಿ ವಿದ್ಯಾರ್ಥಿಗಳು ಪ್ರಕೃತಿಯ ಪೋಷಣೆಯ ಕುರಿತಂತೆ ಹಾಡು, ನೃತ್ಯ, ನಾಟಕ ಹಾಗೂ ಸಾಮಾಜಿ ಸಂದೇಶಗಳನ್ನು ಪ್ರಸ್ತುತ ಪಡಿಸಿದರು.  ಕಾರ್ಯಕ್ರಮದಲ್ಲಿ ಕಲ್ಪವೃಕ್ಷ ಗ್ರಾಮೀಣಾಭಿವೃದ್ಧಿ ಹಾಗೂ ಶಿಕ್ಷಣ ಸಂಸ್ಥೆ(ರಿ) ಭಾಗ್ಯನಗರದ ಅಧ್ಯಕ್ಷ ಕೃಷ್ಣ ಇಟ್ಟಂಗಿ, ಉಪಾಧ್ಯಕ್ಷ ಸುರೇಶ್ ಕಠಾರೆ, ಕಾರ್ಯದರ್ಶಿ ಕೃಷ್ಣ ಕಬ್ಬೇರ್, ಲಕ್ಷ್ಮಣಸಾನಿರಂಜನ್, ಉಮೇಶ್ ಕಬ್ಬೇರ್, ಗಿರಿಜಾಬಾಯಿ ಪಡಸಾಲಿಮನಿ, ಶಾಂತಾ ನಾಣಿಕೆರಿ, ವಿಜಯಲಕ್ಷ್ಮಿ ಪ್ರಸಾದ್, ನಿರ್ಮಲಾಬಾಯಿ ಪಿ ಹಬೀಬ್, ದಿನೇಶ್ ಪವಾರ್, ಶಿಕ್ಷಣ ಸಂಯೋಜನ ಎಸ್.ಬಿ.ಕುರಿ, ಸಿ.ಆರ್.ಪಿ ವೀರಭದ್ರಯ್ಯ ಹಿರೇಮಠ, ಪ್ರಾಂಶುಪಾಲ ಆರ್. ದತ್ತಾತ್ರೇಯ ಆರ್.ಸಾಗರ್ ಮುಂತಾದವರು ಉಪಸ್ಥಿತರಿದ್ದರು. ಶಿಕ್ಷಕಿಯರಾದ ಚಂದ್ರಿಕಾ ಹಾಗೂ ಶ್ರೀದೇವಿ ನಿರೂಪಿಸಿದರು. ಚಂದ್ರಿಕಾ ಕಬ್ಬೇರ್ ಸ್ವಾಗತಿಸಿ , ಮಾಧವಿ ಪಾಟೀಲ್ ವಂದಿಸಿದರು.

Please follow and like us:
error