ಶಾಸಕರಿಂದ ರೂ.೨೫ ಲಕ್ಷದ ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

ಕೊಪ್ಪಳ:೦೩,ಶುಕ್ರವಾರ ಭಾಗ್ಯಾನಗರ ಗ್ರಾಮದಲ್ಲಿ ಎಸ್.ಪಿ.ಟಿ.ಎಸ್.ಪಿ. ಯೋಜನೆಯಡಿಯಲ್ಲಿ ಕೊಪ್ಪಳದ ಜನಪ್ರೀಯ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳರವರು ಸಿಸಿ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಅವರು ಬರುವ ಆರ್ಥಿಕ ವರ್ಷದ ಒಳಗೆ ಭಾಗ್ಯಾನಗರ ಗ್ರಾಮದಲ್ಲಿ ಎಲ್ಲಾ ರಸ್ತೆಗಳನ್ನು ಸಿಸಿ ರಸ್ತೆ ಮಾಡಲಾಗುವುದು. ಗ್ರಾಮದಲ್ಲಿ ಈಗಾಗಲೇ ೪ ಶುದ್ಧ ಕುಡಿಯುವ ನೀರಿನ ಘಟಕಗಳು ಪ್ರಾರಂಭಗೊಂಡಿದ್ದು, ಬರುವ ದಿನಗಳಲ್ಲಿ ಗ್ರಾಮದ ಎಲ್ಲಾ ವಾರ್ಡಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪ್ರಾರಂಭಿಸಲಾಗುದು. ತುಂಗಾಭದ್ರ ನದಿಯ ಕುಡಿಯುವ ನೀರಿನ ೨೪x೭ ಕಾಮಗಾರಿಯು ತೀರ್ವಗತಿಯಲ್ಲಿದ್ದು, ಈ ಕಾಮಗಾರಿಯನ್ನು ತ್ವರೀತವಾಗಿ ಪೂರ್ಣಗೊಳಿಸಲಾಗುವುದು.ತೀರ್ವಗತಿಯಲ್ಲಿ ಬೆಳಯುತ್ತಿರು ಭಾಗ್ಯಾನಗರ ಗ್ರಾಮಕ್ಕೆ ಹೆಚ್ಚಿನ ಅನುದಾನವನ್ನು ನೀಡಿ ಗ್ರಾಮವನ್ನು ಸರ್ವಾಂಗೀಣ ಅಭಿವೃದ್ಧಿ ಪಡೆಸುವನೆಂದು ಹೇಳಿದರು.  
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಹೂನ್ನೂರು ಸಾಬ್ ಬೈರಾಪೂರು, ಯಮನಪ್ಪ ಕಬ್ಬೇರ, ಪ್ರಸನ್ನಾ ಗಡಾದ, ಶ್ರೀನಿವಾಸ ಗುಪ್ತಾ, ಅಮ್ಜದ್ ಪಟೇಲ್, ಶರಣಪ್ಪ ಸಜ್ಜನ, ಅನಿಕೇತ ಅಗಡಿ, ಕೃಷ್ಣ ಇಟ್ಟಂಗಿ, ಶಿವಾನಂದ ಹೂದ್ಲೂರು, ಚನ್ನಪ್ಪ ತಟ್ಟಿ, ಗ್ರಾ.ಪಂ. ಉಪಾಧ್ಯಕ್ಷ ಹುಲಿಗೇಮ್ಮ ನಾಯಕ್, ಶಂಕ್ರಪ್ಪ ಕುರಟ್ಟಿ, ವೀರಣ್ಣ ಹೆಬ್ಬಾಳ, ತುಕಾರಾಮಪ್ಪ ಗಡಾದ, ಮೇಹಬುಬ ಪಾಷಾ ಬಳಿಗಾರ, ಇಬ್ರಾಹಿಮ್ ಸಾಬ್ ಬಿಸರಳ್ಳಿ, ಇನ್ನೂ ಅನೇಕ ಗ್ರಾ.ಪಂ. ಸದಸ್ಯರು ಗ್ರಾಮದ ಗುರುಹಿರಿಯರು ಉಪಸ್ಥಿತರಿದ್ದರು. 
Please follow and like us:

Related posts

Leave a Comment