ಶಾಸಕರನ್ನು ಬೇಟಿ ಕೊಟ್ಟ ಚಿಕ್ಕಬೊಮ್ಮನಾಳ ಗ್ರಾಂ. ಪಂಚಾಯ್ತಿ ನೂತನ ಅಧ್ಯಕರು ಮತ್ತು ಉಪಾಧ್ಯಕ್ಷರು.

ಕೊಪ್ಪಳ ಜಿಲ್ಲೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಚಿಕ್ಕಬೊಮ್ಮನಾಳ ಗ್ರಾಂ.ಪಂಚಾಯ್ತಿಯ ಚುನಾವಣೆಯಲ್ಲಿ ಒಟ್ಟು ೧೯ ಸದಸ್ಯರ ಪೈಕಿ  ನೂತನ ಅಧ್ಯಕ್ಷರಾಗಿ ಹನುಮವ್ವ ಗಂ ಹನುಮಂತಪ್ಪ ಪೂಜಾರಿ ೧೯ ಮತಗಳಲ್ಲಿ ೧೧ ಮತಗಳಿಸುವುದರ ಮೂಲಕ ಜಯಗಳಿಸಿದ್ದಾರೆ. ಹಾಗೂ ಉಪಾಧ್ಯಕ್ಷರಾಗಿ ಗಂಗಮ್ಮ ಗಂ ಶೇಖರಪ್ಪ ಉಳಗಡ್ಡಿ ೧೯ ಮತಗಳಲ್ಲಿ ೧೨ ಮತಗಳಿಸುವುದರ ಮೂಲಕ ಉಪಾಧ್ಯಕ್ಷರ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ. ಚಳ್ಳಾರಿ, ಹಿರೆಬೊಮ್ಮನಾಳ, ಉಪಲಾಪೂರ, ಗಂಗನಾಳ, ಚಿಕ್ಕಬೊಮ್ಮನಾಳ ಗ್ರಾಂ.ಪಂಚಾಯ್ತಿಗೆ ಒಳಗೊಂಡಿದ್ದು ೧೯ ಸದಸ್ಯರಲ್ಲಿ ೧೪ ಸದಸ್ಯರು ಶಾಸಕರ ಬೆಂಬಲಿತ ಸದಸ್ಯಂiರಾಗಿ ಚುನಾವಣೆಯಲ್ಲಿ ಜಯಸಾದಿಸಿದ್ದಾರೆ. ನೂತನವಾಗಿ ಆಯ್ಕೆಯಾದ ಸದಸ್ಯರು ತಮ್ಮ ಕ್ಷೇತ್ರದ ಶಾಸಕ ಇಕ್ಬಾಲ್ ಅನ್ಸಾರಿಯವರಿಂದ ಶುಭಾಶಯ ಸ್ವಿಕರಿಸಿದ್ದಾರೆ, ಗ್ರಾಮದ ಗುರುಹಿರಿಯರು ಮತ್ತು ಯುವಕರು ಬಾಗಿಯಾಗಿದ್ದರು, ಈ ವೇಳೆ ಮಾತನಾಡಿದ ಶಾಸಕ ಇಕ್ಬಾಲ್ ಅನ್ಸಾರಿ ನಮ್ಮ ಕೇತ್ರದಲ್ಲಿ ಒಟ್ಟು ೧೪ ಗ್ರಾಂ ಪಚಾಯ್ತಿಯಲ್ಲಿ ಜೆಡಿಎಸ್ ಬಹುಮತಗಳಿಸಲಿದೆ ಎಂದು ಈ ಹಿಂದೆ ಹೇಳಿಕೆ ನೀಡಿದ್ದೆ, ಈಗ ಅದರಂತೆ ೧೨ ಗ್ರಾಂ.ಪಂಚಾಯ್ತಿಯಲ್ಲಿ ಜೆಡಿಎಸ್ ಬಹುಮತ ಸಾಧಿಸಿದೆ, ಇನ್ನು ೨ ಗ್ರಾಂ.ಪಂಚಾಯ್ತಿ ಪಲಿತಾಂಶ ಎರಡು ದಿನಗಳ ನಂತರ ಪ್ರಕಟಿಸಲಿದ್ದು, ಆ ಎರಡು ಗ್ರಾಂ.ಪಂಚಾಯ್ತಿ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಜೆಡಿಎಸ್ ಆಗಲಿವೆ ಎಂದು ಶಾಸಕರು ವಿಶ್ವಾಸ ನುಡಿದಿದ್ದಾರೆ, ಕ್ಷೇತ್ರದ ಕಾರ್ಯಕರ್ತರ ಅಹವಾಲನ್ನು ಸ್ವೀಕರಿಸಿದ ಅವರು, ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ಶಾಸಕರ ಬೆಂಬಲಿತ ಅಭ್ಯರ್ಥಿಗಳು ಜಯಸಾಧಿಸಿದ್ದಾರೆ ಅದಕ್ಕಾಗಿ ಕ್ಷೇತ್ರದ ಸಾರ್ವಜನಿಕರಿಗೆ ಧನ್ಯವಾದ ಅರ್ಪಿಸಿದರು.
Please follow and like us:
error