ಸಮ್ಮೇಳನದ ನಿರ್ಣಯಗಳು

ಅಭೂತಪೂರ್ವವಾಗಿ 78ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿಕೊಟ್ಟ ಸ್ವಾಗತ ಸಮಿತಿ, ಜಿಲ್ಲಾ ಕಸಾಪ, ಸಮಸ್ತ ಗಂಗಾವತಿ ಜನರಿಗೆ ಕೃತಜ್ಞತೆ ಸಲ್ಲಿಸುವ ಪ್ರಥಮ ನಿರ್ಣಯ ಮಂಡಿಸಲಾಯಿತು. 2.ಮುಖ್ಯಮಂತ್ರಿ ಸದಾನಂದ ಗೌಡರು ಸಮ್ಮೇಳನದಲ್ಲಿ ಘೋಷಿಸಿರುವಂತೆ ಯಾವುದೇ ಕಾರಣಕ್ಕೂ ಕನ್ನಡ ಶಾಲೆಗಳನ್ನು ಮುಚ್ಚಬಾರದು ಅಥವಾ ವಿಲೀನಗೊಳಿಸಬಾರದು. 3. ಹೈದಾರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ ಪರಿಚ್ಛೇದ 371ರ ತಿದ್ದುಪಡಿಯನ್ನು ಕೇಂದ್ರ ಸರಕಾರ ನಡೆಸಬೇಕು. ಇದಕ್ಕೆ ರಾಜ್ಯ ಸರಕಾರವು ಆಗ್ರಹಿಸಬೇಕು.

4. ಕೇಂದ್ರೀಯ ವಿದ್ಯಾಲಯದಲ್ಲಿ ಕನ್ನಡವನ್ನು ಕಡ್ಡಾಯವಾಗಿ ಬೋಧಿಸಬೇಕು ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಬೇಕು. 5. ಬೆಳಗಾವಿ ಸೇರಿದಂತೆ ಗಡಿ ಭಾಗದಲ್ಲಿ ಅನ್ಯಭಾಷಿಗರು ಭಾಷಾ ಸಾಮರಸ್ಯ ಹಾಳು ಮಾಡುವ ಹುನ್ನಾರ ತಡೆಗಟ್ಟಬೇಕು. ಪುನರಾವರ್ತನೆಯಾದರೆ ಹೋರಾಟಕ್ಕೂ ಸಿದ್ಧ. 6.ಗದಗ-ವಾಡಿ ರೈಲ್ವೆ ಯೋಜನೆ ಜಾರಿಗೆ ತರಬೇಕು. ಈಗಾಗಲೇ ಅನುಮೋದನೆ ಗೊಂಡಿರುವ ಮುನರಾಬಾದ್-ಮೆಹಬೂಬ್ ನಗರ ರೈಲು ಯೋಜನೆಯನ್ನು ಶೀಘ್ರವಾಗಿ ಜಾರಿಗೆ ತಂದು ಪೂರ್ಣಗೊಳಿಸಬೇಕು. 7.ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲಿ ಕನ್ನಡ ಮಾಧ್ಯಮದಲ್ಲಿ ವಿದ್ಯಾಭ್ಯಾಸ ಮಾಡಿದ ಅಭ್ಯರ್ಥಿಗಳಿಗೆ 20 ಸಾವಿರ ಉದ್ಯೋಗಗಳು ಮೀಸಲಾಗಿಡಬೇಕು. 8.ಕನ್ನಡ ನಾಡು-ನುಡಿಗಾಗಿ ಹೋರಾಟ ಮಾಡಿದ ಕನ್ನಡಪರ ಹೋರಾಟಗಾರರ ಮೇಲೆ ಹಾಕಿರುವ ಪೊಲೀಸ್ ಕೇಸುಗಳನ್ನು ಸರಕಾರ ಬೇಷರತ್ತಾಗಿ ವಾಪಸು ಪಡೆಯಬೇಕು. ಅದೇ ರೀತಿ ಕೇಂದ್ರ ಸರಕಾರವು ನಾಡು, ನುಡಿಗಾಗಿ ರೈಲು ತಡೆ ಮುಷ್ಕರ ನಡೆಸಿದಾಗ ಹಾಕಿರುವ ಕೇಸ್‌ಗಳನ್ನು ಬೇಷರತ್ತಾಗಿ ವಾಪಸು ಪಡೆಯಬೇಕು.

Please follow and like us:
error