ಕುಷ್ಟಗಿಯ ಹಿರಿಯ ನ್ಯಾಯವಾದಿ ವಿ.ಬಿ.ಆಶ್ರೀತ್ ನಿಧನ.

ಕೊಪ್ಪಳ-27- ಕುಷ್ಟಗಿಯ ಹಿರಿಯ ನ್ಯಾಯವಾದಿ ವಿ.ಬಿ.ಆಶ್ರೀತ್ (೭೦) ಅವರು ರವಿವಾರದಂದು ನಿಧನ ಹೊಂದಿದರು.
ಹಿರಿಯ ನ್ಯಾಯವಾದಿ ವಿ.ಬಿ.ಆಶ್ರೀತ್ ಅವರ ನಿಧನಕ್ಕೆ ರಾಜ್ಯ ಸಹಕಾರ ಮಹಾಮಂಡಳಿಯ ಅಧ್ಯಕ್ಷ ಶೇಖರಗೌಡ ಮಾಲೀಪಾಟೀಲ್, ರಾಜಶೇಖರ ಅಂಗಡಿ, ರವೀಂದ್ರ ಬಾಕಳೆ,ನಟರಾಜ್ ಸೋನಾರ್,ಹನುಮೇಶ ಗುಮಗೇರಿ, ಜಿಲ್ಲಾ ಸಹಕಾರಿ ಯುನಿಯನ್ ನಿರ್ದೇಶಕ ಗವಿಸಿದ್ದೇಶ ಹುಡೇಜಾಲಿ ಸಂತಾಪ ಸೂಚಿಸಿ ಮೃತರು ಕನ್ನಡ ಸಾಹಿತ್ಯ ಪರಿಷತ್‌ನ ಅಜೀವ ಸದಸ್ಯರಾಗಿದ್ದು ಕಸಾಪ ಬಗ್ಗೆ ಅಪಾರ ಪ್ರೀತಿ ಹೊಂದಿದ್ದರು ಅವರ ನಿಧನ ಜಿಲ್ಲೆಗೆ ತುಂಬಲಾರದ ನಷ್ಟವಾಗಿದೆ ಅವರ ಕುಟುಂಬಕ್ಕೆ ದೇವರು ದು:ಖವನ್ನು ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ತಿಳಿಸಿದ್ದಾರೆ.

Leave a Reply