ಶಿಕ್ಷಣದ ವ್ಯಾಪಾರಿಕರಣ ನಿಲ್ಲಲಿ

 ಎಸ್.ಎಫ್.ಐ ನ  ೫ ನೇ ತಾಲೂಕು ಸಮ್ಮೇಳನ ನಗರದ ಶಾದಿಮಹಲನಲ್ಲಿ ಇಂದು ಬೆಳಗ್ಗೆ ಉದ್ಘಾಟನೆ ಗೊಂಡಿತು ಉದ್ಘಾಟಕರಾಗಿ ಆಗಮಿಸಿದಂತಹ ರಾಜ್ಯ ಉಪಾಧ್ಯಕ್ಷರಾದ ಗುರುರಾಜ ದೇಸಾಯಿ ಅವರು ಮಾತನಾಡಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಆರ್.ಟಿ.ಇ ಕಾಯ್ದೆಯನ್ನು ದುರ್ಬಲಗೊಳಿಸಿವೆ ಸರಕಾರದ ನೀತಿಗಳಿಂದಾಗಿ ಶಿಕ್ಷಣ ವ್ಯಾಪಾರಿಕರಣಗೊಳ್ಳಿತ್ತಿದೆ. ರಾಜ್ಯದ ಅನೇಕ ಶಾಲಾ ಕಾಲೇಜು, ಹಾಸ್ಟೇಲ್‌ಗಳು ಮೂಲಭೂತ ಸೌಲಬ್ಯಗಳಿಲ್ಲದೆ ನರಳುತ್ತಿವೆ. ಸೌಲಬ್ಯಗಳ ಕಡೆ ಗಮನಹರಿಸುವುದುರ ಬದಲಾಗಿ ಮಂತ್ರಿಸ್ಥಾನಕ್ಕಾಗಿ ಮತ್ತು ಲೋಕಸಭೆ ಚುನಾವಣೆಗಾಗಿ ಲಾಬಿ ನಡೆಸುತ್ತಿರುವುದು. ವಿಷಾದನಿಯ. ೩೭೧ ನೇ ಕಲಂ ಹೆಸರಿನಲ್ಲಿ ಹೈ. ಕ ಬಾಗದ ಜನರ ಮತ್ತು ವಿಧ್ಯಾರ್ಥಿಗಳ ಬಾವನೆಗಳನ್ನು ಕೆರಳಿಸುವ ಕೆಲಸವನ್ನು ಈ ಭಾಗದ ಶಾಸಕರು ಮಾಡುತ್ತಿದ್ದಾರೆ. ಕಾಯಿದೆ ಜಾರಿಯಾದರೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಮಿಸಲಾತಿ ಸಿಗುತ್ತದೆ. ಎಂಬುವುದರ ಮೂಲಕ ದಿಕ್ಕು ತಪ್ಪಿಸುತ್ತಿದ್ದಾರೆ. ಶಿಕ್ಷಣಕ್ಕಾಗಿ ವಿಶೇಷ ಹಣ ಮೀಸಲಿಡಿ, ಈ ಭಾಗದ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಕೊಡಿ, ಕಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶೇ. ೫೦ ರಷ್ಟು ಉಚಿತ ಅವಕಾಶ ನೀಡಿ, ವಿದ್ಯಾರ್ಹತೆಯ ಆಧಾರದಲ್ಲಿ ಎಲ್ಲರಿಗೂ ಉದ್ಯೋಗ ಕೊಡಿ ಎಂದರೆ ಜನ ಪ್ರತಿನಿಧಿಗಳು ಉತ್ತರಿಸದೆ ಮೌನ ವಹಿಸಿರುವುದು ಸರಿಯಲ್ಲ ಎಂದರು. ನಂತರ ಜಿಲ್ಲಾ ಉಪಾಧ್ಯಕ್ಷರಾದ ದುರಗೇಶ ಡಗ್ಗಿ ಮಾತನಾಡಿ ಸ್ಥಳಿಯ ಜನಪ್ರತಿನಿಧಿಗಳ ನಿರ್ಲಕ್ಷದಿಂದಾಗಿ ಶಿಕ್ಷಣ ಹಿನಾಯ ಸ್ಥಿತಿಯಲ್ಲಿದೆ. ಶಿಕ್ಷಣ ಸುದಾರಿಸುವುದರ ಮೂಲಕ ಗಮನ ಹರಿಸಿ ಎಂದರು. ಅಧ್ಯಕ್ಷತೆಯನ್ನು ಜಿಲ್ಲಾ ಅಧ್ಯಕ್ಷ ಅಮರೇಶ ಕಡಗದ ವಹಿಸಿದ್ದರು. ವೇದಿಕೆ ಮೇಲೆ ಜಿಲ್ಲಾ ಕಾರ್ಯದರ್ಶಿ ಬಾಳಪ್ಪ ಹುಲಿಹೈದರ್, ಮತ್ತು ಹನಮಂತ ಬಜೆಂತ್ರಿ, ಗ್ಯಾನೇಶ ಕಡಗದ, ಸಿ.ಐ.ಟಿ.ಯು ಮುಖಂಡರಾದ ಗೌಸ್‌ಸಾಬ  ನದಾಫ್, ಹನಮಂತ ಕಲ್ಮಂಗಿ, ಅಪ್ಪಾಸಾಹೇಬ್, ಮತ್ತು ಎಸ್.ಎಫ್.ಐ ನಮುಖಂಡರಾದ ಸುಬಾನ್ ಸೈಯದ್, ವೀರೇಶ, ಉಮೇಶ, ಚನ್ನಪ್ಪ, ಮೇಘಾ, ಸಂದ್ಯಾ, ನೇತ್ರಾವತಿ, ಲಕ್ಷ್ಮೀ ಮುಂತಾದವರು ವೇದಿಕೆಮೆಲೆ ಉಪಸ್ಥಿತರಿದ್ದರು. 

Leave a Reply