You are here
Home > Koppal News > ಶೇಕಡಾ ೩ ರಷ್ಟು ಬಡ್ತಿ ಮಿಸಲಾತಿ ಆದೇಶ ಶೀಘ್ರ ಜಾರಿಗೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ

ಶೇಕಡಾ ೩ ರಷ್ಟು ಬಡ್ತಿ ಮಿಸಲಾತಿ ಆದೇಶ ಶೀಘ್ರ ಜಾರಿಗೆ ಒತ್ತಾಯಿಸಿ ಮುಖ್ಯಮಂತ್ರಿಗಳಿಗೆ ಮನವಿ

ಕೊಪ್ಪಳ:ಸುಪ್ರೀಂ ಕೋರ್ಟನ ಆದೇಶದಂತೆ ಸರ್ಕಾರಿ ಅಂಗವಿಕಲರಿಗೆ ಶೇಕಡಾ ೩ ರಷ್ಟು ಬಡ್ತಿಯಲ್ಲಿ ಮಿಸಲಾತಿ ಆದೇಶವನ್ನು ಶೀಘ್ರ ಜಾರಿಗೊಳಿಸುವಂತೆ ಒತ್ತಾಯಿಸಿ ಸರ್ಕಾರಿ ಅಂಗವಿಕಲ ನೌಕರರ ಸಂಘದ ವತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯಾನವರಿಗೆ ಇಂದು ಮನವಿ ಸಲ್ಲಿಸಲಾಯಿತು.
   ಈ ಸಂದರ್ಭದಲ್ಲಿ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ ಮಾತನಾಡಿ,ಈಗಾಗಲೇ ಸರ್ಕಾರಿ ಅಂಗವಿಕಲರಿಗೆ ಎ ಮತ್ತು ಬಿ ಹುದ್ದೆಗಳಿ ಶೇಕಡಾ ೩ರಷ್ಟು ಹಾಗೂ ಸಿ ಮತ್ತು ಡಿ ಹುದ್ದೆಗಳ ನೇಮಕಾತಿಯಲ್ಲಿ ಶೇಕಡಾ ೫ ರಷ್ಡು ಮಿಸಲಾತಿ ನೀಡಲಾಗಿದೆ.ಆದರೆ ಬಡ್ತಿಯಲ್ಲಿ ನೀಡುವಲ್ಲಿ ಅಂಗವಿಕಲರಿಗೆ ಮಿಸಲಾತಿ ಇರಲಿಲ್ಲ.ಬಡ್ತಿ ಮಿಸಲಾತಿ ನೀಡುವಂತೆ ಹಲವಾರು ಭಾರಿ ಪ್ರತಿಭಟನೆ ಹಾಗೂ ಮನವಿ ಸಲ್ಲಿಸಲಾಗಿತ್ತು.ಇದರನ್ವಯ ಸುಪ್ರೀಂಕೋರ್ಟ ಸೆಪ್ಟೆಂಬರ್ ತಿಂಗಳಿನಲ್ಲಿ ಸರ್ಕಾರಿ ಅಂಗವಿಕಲ ನೌಕರರಿಗೆ ಕೇವಲ ನೇಮಕಾತಿಯಲ್ಲಿ ಮಾತ್ರ ಮಿಸಲಾತಿಯಿದ್ದು ಇನ್ನೂ ಮುಂದೆ ಬಡ್ತಿಯಲ್ಲಿ ಶೇಕಡಾ ೩ರಷ್ಟು ಮಿಸಲಾತಿ ನೀಡುವಂತೆ ದೇಶದ ಎಲ್ಲಾ ರಾಜ್ಯಗಳಿಗೆ ಆದೇಶ ಮಾಡಿದೆ.ಆದ್ದರಿಂದ ತಾವು ಬಡ್ತಿ ಮಿಸಲಾತಿಯ ಆದೇಶವನ್ನು ಶೀಘ್ರವೇ ಜಾರಿಗೊಳಿಸಿ ೧೪೫೦೦ ಅಂಗವಿಕಲ ನೌಕರರಿಗೆ ಅನೂಕೂಲ ಮಾಡಿಕೊಡುವಂತೆ ಮನವಿ ಮಾಡಿದರು.
  ಇದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿಗಳು ಮುಂದಿನ ಸಚಿವ ಸಂಪುಟದಲ್ಲಿ ಚರ್ಚಿಸಿ ಅಂಗವಿಕಲರಿಗೆ ಶೇಕಡಾ ೩ ರಷ್ಟು ಬಡ್ತಿ ಮಿಸಲಾತಿಯ ಆದೇಶವನ್ನು ಶೀಘ್ರವೇ ಜಾರಿಗೊಳಿಸುವುದಾಗಿ ಭರವಸೆ ನೀಡಿದರು.
ಈ ಸಂಧರ್ಭದಲ್ಲಿ ಸಚಿವರಾದ ಶಿವರಾಜತಂಗಡಗಿ,ಮಹದೇವಪ್ರಸಾದ,ಹೆಚ್.ಆಜಂನೇಯ,ಕೊಪ್ಪಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಹಿ.ಪಂ.ಮಾಜಿ ಸದಸ್ಯರಾದ ಪ್ರಸನ್ನ ಗಡದ,ನಗರಸಭೆಯ ಸದಸ್ಯರಾದ ಮುತ್ತುರಾಜ ಕುಷ್ಟುಗಿ,ಸಂಘದ ರಾಜ್ಯ ಸಂಚಾಲಕರಾದ ಭರಮಪ್ಪ  ಕಟ್ಟಿಮನಿ ಮುಂತಾದವರು ಹಾಜರಿದ್ದರು.

Leave a Reply

Top