ಬಿಜೆಪಿ ಪ್ರಚಾರ ೨೯ ಶುಕ್ರವಾರ ಆರಂಭ

 ಕೊಪ್ಪಳ,೨೮ : ವಿಧಾನಸಭೆ ಚುನಾವಣೆ ಪ್ರಯುಕ್ತ, ಕೊಪ್ಪಳ ವಿಧಾನಸಭಾ ಕ್ಷೇತ್ರದ ಬಿ.ಜೆ.ಪಿ. ಪಕ್ಷದ ಪ್ರಚಾರ ಅಧಿಕೃತವಾಗಿ ಇಂದು ದಿ. ೨೯-೦೩-೨೦೧೩, ಶುಕ್ರವಾರ, ಬೆಳಿಗ್ಗೆ ೧೦.೦೦ ಗಂಟೆಗೆ, ಸ್ಟೇಷನ್ ರಸ್ತೆಯ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಪೂಜೆ ಸಲ್ಲಿಸುವುದರ ಮೂಲಕ ಆರಂಭವಾಗಲಿದೆ.
ಈ ಚಾಲನಾ ಸಮಾರಂಭದಲ್ಲಿ ಜಿಲ್ಲಾಧ್ಯಕ್ಷರಾದ ಹೆಚ್.ಗಿರೇಗೌಡ್ರ, ಲೋಕಸಭಾ ಸದಸ್ಯರಾದ ಶಿವರಾಮೆಗೌಡ್ರ, ವಿಧಾನ ಪರಿಷತ್ ಸದಸ್ಯರಾದ ಹಾಲಪ್ಪ ಆಚಾರ, ವಿಧಾನಸಭೆ ಅಭ್ಯರ್ಥಿಯಾದ ಸಂಗಣ್ಣ ಕರಡಿ, ನಗರ ಪ್ರಾಧಿಕಾರ ಅದ್ಯಕ್ಷರಾದ ಅಪ್ಪಣ್ಣ ಪದಕಿ, ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ಹನುಮಂತಪ್ಪ ಅಂಗಡಿ, ಬಿಜೆಪಿ ನಗರ ಅಧ್ಯಕ್ಷರಾದ ಸದಾಶಿವಯ್ಯ ಹಿರೇಮಠ, ಗ್ರಾಮಾಂತರ ಘಟಕದ ಅದ್ಯಕ್ಷರಾದ ಪಕೀರಪ್ಪ ಆರೇರ್, ಟಿ.ಎ.ಪಿ.ಸಿ.ಎಂ. ಅದ್ಯಕ್ಷರಾದ ಸಿ.ಎನ್.ಪಾಟೀಲ್, ಎ.ಪಿ.ಎಂ.ಸಿ.ಅದ್ಯಕ್ಷರಾದ ಡಿ.ಮಲ್ಲಣ್ಣ, ಪಿ.ಎಲ್.ಡಿ.ಬ್ಯಾಂಕ ಅಧ್ಯಕ್ಷರಾದ ವಿರೇಶ ಲಕ್ಷಾಣಿ, ಮುಖಂಡರಾದ ಸಂಗಪ್ಪ ವಕ್ಕಳದ, ಡಾ|| ಕೆ.ಜಿ.ಕುಲಕರ್ಣಿ, ರಾಘವೇಂದ್ರ ಪಾನಗಂಟಿ, ವಿ.ಎಂ.ಭೂಸನೂರಮಠ, ಪೀರಾ ಹುಸೇನ ಹೊಸಳ್ಳಿ, ನಗರಸಭೆ ಸದಸ್ಯರು, ತಾಲೂಕ ಪಂಚಾಯತ ಸದಸ್ಯರು, ಗ್ರಾಮ ಪಂಚಾಯತ ಅಧ್ಯಕ್ಷರು, ಸದಸ್ಯರು, ಎಲ್ಲಾ ಮೋರ್ಚಾಗಳ ಅದ್ಯಕ್ಷರು ಮತ್ತು ಪದಾಧಿಕಾರಿಗಳು, ಭೂತ್ ಮಟ್ಟದ ಕಾರ್ಯಕರ್ತರು, ಹಾಗೂ ಮುಖಂಡರು ಪಾಲ್ಗೊಳ್ಳುವರೆಂದು, ಬಿಜೆಪಿ ವಕ್ತಾರ ಹಾಲೇಶ ಕಂದಾರಿ  ಳಿಸಿದ್ದಾರೆ.
Please follow and like us:
error