ಕಂಠಿ ಜೆ.ಡಿ.ಎಸ್ ಪಕ್ಷಕ್ಕೆ ವಿಧಾಯ

ಕೊಪ್ಪಳ : ದಿ ೧೪- ರಂದು ಸೈಯದ್ ನಾಸೀರ್ ಕಂಠಿ ಜಿಲ್ಲಾ ಯುವ ಘಟಕದ ಜೆ.ಡಿ.ಎಸ್ ಉಪಾಧ್ಯಕ್ಷರಾದ ಇವರು ತಮ್ಮ ಬೆಂಬಲಿಗರೊಂದಿಗೆ ಜೆ.ಡಿ.ಎಸ್ ಪಕ್ಷವನ್ನು ತೋರೆದು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ರಾಘವೆಂದ್ರ ಹಿಟ್ನಾಳವರ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೆರ್ಪಡೆಗೊಂಡರು ಜೆ.ಡಿ.ಎಸ್.ಪಕ್ಷದಲ್ಲಿ ಉಸಿರುಗಟ್ಟುವ ವಾತಾವರಣ ಇರುವುದರಿಂದ ಸಂಘಟನೆ ಅಸಾಧ್ಯದ ಮಾತಾಗಿದೆ. ಇನ್ನೂ ಗೆಲವು ಕೇವಲ ಮರಿಚಿಕೆ ಮಾತ್ರ ಆದ್ದರಿಂದ ನಾವು ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತಗಳನ್ನು ಒಪ್ಪಿಕೊಂಡು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದೆವೆ.
ರಾಜಾ ಹುಸೇನ ತುಪ್ಪದ, ಖಾಜಾಹುಸೇನಿ ರೇವಡಿ, ಖಾಜಾ ಆದೋನಿ, ಹುಸೇನ ಸಾಬ ನದಾಫ, ಅಶೋಕ ದಾಸರ, ಯಲ್ಲಪ್ಪ ಮಡಿವಾಳರ, ಚಂದ್ರು, ಪ್ರಾಣೇಶ ಪಾಟೀಲ, ಅಶೋಕ ಪಾಟೀಲ, ಹನುಮಪ್ಪ ಹಾಲವರ್ತಿ, ಅಲ್ಯಾಳಪ್ಪ ಹಾಲವರ್ತಿ, ರಾಜಪ್ಪ ಪೆಂಟರ್, ನಜೀರಸಾಬ ಉದಿನಕಡ್ಡಿ, ಅಸ್ಲಂ ಪಾಷಾ ದಫೇದಾರ, ಇಬ್ರಾಹಿಂ ರೇವಡಿ, ಕರಿಮ ಆದೋನಿ, ಇನ್ನೂ ಅನೇಕರು, ಜೆ.ಡಿ.ಎಸ್ ತೋರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು ಎಂದು ಪಕ್ಷದ ವಕ್ತಾರ ಅಕ್ಬರಪಾಷಾ ಪಲ್ಟನ್ ತಿಳಿಸಿದ್ದಾರೆ.

Related posts

Leave a Comment