ಕರಡಿ ಸೋಲು ಖಚಿತ ಅನ್ಸಾರಿ

ಕೊಪ್ಪಳ : ದಿ: ೨೨ ನಗರದ ಪಲ್ಟನ ಓಣಿಯಲ್ಲಿ ಕಾಂಗ್ರೆಸ ಪಕ್ಷದ ಅಭ್ಯರ್ಥಿ ಪರ ಮತ ಯಾಚನೆಮಾಡಿ ಮಾತನಾಡಿದ ಮಾಜಿ ಸಚಿವ ಅನ್ಸಾರಿ ಸ್ವಜನ ಪಕ್ಷೀಪಾತಿಯಾದ ಹಾಗೂ ಸಮಯ ಸಾದಕನಾದ ಕರಡಿ ಸಂಗಣ್ಣನನ್ನು ಉಪಚುನಾವಣೆ ಯಲ್ಲಿ  ಸೊಲಿಸುವ ಮೂಲಕ ಕೊಪ್ಪಳಕ್ಷೇತ್ರಸ ಮತದಾರರು ನಿಷ್ಠೆಯ ತತ್ವವನ್ನು ಈ ನಾಡಿಗೆ ಕಾಂಗ್ರೆಸ ಪಕ್ಷ ಗೆಲ್ಲಿಸುವ ಮೂಲಕ ತಿಳಿಹೇಳಲಿದ್ದಾರೆ. ಕರಡಿಯ ಬಿಜೆಪಿ ಪ್ರವೇಶದಿಂದ ಆ ಪಕ್ಷ ನೆಲಕಚ್ಚುವದಕ್ಕೆ  ಶುರುವಾಗಿದೆ.  ಸಂಗಣ್ಣ ಯಾವ ಪಕ್ಷ ಸೇರುತ್ತಾನೆಯೋ ಆ ಪಕ್ಷದ ನಾಯಕರಿಗೆ ಉಳಿಗಾಲವಿಲ್ಲ ಈಗಾಗಲೇ ಮಾಜಿ ಮುಖ್ಯಮಂತ್ರಿ ಕಟಕಟೆಯಲ್ಲಿ ನಿಂತಿದ್ದಾನೆ ಇನ್ನು ಅನೇಕ ಮಂತ್ರಿಗಳು ಕಾರಾಗ್ರಹದ ಅತಿಥಿಗಳಾಗಿದ್ದಾರೆ ಇನ್ನೂ ಯಾರ್‍ಯಾರಿಗೆ ಯಾವ ಗತಿಬರಲಿದೆಯೋ ಆ ದೇವರೆ ಬಲ್ಲವೆಂದು ಸಂಗಣ್ಣ ನ ವಿರುದ್ದಕಿಡಿ ಕಾರಿದರು. ಈ ಸಂದರ್ಭದಲ್ಲಿ ಮಾಜಿ ಶಾಸಕ ಹಸೇನಸಾಬ್ ದೋಟಿಹಾಳ, ಜಾಕಿರ ಹುಸೇನ ಕಿಲ್ಲೇಸಾರ, ವಕ್ತಾರ ಅಕ್ಬರಪಾಷ ಪಲ್ಟನ, ಮುನೀರ ಶಿದ್ದಿಕಿ, ಅನ್ವರ ಕವಲೂರ, ಮುಸ್ತಾಕ ಆಲುವಾಲಿ, ಶಿವಾನಂದ ಹೊದ್ಲೂರ, ಇಂಬ್ರಾಹಿಂ ಬವಾನಿ ಹಾಗೂ ಓಣಿಯ ಹಿರಿಯರು ಪಂಚಕಮೀಟಿಯ ಅಧ್ಯಕ್ಷರು ಸದಸ್ಯರು ಪಕ್ಷದ ಕಾರ್ಯಕತ್ರರು ಉಪಸ್ಥಿತರಿದ್ದರು. 
Please follow and like us:
error