You are here
Home > Koppal News > ಚುನಾವಣೆ : ಪ್ರಚಾರಕ್ಕೆ ಬಳಸುವ ಸಾಮಗ್ರಿಗಳಿಗೆ ವೆಚ್ಚದ ದರ ನಿಗದಿ

ಚುನಾವಣೆ : ಪ್ರಚಾರಕ್ಕೆ ಬಳಸುವ ಸಾಮಗ್ರಿಗಳಿಗೆ ವೆಚ್ಚದ ದರ ನಿಗದಿ

 ಲೋಕಸಭೆ ಸಾರ್ವತ್ರಿಕ ಚುನಾವಣೆ ಸಂದರ್ಭದಲ್ಲಿ ವಿವಿಧ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು ಚುನಾವಣಾ ಪ್ರಚಾರಕ್ಕಾಗಿ ಬಳಕೆ ಮಾಡುವ ವಿವಿಧ ಸಾಮಗ್ರಿ ಹಾಗೂ ಇತರೆ ವಿಷಯಗಳ ಚುನಾವಣಾ ವೆಚ್ಚದ ದರ ನಿಗದಿಪಡಿಸಿ ಕೊಪ್ಪಳ ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅಧಿಸೂಚನೆ ಹೊರಡಿಸಿದ್ದಾರೆ.
  ಚುನಾವಣೆ ಸಂದರ್ಭದಲ್ಲಿ ಲೌಡ್‌ಸ್ಪೀಕರ್, ಆಫ್ಲಿಫೈಯರ್, ಮೈಕ್‌ಗೆ ಪ್ರತಿ ದಿನಕ್ಕೆ ರೂ. ೮೦೦.  ೯*೧೮ ಅಳತೆಯ ಪೆಂಡಾಲ್‌ಗೆ ದಿನವೊಂದಕ್ಕೆ ರೂ. ೬೦೦, ಬಟ್ಟೆ ಬ್ಯಾನರ್ ಪ್ರತಿ ಚದುರಡಿಗೆ ರೂ.೧೨, ಬಟ್ಟೆಯ ಧ್ವಜ

ಪ್ರತಿ ಚದುರಡಿಗೆ ರೂ. ೨೫, ಪ್ಲಾಸ್ಟಿಕ್ ಧ್ವಜ- ರೂ. ೨೫, ಕರಪತ್ರ ಪ್ರತಿ ೧೦೦೦ ಪ್ರತಿಗಳಿಗೆ ಎ-೪ ಅಳತೆಗೆ ರೂ. ೮೫೦.  ಎ-೨ ಅಳತೆಗೆ ರೂ. ೧೭೦೦.  ಪೋಸ್ಟರ‍್ಸ್ ಎ-೩ ಅಳತೆ ಪ್ರತಿ ೧೦೦ ಪ್ರತಿಗೆ ರೂ. ೧೩೦೦.  ಪ್ರಚಾರ ಫಲಕ  ಪ್ರತಿ ಚದುರಡಿಗೆ ರೂ. ೩೦.  ಕಟೌಟ್ಸ್ (ಮರದ್ದು/ಬಟ್ಟೆ/ಪ್ಲಾಸ್ಟಿಕ್) ೧೦*೧೫ ಅಳತೆಗೆ ಪ್ರತಿ ದಿನಕ್ಕೆ ರೂ. ೧೨೫೦.  ವಿಡಿಯೋ ಕ್ಯಾಸೆಟ್ಸ್ ಪ್ರತಿ ದಿನಕ್ಕೆ ರೂ. ೨೫೦೦.  ಆಡಿಯೋ ಕ್ಯಾಸೆಟ್ಸ್ ದಿನಕ್ಕೆ ರೂ. ೧೫೦೦.  ಗೇಟ್ ನಿರ್ಮಾಣ- ೨೦೦೦.  ಆರ್ಚಸ್ ನಿರ್ಮಾಣ (೧೫*೧೦) ಅಳತೆ, ಪ್ರತಿದಿನಕ್ಕೆ- ರೂ. ೨೦೦೦.  ವಾಹನಗಳು ಪ್ರತಿದಿನದ ಬಾಡಿಗೆ ಜೀಪ್/ಟೆಂಪೋ/ಟ್ರಕರ್ ಇತ್ಯಾದಿ ರೂ. ೨೨೦೬.  ಸುಮೋ/ಕ್ವಾಲಿಸ್- ರೂ. ೨೦೦೦.  ಕಾರು- ೧೫೦೦.  ತ್ರಿಚಕ್ರ ವಾಹನ- ರೂ. ೫೦೦, ಸೈಕಲ್ ರಿಕ್ಷಾ- ರೂ. ೫೦೦,  ಮೋಟಾರ್ ಬೈಕ್- ರೂ. ೫೦೦ ಗಳ ದರ ನಿಗದಿಪಡಿಸಲಾಗಿದೆ.  ವಸತಿ ಗೃಹ/ಹೋಟೆಲ್ ದರ ಪ್ರತಿ ದಿನಕ್ಕೆ ಎ-ಕ್ಲಾಸ್ ಹೋಟೆಲ್ಸ್ ಡಬಲ್ ಎಸಿ ರೂಂ- ರೂ. ೩೫೦೦. ಸಿಂಗಲ್ ಎಸಿ ರೂಂ- ರೂ. ೧೬೦೦.  ಇತರೆ ವಸತಿ ಗೃಹ/ಹೋಟೆಲ್ ಡಬಲ್ ಎಸಿ ರೂಂ- ರೂ. ೧೫೦೦, ಡಬಲ್ ರೂಂ (ಎಸಿ ರಹಿತ)- ರೂ. ೯೦೦.  ಸಿಂಗಲ್ ಎ.ಸಿ. ರೂಂ- ರೂ. ೮೦೦.  ಸಿಂಗಲ್ ರೂಂ (ಎಸಿ ರಹಿತ)- ರೂ. ೬೦೦.  ವಾಹನ ಚಾಲಕರ ವೇತನ ಪ್ರತಿ ತಿಂಗಳಿಗೆ ರೂ. ೬೦೦೦.  ಪೀಠೋಪಕರಣಗಳು, ಚೇರ‍್ಸ್ (ಒಂದಕ್ಕೆ)- ರೂ. ೦೬.  ಸೊಫಾ (ಒಂದಕ್ಕೆ)- ರೂ. ೩೦೦.  ವ್ಯಕ್ತಿಯೊಬ್ಬರ ದಿನದ ಊಟದ ಖರ್ಚು ರೂ. ೬೦ ಗಳಂತೆ ದರಗಳನ್ನು ನಿಗದಿಪಡಿಸಲಾಗಿದೆ.  ರಾಜಕೀಯ ಪಕ್ಷ/ಅಭ್ಯರ್ಥಿಗಳ ಚುನಾವಣಾ ವೆಚ್ಚದ ಸಂದರ್ಭದಲ್ಲಿ ಇದೇ ದರ ನಿಗದಿಪಡಿಸಲಾಗುವುದು ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

Leave a Reply

Top