ಶಾಸಕ ರಾಘವೇಂದ್ರ ಹಿಟ್ನಾಳ ರವರಿಂದ ರೂ. ಮೊತ್ತ ೨ ಕೋಟಿ ಕಾಮಗಾರಿಗೆ ಭೂಮಿ ಪೂಜೆ

 

ಕ್ಷೇತ್ರದ ಹಿರೇಸಿಂದೋಗಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಾದ ಮಂಗಳಾಪೂರು, ಹೊರತಟ್‌ನಾಳ, ಗುನ್ನಳ್ಳಿ, ಜಿಕ್ಕಸಿಂದೋಗಿ, ಹಿರೇಸಿಂದೋಗಿ, ಕಾಟ್ರಳ್ಳಿ, ಕೋಳೂರು, ಹಲಗೇರಿ, ದದೇಗಲ್ ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆ, ಹೆಚ್.ಕೆ.ಆರ್.ಡಿ.ಬಿ ಹಾಗೂ ಸಮಾಜ ಕಲ್ಯಾಣ ಇಲಾಖೆ ಅನುದಾನದ ಅಡಿಯಲ್ಲಿ ರೂ ೨ ಕೋಟಿಗಳ ಸಿ.ಸಿ.ರಸ್ತೆ, ಅಂಗನವಾಡಿ ಕಟ್ಟಡ, ಹಾಗೂ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿದ ಶಾಸಕರು ಕೊಪ್ಪಳ ಕ್ಷೇತ್ರದ ಎಲ್ಲಾ ಗ್ರಾಮಗಳಿಗೆ ಹೆಚ್ಚಿನ ಅನುದಾನ ಮಂಜೂರು ಮಾಡಿಸಿ ಗ್ರಾಮಗಳ ಸಂಪೂರ್ಣ ಅಭಿವೃದ್ಧಿ ಕೈಗೊಳ್ಳುವೇನು ಗ್ರಾಮಗಳ ಸ್ವಚ್ಚತೆಗೆ ಹೆಚ್ಚಿನ ಒತ್ತುಕೊಟ್ಟು ಪ್ರತೀ ಗ್ರಾಮಗಳಲ್ಲಿ ವ್ಯಯಕ್ತಿಕ ಶೌಚಾಯಲ, ಗ್ರಾಮೀಣ ಆರೋಗ್ಯ ಕೇಂದ್ರ, ಶಾಲಾಕೊಠಡಿಗಳನ್ನು ಮಂಜೂರು ಮಾಡಿ ಗ್ರಾಮಗಳ  ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುವೇನು. ಪ್ರತಿ ಗ್ರಾಮಕ್ಕ ನನ್ನ ಅಧಿಕಾರವದಿಯಲ್ಲಿ ಎಲ್ಲ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಕ್ಷೇತ್ರದ ಅಭಿವೃದ್ಧಿಯೇ ನನ್ನ  ಕರ್ತವ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ಕೆ.ಎಮ್.ಸಯ್ಯದ್, ಈಶಪ್ಪ ಮಾದಿನೂರು, ಹನುಮಂತಪ್ಪ ಗಡ್ಡಿ, ಹನುಮರೆಡ್ಡಿ ಹಂಗನಕಟ್ಟಿ, ಕೇಶವ ರೆಡ್ಡಿ, ಗಾಳೆಪ್ಪ ಪೂಜಾರ, ಶಂಕ್ರಪ್ಪ ಅಂಗಡಿ, ನಿಂಗಪ್ಪ ಯತ್ನಟ್ಟಿ, ಕಾಟನ್ ಪಾಷಾ, ಮಾನ್ವಿಪಾಷಾ, ಕೋಟೇಶ ತಳವಾರ, ಹುಸ್ಸೇನ್ ಪೀರಾ ಮುಜಾವರ, ದವಲತ್ ಸಾಬ್ ಮುಜಾವರ, ದೇವೆಂದ್ರಪ್ಪ ಕೂಳೂರು, ಪ್ರಭು ಸಿಂದೋಗಿ, ಅಂದಾನಯ್ಯ ಸ್ವಾಮಿ, ಗುಡದಪ್ಪ ಹಲಗೇರಿ, ಹನುಮಂತ ಹಳ್ಳಿಕೇರಿ, ಕೆ.ಡಿ.ಹಳ್ಳಿಕೇರಿ, ಶಿವಕುಮಾರ ಹಲಗೇರಿ, ಗ್ರಾಮಪಂಚಾಯತಿಯ ಅಧ್ಯಕ್ಷರು, ಸದಸ್ಯರು,ಅಭಿಯಂತರರಾದ ಪೋಬಲನ, ಗುತ್ತಿಗೆದಾರರಾದ ಕಾಶಿನಾಥ ರೆಡ್ಡಿ ಅವಾಜಿ, ಹಾಗೂ ನಿರ್ಮೀತಿ ಕೇಂದ್ರದ ಅಭಿಯಂತರರಾದ ಮಹದೇವಪ್ಪ ಉಪಸ್ಥಿತರಿದ್ದರು.

Leave a Reply