ಯಶಸ್ವಿ ಉದ್ಯೋಗ ಮೇಳ

ಕೊಪ್ಪಳ : ನಗರದ ಅರಿಹಂತ ಕಂಪ್ಯೂಟರ್ ಮತ್ತು ಎಸ್ ಎಸ್ ಎಜುಕೇಷನ್ ಸೆಂಟರ್ , ಎಂಎಸ್ ಡಿಪಿ ಕೌಶಲ್ಯ ಯೋಜನೆಯಡಿಯಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಉದ್ಯೋಗ ಮೇಳ ಯಶಸ್ವಿಯಾಗಿ ಜರುಗಿತು. 
            ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ  ತಾಲೂಕ ಬಿಸಿಎಂ ಅಧಿಕಾರಿ ಎ.ಎಸ್.ಜಂಬಣ್ಣ  ಉದ್ಯೋಗ ಮೇಳ ಮತ್ತು ಸರಕಾರಿ ಯೋಜನೆಗಳ ಕುರಿತು ಮಾತನಾಡಿದರು. ಮೊಬೈಲ್ ಅಂಗಡಿ, ಎಲೆಕ್ಟ್ರಾನಿಕ್ಸ್ ,ಅಟೋಮೊಬೈಲ್,ಶಾಲೆ, ಕಂಪ್ಯೂಟರ್ ತರಬೇತಿ ಕೇಂದ್ರಗಳವರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದರು. ಎಲ್ಲ ವಿದ್ಯಾರ್ಥಿಗಳಿಗೆ ಸಂದರ್ಶನ ಏರ್ಪಡಿಸಲಾಗಿತ್ತು. ಕೆಲವು ವಿದ್ಯಾರ್ಥಿಗಳು ಕೆಲಸಕ್ಕೆ ಆಯ್ಕೆಯಾದರು.  ಶಿಕ್ಷಣ, ತಾಂತ್ರಿಕತೆ ಮತ್ತು  ಪ್ರಾಮುಖ್ಯತೆ, ಇಂಟರ್‌ವ್ಯೂ ನಲ್ಲಿ ಭಾಗವಹಿಸುವದು ಹೇಗೆ ಎನ್ನುವುದರ ಕುರಿತು ಶಾನಬಾಗ, ವೆಂಕಟೇಶ ದೇಸಾಯಿ ಹಾಗೂ ಸಿರಾಜ್ ಬಿಸರಳ್ಳಿ ಮಾತನಾಡಿದರು. ಈ ಸಂದರ್ಭದಲ್ಲಿ  ಲಲಿತ್ ಜೈನ್, ಯೆಜ್ದಾನಿ ಖಾದ್ರಿ ಸೇರಿದಂತೆ ಇತರರು ಉಪಸ್ಥಿತರಿದ್ದರು. 
Please follow and like us:
error