fbpx

ಶ್ರೀಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ವಿದ್ಯಾರ್ಥಿಗಳಿಂದ ರಕ್ತದಾನ ಶಿಬಿರ

ಕೊಪ್ಪಳ : ನಗರದ ಶ್ರೀಗವಿಮಠದಲ್ಲಿ  ದಿನಾಂಕ ೨೩-೦೩-೨೦೧೫ ರಂದು ಸೋಮವಾರ ಜರುಗುವ ಶ್ರೀಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ರಕ್ತದಾನ ಶಿಬಿರ ಜರುಗಿತು. ಬೆಳಿಗ್ಗೆ ೯ ಗಂಟೆಯಿಂದ ಮದ್ಯಾಹ್ನ ೪ ಗಂಟೆಯವರೆಗೆ  ಜರುಗಿದ ಈ ಶಿಬಿರದಲ್ಲಿ ಶ್ರೀಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ೧೫೦ ವಿದ್ಯಾರ್ಥಿಗಳು, ಶ್ರೀಗವಿಸಿದ್ಧೇಶ್ವರ ಡಿ.ಇಡಿ ಮತ್ತು ಬಿ.ಇಡಿ ಕಾಲೇಜಿನ ೧೦೦ ಕ್ಕಿಂತಲೂ ಹೆಚ್ಚು ವಿದ್ಯಾರ್ಥಿಗಳು ರಕ್ತದಾನ ಮಾಡಿದರು.  
                    ಪ್ರಸ್ತುತ ದಿನಮಾನಗಳಲ್ಲಿ ರಾಜ್ಯಾಧ್ಯಾಂತ ರಕ್ತದ ಕೊರತೆ ಹೆಚ್ಚಾಗುತ್ತಿರುವದನ್ನು ಗಮನದಲ್ಲಿಟ್ಟುಕೊಂಡು ಈ ಶಿಬಿರವನ್ನು ಶ್ರೀಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ಎನ್.ಎಸ್.ಎಸ್ ಘಟಕ ಈ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ ಎಂದು ಎನ್.ಎಸ್.ಎಸ್ ಆಧಿಕಾರಿ ಡಾ ಶಿರೂರಮಠ, ಪ್ರಾಚಾರ್ಯ  ಡಾ.ಬಸವರಾಜ ಸವಡಿ  ತಿಳಿಸಿದ್ದಾರೆ.
Please follow and like us:
error

Leave a Reply

error: Content is protected !!