ಕಿಷ್ಕಿಂದ ನಗರ ಸಾರಿಗೆ ದರ ಪರಿಷ್ಕರಣೆ

  ಕೊಪ್ಪಳ ನಗರ ಸಾರಿಗೆಯಲ್ಲಿ ಪ್ರಯಾಣಿಕರನ್ನು ಆಕರ್ಷಿಸುವ ದೃಷ್ಟಿಯಿಂದ, ಸಾರಿಗೆಯ ದರದಲ್ಲಿ ಪ್ರೋತ್ಸಾಹದಾಯಕ ದರವನ್ನು ಅಳವಡಿಸಲು ನಿರ್ಧರಿಸಲಾಗಿದ್ದು, ಅದರಂತೆ ನಗರದ ಕಿಷ್ಕಿಂದ ನಗರ ಸಾರಿಗೆ ದರವನ್ನು ಪರಿಷ್ಕರಿಸಲಾಗಿದೆ.
  ಈ.ಕ.ರ.ಸಾ.ಸಂಸ್ಥೆಯ ಗುಲಬರ್ಗಾದ ವ್ಯವಸ್ಥಾಪಕ ನಿರ್ದೇಶಕರ ಸೂಚನೆಯ ಮೇರೆಗೆ ನಗರ ಸಾರಿಗೆ ದರವನ್ನು ಪರಿಷ್ಕರಿಸಲಾಗಿದ್ದು, ಒಂದನೇ ಹಂತಕ್ಕೆ ರೂ. ೦೩, ಎರಡನೇ ಹಂತಕ್ಕೆ ರೂ. ೦೪ ಹಾಗೂ ಉಳಿದ ಹಂತಗಳಿಗೆ ರೂ. ೦೫ ರಂತೆ ದರ ನಿಗದಿಪಡಿಸಲಾಗಿದೆ ಎಂದು ಸಾರಿಗೆ ಸಂಸ್ಥೆಯ ಕೊಪ್ಪಳ ವಿಭಾಗೀಯ ನಿಯಂತ್ರಣಾಧಿಕಾರಿಗಳು ತಿಳಿಸಿದ್ದಾರೆ.

Leave a Reply