ಕೊಪ್ಪಳ:ವನಮಹೋತ್ಸವ ಕಾರ್ಯಕ್ರಮ

ಕೊಪ್ಪಳ : ತಾಲೂಕಿನ ಬೈರಾಪೂರ ಗ್ರಾಮದಲ್ಲಿ ದಿನಾಂಕ ೨೩-೦೭-೨೦೧೧ ರಂದು ಶ್ರೀರಾಮ ದೇವಸ್ಥಾನ ನ ಟ್ರಸ್ಟ್ ಬೈರಾಪೂರ ಹಾಗೂ ಶ್ರೀರಾಧಾಕೃಷ್ಣನ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಕಲ್ಯಾಣ ಸಂಸ್ಥೆ ಚಿಕ್ಕಮ್ಯಾಗೇರಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಪ್ರಕೃತಿಪೂಜೆ (ವನಮಹೋತ್ಸವ) ಹಾಗೂ ಗುರುಪೂಜೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ಕೊಪ್ಪಳ ಶ್ರೀರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಶ್ರೀಚೈತನ್ಯಾನಂದ ಸ್ವಾಮಿಜಿ ವಹಿಸಿಕೊಳ್ಳುವರು. ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಸಂಗಣ್ಣ ಕರಡಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು.
ಮಾಜಿ ಶಾಸಕರಾದ ಕೆ.ಬಸವರಾಜ ಹಿಟ್ನಾಳ, ಜೆಡಿಎಸ್ ಮುಖಂಡ ಪ್ರದೀಪ.ವಿ.ಮಾಲಿಪಾಟೀಲ್, ಮಾಜಿ ಜಿ.ಪಂ.ಉಪಾಧ್ಯಕ್ಷ ಶಿವಶಂಕರರಾವ್ ದೇಸಾಯಿ ಅವರು ಸಸಿನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡುವರು.
ಹೊಸಪೆಟೆ ಕ್ಷೇತ್ರ ಶಿಕ್ಷಣಾಧಿಕಾರಿ ಎಲ್.ಡಿ.ಜೋಷಿ, ಅಳವಂಡಿ ಪ್ರಗತಿ ಗ್ರಾಮೀಣ ಬ್ಯಾಂಕನ ಶಾಖಾಧಿಕಾರಿ ಲಿಂಗಬಸಯ್ಯ ಚನ್ನಒಡೆಯರಮಠ, ಎಂ.ಎಲ್.ಜೋಷಿ ಅವರನ್ನು ಸನ್ಮಾನಿಸಲಾಗುವದು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿ.ಪಂ ಸದಸ್ಯರಾದ ನಾಡಗೌಡ ಮಾಲಿಪಾಟೀಲ್ ಅವರು ವಹಿಸಿಕೊಳ್ಳುವರು. ಮುಖ್ಯ ಅತಿಥಿಗಳಾಗಿ ವಿನೂತನ ಶಿಕ್ಷಣ ಸೆವಾ ಸಂಸ್ಥೆಯ ಸಂಸ್ಥಾಪಕರಾದ ಸಿದ್ದಲಿಂಗಯ್ಯ ಹಿರೇಮಠ, ಜೆಡಿಎಸ್ ಮುಖಂಡ ಗೊಣೇಶ ಉಪ್ಪಾರ, ತಾ.ಪಂ.ಅಧ್ಯಕ್ಷ ಅಮರೇಶ ಉಪಲಾಪೂರ, ತಾ.ಪಂ.ಸದಸ್ಯರಾದ ಮುದ್ದವ್ವ ಕರಡಿ, ವಿರೇಶ ಸಜ್ಜನ, ಮಾಜಿ ತಾ.ಪಂ. ಸದಸ್ಯರಾದ ಬಸವರಡ್ಡೆಪ್ಪ ಹಳ್ಳಿಕೇರಿ, ಯಲ್ಲಪ್ಪ ಜೀರ,ಚಿಕ್ಕಮ್ಯಾಗೇರಿ ಮಾಜಿ ತಾ.ಪಂ ಸದಸ್ಯ ಸುಧಾಕರರಾವ್ ದೇಸಾಯಿ, ಬೊಚನಹಳ್ಳಿ ಗ್ರಾ.ಪಂ.ಅಧ್ಯಕ್ಷ ಸಿದ್ದಪ್ಪ ಹಳ್ಳಿ, ಅಳವಂಡಿ ಗ್ರಾ.ಪಂ.ಅಧ್ಯಕ್ಷೆ ಸುನಂದಮ್ಮ ಗದ್ದಿಕೇರಿ, ಹಟ್ಟಿ ಗ್ರಾ.ಪಂ.ಅಧ್ಯಕ್ಷ ತೋಟಪ್ಪ ಸಿಂಟ್ರಿ, ಚಿಕ್ಕಮ್ಯಾಗೇರಿ ಗ್ರಾ.ಪಂ.ಅಧ್ಯಕ್ಷ ತಿರುಣೆಪ್ಪ ಕರಮುಡಿ, ಗ್ರಾ.ಪಂ.ಸದಸ್ಯರಾದ ಬಸಯ್ಯ ಸಸಿ, ಹುಲಿಗೆವ್ವ ವಾಲಿಕಾರ, ಯಲ್ಲಪ್ಪ ಮುಕ್ಕಣ್ಣವರ, ಮಾಜಿ ಗ್ರಾ.ಪಂ.ಅಧ್ಯಕ್ಷ ಅಡಿವೆಪ್ಪ ರಾಟಿ,ಮಾಜಿ ಗ್ರಾ.ಪಂ.ಉಪಾಧ್ಯಕ್ಷ ಹನಮಂತಪ್ಪ ಸಂಗಣ್ಣವರ, ಮಾಜಿ ಗ್ರಾ.ಪಂ.ಸದಸ್ಯರಾದ ಸಿದ್ದಲಿಂಗಪ್ಪ ಹೊಳೆಯಾಚೆ, ಹನಮಂತಪ್ಪ ಅವೊಜಿ, ಬಾಳಮ್ಮ ಸಿಂದೋಗಿ, ದೇವಪ್ಪ ಕಟ್ಟಿಮನಿ, ಮತ್ತು ಅಳವಂಡಿ ಎಸ್‌ಎಸ್ ಪಿಯು ಕಾಲೇಜಿನ ಪ್ರಾಚಾರ್ಯ ವಿ.ಸಿ.ಬೆನ್ನೂರ, ಉಪನ್ಯಾಸಕ ಎಂ.ಎಲ್.ಪೋಲಿಸ್ ಪಾಟೀಲ್ ಹಾಗೂ ಬೈರಾಪೂರ ಗ್ರಾಮದ ಸಮಸ್ತ ಗ್ರಾಮಸ್ತರು, ಸ್ಥಳಿಯ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಶಾಲೆಯ ಮುಖ್ಯೋಪಾದ್ಯಾಯರು ಮತ್ತು ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಶ್ರೀರಾಧಾಕೃಷ್ಣನ್ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಾಗೂ ಕಲ್ಯಾಣ ಸಂಸ್ಥೆಯ ಕಾರ್ಯದರ್ಶಿ ಶರಣಪ್ಪ.ವೈ.ಸಿಂದೋಗಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Please follow and like us:
error