ಸ್ವಚ್ಛತೆ ಕಾಪಾಡಲು ನಗರಸಭೆಯೊಂದಿಗೆ ಸಹಕರಿಸಿ : ಪಟೇಲ್

 ನಗರಸಭೆಯ ಉಪಾಧ್ಯಕ್ಷ ಅಮ್ಜದ್ ಪಟೇಲ್ ರವರು ಶುಕ್ರವಾರ ಮದ್ಯಾನ್ಹ ನಗರದ ಕೆಲ ವಾರ್ಡಗಳಿಗೆ ಅನಿರಿಕ್ಷಿತ ಭೇಟಿ ನೀಡಿ ಅಲ್ಲಿಯ ಸಮಸ್ಯಗಳನ್ನು ಸಾರ್ವಜನಿಕರಿಂದ ಆಲಿಸಿಕೊಳ್ಳವುದಲ್ಲದೆ ಸ್ವತಹ ಪರಿಶೀಲನಾಕಾರ್ಯ ನಡೆಸಿದರು.
    ನಗರದ ೨೧ವಾರ್ಡಿನ ವ್ಯಾಪ್ತಿಯಲ್ಲಿ ಹಸನ್ ರಸ್ತೆಬಳಿ ಒಂದುಕಡೆ ಕುಡಿಯುವನೀರು ಪೋಲಾಗುತ್ತಿರುವುದನ್ನು ಗಮನಿಸಿದ ಅವರು ತಕ್ಷಣ ಸಂಬಂಧಿಸಿದ ನಗರಸಭೆಯ ಸಿಬ್ಬಂದಿಗೆ ಸೂಚನೆ ನೀಡಿ ಪೋಲಾಗುತ್ತಿರುವ ನೀರನ್ನು ತಡೆ ಗಟ್ಟುವಲ್ಲಿ ಶ್ರಮಿಸಿದರು ಅಲ್ಲದೆ ಚರಂಡಿ ನೀರು ಚರಂಡಿಗೆ ಹೋಗದೆ ಒಂದೇಕಡೆ ನಿಂತಿರುವುದರಿಂದ ಇದರಿಂದ ಆಗುವ ತೊಂದರೆ ನಿವಾರಣೆಗೆ ಅಗತ್ಯ ಕ್ರಮ ಕೈಗೊಳ್ಳಲು ತಿಳಿಸಿದರು.
   ನೀರು- ಜೀವ,ಜಲ ಅಮೂಲ್ಯವಾದದ್ದು ಇದನ್ನು ಮಿತವಾಗಿ ಬಳಸಿ ಎಂದ ಅವರು ಎಲ್ಲಾ ರೋಗಗಳ ಮೂಲ ಅಸ್ವಚ್ಚತೆಯಾಗಿದ್ದು ಪ್ರತಿಯೊಬ್ಬರು ತಮ್ಮ ಮನೆಯ ಮುಂದಿನ ಪರಿಸರವನ್ನು ಸ್ವಚ್ಚವಾಗಿಡಬೇಕು ಮತ್ತು ಸ್ವಚ್ಚತೆ ಕಾಪಾಡಲು ನಗರಸಭೆಯೊಂದಿಗೆ ಸಹಕರಿಸಬೇಕೆಂದು ಜನತೆಗೆ ನಗರಸಭೆಯ ಉಪಾಧ್ಯಕ್ಷ ಅಮ್ಜದ್‌ಪಟೇಲ್ ಸಲಹೆ ನೀಡಿದರು. ಈ ಸಂದರ್ಭದಲ್ಲಿ ಅವರೊಂದಿಗೆ ಎಂ.ಡಿ.ಜಹೀರ ಅಲಿ ಉಪಸ್ಥಿತರಿದ್ದರು.   

Leave a Reply