You are here
Home > Koppal News > ನೂತನ ಉಪನಿರ್ದೇಶಕರಿಗೆ ಸ್ವಾಗತ ಹಾಗೂ ಸನ್ಮಾನ

ನೂತನ ಉಪನಿರ್ದೇಶಕರಿಗೆ ಸ್ವಾಗತ ಹಾಗೂ ಸನ್ಮಾನ

 ಸಾರ್ವಜನಿಕ ಶಿಕ್ಷಣ ಇಲಾಖೆಯ ನೂತನ ಉಪ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ಶ್ಯಾಮಸುಂದರರವರನ್ನು ರಾಜ್ಯ ಸರ್ಕಾರಿ ಅಂಗವಿಕಲ ನೌಕರರ ಸಂಘದ ವತಿಯಿಂದ ಸನ್ಮಾನಿಸುವುದರೊಂದಿಗೆ ಸ್ವಾಗತಿಸಲಾಯಿತು.
  ಈ ಸಂದರ್ಭದಲ್ಲಿ ನೂತನ ಉಪನಿರ್ದೇಶಕರಾದ ಶ್ಯಾಮಸುಂದರ ಮಾತನಾಡಿ,ಜಿಲ್ಲೆಯ ಸಮಗ್ರ ಶೈಕ್ಷಣಿಕ ಅಭಿವೃದ್ದಿಗಾಗಿ ಪ್ರಮಾಣಿಕ ಪ್ರಯತ್ನ ಮಾಡುತ್ತೆನೆ.ಜೊತೆಗೆ ಅಂಗವಿಕಲ ಶಿಕ್ಷಕರ ಸಮಸ್ಯೆಗಳನ್ನು ಶೀಘ್ರವೇ ಬಗೆಹರಿಸುತ್ತೆನೆ.ಇದಕ್ಕೆ ಎಲ್ಲರ ಸಹಕಾರವು ಕೂಡಾ ಅಗತ್ಯವಾಗಿದೆ ಎಂದು ಹೇಳಿದರು.
  ಈ ಸಂದರ್ಭದಲ್ಲಿ ಕೊಪ್ಪಳ ತಾಲೂಕ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉಮೇಶ ಪೂಜಾರ, ಸರ್ಕಾರಿ ಅಂಗವಿಕಲ ನೌಕರರ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಬೀರಪ್ಪ ಅಂಡಗಿ ಚಿಲವಾಡಗಿ,ಜಿಲ್ಲಾಧ್ಯಕ್ಷರಾದ ಚನ್ನಬಸಪ್ಪ ಬೆಲ್ಲದ,ಜಿಲ್ಲಾ ಸಂಘಟನಾ ಕಾರ್ಯದರ್ಶಿ ನಾಗಪ್ಪ ದೇವನಾಳ,ಕೊಪ್ಪಳ ತಾಲೂಕ ಅಧ್ಯಕ್ಷರಾದ ಅಂದಪ್ಪ ಬೋಳರೆಡ್ಡಿ,ಯಲಬುರ್ಗಾ ತಾಲೂಕ ಗೌರವಾಧ್ಯಕ್ಷರಾದ ಮರ್ದಾನಸಾಬ ಕೊತ್ವಾಲ್,ಪ್ರೌಢ ಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಬಿ.ಕುರಿ,ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕ ಅಧ್ಯಕ್ಷರಾದ ಮಂಜುನಾಥ.ಬಿ,ಮುಖ್ಯೋಪಾದ್ಯಾಯರಾದ ಪ್ರಭು ಬಳಿಗಾರ,ಶಿಕ್ಷಕರಾದ ಬೀಮಪ್ಪ ಹೂಗಾರ,ವಿರುಪಾಕ್ಷಪ್ಪ ಬಾಗೋಡಿ,ಗುರುರಾಜ ಕಟ್ಟಿ,ಮುಂತಾದವರು ಹಾಜರಿದ್ದರು.

Leave a Reply

Top