ಜೀತಕ್ಕೆ ಬಿಡದೆ ಪಾಲಕರು ಮಕ್ಕಳಿಗೆ ಶಾಲೆಗೆ ಕಳಿಸಬೇಕು- ವಿಠ್ಠಪ್ಪ ಗೋರಟ್ಲಿ.

 ಮಕ್ಕಳಿಗೆ ಸಣ್ಣ ವಯಸ್ಸಿನಲ್ಲಿ ದುಡಿಯಲು ಇಡುವದನ್ನು ನೆನಪಿಸಿಕೊಂಡರೆ ಮೈ ನಡುಗುತ್ತದೆ. ತಂದೆ-ತಾಯಿ ಆಜ್ಞಾನದಿಂದಲೂ ಮನೆಯ ಪರಸ್ಥಿತಿಯಿಂದಲೂ ಮಕ್ಕಳಿಗೆ ಜೀತಕ್ಕೆ ಬಿಡುತ್ತಾರೆ. ಜೀತಕ್ಕೆ ಬಿಡದೆ ಶಾಲೆಗಳಿಗೆ ಮಕ್ಕಳಿಗೆ ಕಳುಹಿಸುವ ಜವಾಬ್ದಾರಿ ಪಾಲಕರ ಮೇಲಿದೆ ಎಂದು ಹಿರಿಯ ಪತ್ರಕರ್ತ ವಿಠ್ಠಪ್ಪ ಗೋರಂಟ್ಲಿ ಹೇಳಿದರು. 
ಕೊಪ್ಪಳ ತಾಲೂಕಿನ ನರೇಗಲ್ಲ ಗ್ರಾಮದಲ್ಲಿ ಜೀತ ವಿಮುಕ್ತಿ ಕರ್ನಾಟಕ, ಜೀತದಾಳು ಮತ್ತು ಕೃಷಿ ಕಾರ್ಮಿಕ ಒಟ್ಟೂಕ ಹಾಗೂ ಜೀವಿಕ ಸಮತ ಸೇನೆ ಇವರ ಸಂಯುಕ್ತಾಶ್ರಯದಲ್ಲಿ ಜೀತ ಪದ್ದತಿ ರದ್ದತಿ ಜಾಗೃತಿ ದಿನಾಚರಣೆ ಕಾರ್ಯಕ್ರಮದಲ್ಲಿ ಬೆಂಕಿ ಹಚ್ಚುವ ಮೂಲಕ ಜೀತ ಅನಿಷ್ಟ ಪದ್ದತಿ ಸುಡುವ ಸಂಕೇತವಾಗಿ ಉದ್ಘಾಟಿಸಿ ಮಾತನಾಡುತ್ತಿದ್ದ ವಿಠ್ಠಪ್ಪ ಗೋರಂಟ್ಲಿ ಮುಂದುವರೆದು ಮಕ್ಕಳಿಗೆ ಜೀತ ಪದ್ದತಿಯಿಂದ ಬಿಡಿಸಿದರೆ ಅಲ್ಲು ಇಲ್ಲ, ಇಲ್ಲು ಇಲ್ಲ ಎಂಬಂತಹ ಪರಸ್ಥಿತಿ ನಿರ್ಮಾಣ ವಾಗುತ್ತದೆಂದು ಭಯಪಡಬೇಕಾಗಿಲ್ಲ. ಮಕ್ಕಳಿಗೆ ಹಾಸ್ಟೇಲ್ ಶಾಲೆಗಳಿವೆ. ಒಳ್ಳೆಯ ಶಿಕ್ಷಣ ನೀಡಿ. ಮಕ್ಕಳ ಭವಿಷ್ಯ ರೂಪಿಸಬೇಕು. ನಮ್ಮ ಮುಂದೆ ನಡೆಯುವ ಜೀತ ಪದ್ದತಿಯನ್ನು ವಿರೋಧಿಸಬೇಕೆಂದು ಹೇಳಿದರು. 
ಹೋರಾಟಗಾರ ಗಾಳೆಪ್ಪ ಕಡೆಮನಿ ಮಾತನಾಡಿ ಜೀತಕ್ಕೆ ಇರುವ ಜನರು ಅವರ ಮಕ್ಕಳಿಗೂ ದುಡಿಸಿಕೊಳ್ಳುವ ವರ್ಗ ಯಾವಾಗಲೂ ಜಾಗೃತಗೊಳ್ಳದಂತೆ ನೋಡಿಕೊಳ್ಳುತ್ತಾರೆ. ಹೀಗಾಗಿ ತಲೆತಲಾಂತರದಿಂದ ಜೀತ ಪದ್ದತಿ ನಡೆದುಕೊಂಡು ಬಂದಿದೆ ಎಂದು ಹೇಳಿದರು. 
ರೈತ ಪರ ಹೋರಾಟಗಾರ ಯುವ ವಕೀಲರಾದ ಮಂಜುನಾಥ ಚಕ್ರಸಾಲಿ ಮಾತನಾಡಿ ಕೇಂದ್ರ ಸರಕಾರ ೧೯೭೬ ರಲ್ಲಿ ಅನಿಷ್ಠ ಪದ್ದತಿ ಎಂದು ಜೀತ ಪದ್ದತಿಯನ್ನು ರದ್ದುಮಾಡಿದರು ಇನ್ನೂ ವರೆಗೂ ನಡೆಯುತ್ತಿರುವದು ಖೇದರ ಎಂದು ಹೇಳಿದರು.
ವಿಸ್ತಾರ ಸಂಸ್ಥೆಯ ಸಿ.ಬಿ.ಸಿ.ಸಂಯೋಜಕ ಸುಧಾಕರ ಮಾತನಾಡಿ ಜೀತಪದ್ದತಿ ಶತ-ಶತಮಾನಗಳಿಂದ ನಡೆದು ಬಂದಿದೆ. ಜೀತಕ್ಕೆ ದಲಿತ, ಹಿಂದುಳಿದ ಕೆಳ ಜಾತಿಯವರೇ ಬಲಿಯಾಗುತ್ತಾರೆ. ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವದೆ ಪರಿಹಾರ ಎಂದು ಹೇಳಿದರು. 
ಅಖಿಲ ಭಾರತ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಎ.ಗಫಾರ್ ಮಾತನಾಡಿ ಗ್ರಾಮೀಣ ಭಾಗದಲ್ಲಿ ಶ್ರೀಮಂತರ ಜಮೀನುಗಳಲ್ಲಿ ಕೃಷಿ ಕಾರ್ಮಿಕರು ಜೀತಪದ್ದತಿಯಲ್ಲಿ ತೋಡಗಿರುತ್ತಾರೆ. ಕೊಪ್ಪಳದ ಭಾಗ್ಯನಗರದಲ್ಲಿಯ ಕೂದಲು ಸಂಸ್ಕರಣೆ ಘಟಕಗಳಲ್ಲಿಯೂ ಜೀತಪದ್ದತಿ ಕಂಡುಬರುತ್ತದೆ ಎಂದು ಹೇಳಿದರು. 
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೀತ ವಿಮುಕ್ತಿ ಕರ್ನಾಟಕದ ಜಿಲ್ಲಾ ಸಂಚಾಲಕ ಬಸವರಾಜ ಪೂಜಾರ ಮಾತನಾಡಿದರು. ದಲಿತ ಸಂಘರ್ಷ ಸಮಿತಿ (ಸಂಯೋಜಕ) ಜಿಲ್ಲಾ ಸಂಚಾಲಕ ಮುದಕಪ್ಪ ಹೊಸಮನಿ ಮಾತನಾಡಿದರು. ಸ್ವಾಗತ ಜೀತ ವಿಮುಕ್ತಿ ಕರ್ನಾಟಕದ ತಾಲೂಕಾ ಸಂಚಾಲಕ ಲಿಂಗರಾಜ ಗಂಗಾವತಿ, ಪ್ರಸ್ತಾವಿಕ ಜಿಲ್ಲಾ ಜನಪರ ಜಾಗೃತ ವೇದಿಕೆಯ ಜಿಲ್ಲಾಧ್ಯಕ್ಷ ಮೈಲಪ್ಪ ಬಿಸರಹಳ್ಳಿ, ನಿರೂಪಣೆಯನ್ನು ವಿಸ್ತಾರ ಸಂಸ್ಥೆಯ ಸುಂಕಪ್ಪ ಮಿಸಿ, ವಂದರ್ನಾಪಣೆಯನ್ನು ಮಹಾಲಕ್ಷ್ಮೀ ಮಾಡಿದರು. 
  
Please follow and like us:

Leave a Reply