ಇಂದು ಕುರುಬರ ಓಣಿ ಶ್ರೀದುರ್ಗಾದೇವಿ ಜಾತ್ರಾ ಮಹೋತ್ಸವ.

ಕೊಪ್ಪಳ: ನಗರದ ಕುರಬರ ಓಣಿಯ ಶ್ರೀದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ದೇವಿಗೆ ಉಡಿ ತುಂಬುವ ಕಾರ್ಯಕ್ರಮವವು ಏ.೨೮ ರಂದು ಜರುಗುವುದು.ಬೆಳಗ್ಗೆ ಶ್ರೀದುರ್ಗಾದೇವಿ ಮೂರ್ತಿಗೆ ರುದ್ರಾಭಿಷೇಕ, ವಿವಿಧ ಫಲ ಪುಷ್ಪಗಳಿಂದ ಅಲಂಕರಿಸಿ ವಿಶೇಷವಾಗಿ ಪೂಜೆ ಸಲ್ಲಿಸಲಾಗುವುದು. ನಂತರ ಮಹಾ ಮಂಗಳಾರತಿ, ತೀರ್ಥ ಪ್ರಸಾದ ಜರುಗುವುದು. ಬೆಳಗ್ಗೆ ೧ ಗಂಟೆಗೆ ಹಾಲಮತ ಸಮಾಜದ ಕುಂಬ ಹೊತ್ತ ಮಹಿಳೆಯರಿಂದ ಶ್ರೀದುರ್ಗಾದೇವಿ ಭಾವಚಿತ್ರವನ್ನು ಸಕಲ ವಾಧ್ಯಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಗುವುದು. ಮಧ್ಯಾಹ್ನ ೧ ಗಂಟೆಗೆ ಸಾರ್ವಜನಿಕರಿಗಾಗಿ ಅನ್ನ ಸಂತರರ್ಪಣೆ ನೆಡೆಯುತ್ತದೆ. ಸಂಜೆ ೬ ಕ್ಕೆ ಡೊಳ್ಳು ಕುಣಿತ ಭಜನೆ ಇನ್ನಿತರ ಧರ್ಮಿಕ ಕಾರ್ಯಕ್ರಮಗಳು ನಡೆಯುತ್ತವೆ ಎಂದು ಹಾಲಮತ ಸಮಾಜದ ಮುಂಖಡರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply