ಗಂಗಾವತಿಯಲ್ಲಿ ವಿಶ್ವ ಪರಿಸರ ದಿನ ಆಚರಣೆ

 ಜಿಲ್ಲಾ ಜೈವಿಕ ಇಂಧನ ಮಾಹಿತಿ ಮತ್ತು ಪ್ರಾತ್ಯಕ್ಷಿಕೆ ಕೇಂದ್ರ ಕೃಷಿ ಸಂಶೋಧನಾ ಕೆಂದ್ರ, ಗಂಗಾವತಿ ಕೊಪ್ಪಳ ಜಿಲ್ಲೆ ಮತ್ತು ಕರ್ನಾಟಕ ರಾಜ್ಯ ಜೈವಿಕ ಇಂಧನ ಅಬಿವೃದ್ದಿ ಮಂಡಳಿ ಇವರ ಸಂಯುಕ್ತ ಆಶ್ರಯದಲ್ಲಿ   ಗಂಗಾವತಿಯ ಸರಕಾರಿ ಬಾಲಕರ ಪ್ರೌಢಶಾಲೆ ಆವರಣದಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಜೈವಿಕ ಇಂಧನದ ಕುರಿತು ಜಾಗೃತಿ ಮೂಡಿಸಲಾಯಿತು.  
     ಕಾರ್ಯಕ್ರಮವನ್ನು ಶಾಲೆಯ ಆವರಣದಲ್ಲಿ ಹೊಂಗೆ ಸಸಿಗಳನ್ನು ನೆಡುವ ಮೂಲಕ ಕೃಷಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ: ಬಿ.ಜಿ. ಮಸ್ತಾನರೆಡ್ಡಿ ಅವರು ಚಾಲನೆ ನೀಡಿದರು.
      ಈ ಸಂದರ್ಬದಲ್ಲಿ ಜೈವಿಕ ಇಂಧನದ ಕುರಿತು ಮಕ್ಕಳಿಗೆ ಚರ್ಚಾ ಸ್ಪರ್ದೆ ನಡೆಸಲಾಯಿತು ಮತ್ತು ಸ್ಪರ್ದೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು. ವಿಶೇಷ ಉಪನ್ಯಾಸಕರಾಗಿ ಪ್ರೋ.ಮೊಹ್ಮದ್ ಇಬ್ರಾಹಿಮ್ ಹಿರಿಯ ವಿಜ್ಞಾನಿಗಳು (ತಳಿಶಾಸ್ತ್ರ) ಇವರು ಪರಿಸರ ಸಂರಕ್ಷಣೆಯಲ್ಲಿ ಜೈವಿಕ ಇಂಧನ ಸಸ್ಯಗಳ ಪಾತ್ರ ಕುರಿತು ವಿಷಯ ಮಂಡಿಸಿದರು ಮತ್ತು ಸಂಯೋಜಕ ಡಾ: ಆನಂದ್ ಎಸ್ ಆರ್ ರವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ ಬರಿದಾಗುತ್ತಿರುವ ಪೆಟ್ರೋಲಿಯಮ್ ಉತ್ಪನ್ನಗಳ ಬದಲಾಗಿ ನಮ್ಮಲ್ಲೆ ದೊರೆಯುವಂತಹ ಹೊಂಗೆ, ಬೇವು ಮತ್ತು ಇತ್ಯಾದಿ ಬೀಜದಿಂದ ಎಣ್ಣೆ ತೆಗೆದು ಡೀಸೆಲ್ ಆಗಿ ಪರಿವರ್ತನೆ ಮಾಡುವದರಿಂದ ಪರಿಸರ ಮಾಲಿನ್ಯ ತಡೆಗಟ್ಟಬಹುದಲ್ಲದೆ ಹೊರ ದೇಶದಿಂದ ಅಮದು ಮಾಡಿಕೊಳ್ಳಲು ಭರಿಸುತ್ತಿರುವ ವೆಚ್ಚವನ್ನು ಕಡಿಮೆ ಮಾಡಿ ದೇಶದ ಆರ್ಥಿಕ ಪ್ರಗತಿಯನ್ನು ಸಾದಿಸಲು ಜೈವಿಕ ಇಂಧನದ ಪಾತ್ರ ಬಹುಮುಖ್ಯ ಎಂದು ಅರಿವು ಮೂಡಿಸಿದರು. ಶಾಲೆಯ ಉಪಪ್ರಾಚಾರ್ಯ ಯಲ್ಲಪ್ಪ ಹುಬ್ಬಳ್ಳಿಯವರು ಅಧ್ಯಕ್ಷತೆ ವಹಿಸಿದ್ದರು. ಸಹ ಶಿಕ್ಷಕ ಶಿವಪ್ಪ ಅರಳಿಯವರು ಸ್ವಾಗತಿಸಿದರು ಹಾಗೂ ನೀಲಗಂಗಮ್ಮರವರು ಕಾರ್ಯಕ್ರಮ ನಿರೂಪಿಸಿ ವೈಜ್ಞಾನಿಕ ಸಹಾಯಕ ಎಮ್.ಜಿ ನಾಯ್ಕ ಇವರು ವಂದಿಸಿದರು.

Related posts

Leave a Comment