ಮೊಹರಂ ರಜೆ ನ.೧೪ ಬದಲಾಗಿ ೧೫ ಕ್ಕೆ

 ರಾಜ್ಯ ವಕ್ಫ್ ಮಂಡಳಿ ಕೋರಿಕೆ ಮೇರೆಗೆ ಸರ್ಕಾರವು ಮೊಹರಂ ಆಚರಣೆಗೆ ಸಂಬಂಧಿಸಿದಂತೆ ನ.೧೪ ರ ಬದಲಿಗೆ ನ.೧೫ ರಂದು ಸಾರ್ವತ್ರಿಕ ರಜೆ ಘೋಷಣೆ ಮಾಡಿ ಮಂಗಳವಾರ ಸುತ್ತೋಲೆ ಹೊರಡಿಸಿದೆ. 
  ಮೊಹರಂ ಕಡೆ ದಿನದ ಆಚರಣೆಗೆ ಸರ್ಕಾರದ ರಜೆಗಳ ಪಟ್ಟಿಯಲ್ಲಿ ನ.೧೪ ಕ್ಕೆ ಸಾರ್ವತ್ರಿಕ ರಜೆ ಘೋಷಣೆ ಮಾಡಲಾಗಿತ್ತು, ಆದರೆ, ವಕ್ಫ್ ಮಂಡಳಿಯು ಮೊಹರಂ ಕಡೆ ದಿನವನ್ನು ನ.೧೫ ಕ್ಕೆ ಆಚರಿಸುತ್ತಿದ್ದು, ಸಾರ್ವತ್ರಿಕ ರಜೆಯನ್ನು ನ. ೧೫ ರಂದೇ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆದು ಕೋರಿದ  ಹಿನ್ನಲೆಯಲ್ಲಿ ಸರ್ಕಾರವು ಮೊಹರಂ ದಿನಾಚರಣೆಗೆ ನಿಗದಿಪಡಿಸಿದ್ದ ರಜಾ ದಿನದಲ್ಲಿ ಬದಲಾವಣೆ ಮಾಡಿ ಆದೇಶ ಹೊರಡಿಸಿದೆ. 
Please follow and like us:
error