ಶಿಕ್ಷಣ ಕ್ಷೇತ್ರವನ್ನೇ ಕಡೆಗಣಿಸಿದ ಎಚ್‌ಕೆಆರ್‌ಡಿಬಿ ನೀತಿ ಖಂಡಿಸಿ ಎಸ್.ಎಫ್.ಐ ಪ್ರತಿಭಟನೆ.

ಭಾರತ ವಿದ್ಯಾರ್ಥಿ ಫೆಡರೇಶನ್ ಜಿಲ್ಲಾ ಸಮಿತಿ ಈ ಮೂಲಕ ಹೈದ್ರಾಬಾದ್ ಕರ್ನಾಟಕ ಪ್ರದೇಶಾಭಿವೃದ್ದಿ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಎಲ್ಲಾ ಸದಸ್ಯರಿಗೂ ಪ್ರತಿಭಟನೆ ಮುಖಾಂತರ ಒತ್ತಾಯಿಸುವುದೇನೆಂದರೆ ಈ ವರೆಗೂ ಸರಕಾರವು  ಕ್ರಮವಾಗಿ ೨೦೧೩-೧೪ನೇ ಸಾಲಿನಲ್ಲಿ ೧೫೦ ಕೋಟಿ ರೂಗಳನ್ನು ೨೦೧೪-೧೫ ನೇ ಸಾಲಿನ ಬಜೆಟ್‌ನಲ್ಲಿ ೬೦೦ ಕೋಟಿ ರೂಗಳನ್ನು ಮತ್ತು ಗುಲ್ಬರ್ಗ ಸಚಿವ ಸಂಪುಟ ಸಭೆಯಲ್ಲಿ ೪೦೦ ಕೋಟಿಗಳನ್ನು ಮತ್ತು ೨೦೧೫-೧೬ ನೇ ಸಾಲಿನ ಬಜೆಟ್‌ನಲ್ಲಿ ೧೦೦೦ ಕೋಟಿ  ರೂಪಾಯಿಗಳ ಅನುದಾನವನ್ನು ನೀಡುವುದಾಗ ಘೋಷಣೆ ಮಾಡಲಾಗಿರುತ್ತದೆ. ಆದರೆ ಸರಕಾರವು ಇದವರೆಗೂ ಕೇವಲ ಅಂದಾಜು ೩೩೯ ಕೋಟಿ ರೂಪಾಯಿಗಳನ್ನು ಮಾತ್ರ ಬಿಡುಗಡೆಗೊಳಿಸಿರುತ್ತದೆ. ಅದರಲ್ಲಿ ಹೆಚ್.ಕೆ.ಆರ್.ಡಿ.ಬಿ ಪ್ರದೇಶಾಭಿವೃದ್ದಿ ಮಂಡಳಿಯ ವತಿಯಿಂದ ಕೇವಲ ಈ ವರೆಗೂ ೧೧೯ ಕೋಟಿ ರೂಪಾಯಿಗಳನ್ನು ಮಾತ್ರ ಖರ್ಚು ಮಾಡಿರುತ್ತದೆ. ಇನ್ನೂ ಅಂದಾಜು ೨೨೦ ಕೋಟಿ ರೂಪಾಯಿಗಳನ್ನು ಖರ್ಚು ಮಾಡುವಲ್ಲಿ ವಿಫಲಾವಾಗಿದೆ. ಆರು ಜಿಲ್ಲೆಗಳಲ್ಲಿ ಈಗಾಗಲೇ ಹಲವಾರು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆಗಳು ತುಂಬಿದ್ದರೂ ಜಿಲ್ಲೆಯ ಯಾವೊಬ್ಬ ಶಾಸಕರಿಗೂ ಅಥವಾ ಸಂಸದರಿಗೂ ಕಣ್ಣಿಗೆ ಕಾಣಿಸದಂತಾಗಿದೆ. ಸಮಿತಿ ಸದಸ್ಯರೂ ಕೇವಲ ನಾಮಮಾತ್ರಕ್ಕೆ ಸದಸ್ಯರಾಗಿದ್ದು ಯಾರೊಬ್ಬರೂ ಹೈದ್ರಾಬಾದ್ ಪ್ರದೇಶದ ಅಭಿವೃದ್ದಿ ಯೋಚನೆಯನ್ನೇ ಮಾಡಿದಂತಾಗಿಲ್ಲ. ಮುಂದುವರೆದು ಖರ್ಚು ಮಾಡಲಾದ ಅನುದಾನದ ಮೊತ್ತದಲ್ಲಿ ಕೇವಲ ನಾಮಮಾತ್ರಕ್ಕೆ ಶಿಕ್ಷಣ ಕ್ಷೇತ್ರಕ್ಕೆ ಅನುದಾನ ನೀಡಲಾಗಿದ್ದು ಇಲ್ಲಿನ ಶೈಕ್ಷಣಿಕ ಪ್ರಗತಿಯನ್ನೂ ಕನಸನಲ್ಲೂ ಯೋಚಿಸದಂತಾಗಿದೆ. ಶಿಕ್ಷಣವು ಸಮಾಜದ ಕಣ್ಣು ಇದ್ದಂತೆ, ಅದನ್ನು ಸಮರ್ಪಕವಾಗಿ ಪಡೆಯದಿದ್ದಲ್ಲ ಕಣ್ಣಿದ್ದೂ ಕುರುಡ ಸಮಾಜ ನಿರ್ಮಾಣವಾಗುತ್ತದೆ. ಸಮಾಜದ ಎಲ್ಲಾ ಅಭಿವೃದ್ದಿಗೆ ಬೆಳವಣಿಗೆಗೆ ಶಿಕ್ಷಣ ಮಹತ್ವದ ತಳಹದಿಯಾಗಿದೆ. ೬ ಜಿಲ್ಲೆಗಳ ಅದೆಷ್ಟೋ ಸರ್ಕಾರಿ ಶಾಲಾ ಕಾಲೇಜುಗಳು ಕಟ್ಟಡವಿಲ್ಲದೇ, ಗ್ರಂಥಾಲಯದಲ್ಲಿ ಪುಸ್ತಕಗಳಿಲ್ಲದೇ, ಪ್ರಯೋಗಾಲಯ ಸಾಮಾಗ್ರಿಗಳಿಲ್ಲದೇ, ಕಟ್ಟಡಗಳಿಲ್ಲದೇ ಕೊಳೆಯುತ್ತಿದ್ದರೂ ಶಾಸಕರು ಸಂಸದರು ಜಾಣ ಕುರುಡು ತೋರಿಸುತ್ತಿದ್ದಾರೆ. ಈ ವರೆಗೂ ಘೋಷಿತ ಅನುದಾನದ ಮೊತ್ತ ೨೧೫೦ ಕೋಟಿ ರೂ.ಗಳಾಗಿದ್ದು ಬಿಡುಗಡೆಗೊಂಡ ಅನುದಾನ ಮಾತ್ರ ೩೩೯ ಕೋಟಿ ರೂಪಾಯಿಗಳು, ಈ ಬಗ್ಗೆ ಯಾವೊಬ್ಬ ಸಮಿತಿ ಸದಸ್ಯರೂ ಚಕಾರ ಎತ್ತದೇ ಮೌನವಹಿಸುವುದರ ಜೊತೆಗೆ ಬಿಡುಗಡೆಗೊಂಡ ಅನುದಾನದ ಖರ್ಚುಗಳನ್ನೂ ಕೇವಲ ತಮ್ಮ ಬೆಂಬಲಿಗರನ್ನು ಗುತ್ತಿಗೆದಾರರನ್ನಾಗಿ ಮಾಡಲು ರಸ್ತೆಗಳಂತಹ ಇನ್ನಿತರ ಕಾರ್ಯಗಳನ್ನು ಮಾತ್ರ ಕ್ರಿಯಾ ಯೋಜನೆ  ರೂಪಿಸುತ್ತಿದ್ದು ಸದಸ್ಯರು ಶಿಕ್ಷಣ ಕ್ಷೇತ್ರವನ್ನೇ ಮರೆತಂತಾಗಿದೆ. ಈ ಬಗ್ಗೆ ಎಲ್ಲಾ ಶಾಸಕರು ಸಂಸದರುಗಳಾದ ಸಮಿತಿ ಸದಸ್ಯರು ಎಚ್ಚುತ್ತುಕೊಂಡು ಸಂಪೂರ್ಣವಾಗಿ ಶಿಕ್ಷಣ ಕ್ಷೇತ್ರಕ್ಕೆ ಒತ್ತು ಕೊಟ್ಟು ಅನುದಾನವನ್ನು ಸರಿಯಾಗಿ ಬಳಕೆ ಮಾಡುವಲ್ಲಿ ಮತ್ತು ಸಂಪೂರ್ಣವಾಗಿ ಅನುದಾನದ ಬಿಡುಗಡೆಗಾಗಿ ಸರ್ಕಾರವನ್ನು ಒತ್ತಾಯಿಸತಕ್ಕದ್ದು. ಅದೆಷ್ಟೊ ಬಡ ಪರಿಷಿಷ್ಟ ಜಾತಿ, ಪಂಗಡ ಮತ್ತು ಅಲ್ಪಸಂಖ್ಯಾತರ, ಹಿಂದುಳಿದ ವರ್ಗಗಗಳ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಕ್ಕಾಗಿ ಗಮನಹರಿಸಬೇಕು. ಅನುದಾನದ ಕ್ರಿಯಾ ಯೋಜನೆ ರೂಪಿಸುವಾಗ ಹೆಚ್ಚಿನ ಒತ್ತು ಶಿಕ್ಷಣಕ್ಕೆ ನೀಡತಕ್ಕದ್ದು. ಕೇವಲ ಅಭಿವೃದ್ದಿ ಮಂತ್ರವನ್ನು ಬಾಯಲ್ಲಿ ಮಾತ್ರ ಜಪಿಸದೇ ಕಾರ್ಯರೂಪಕ್ಕೆ ತರತಕ್ಕದ್ದು. ಇತ್ತಿಚಿಗೆ ಹೆಚ್.ಕೆ.ಆರ್.ಡಿ.ಬಿ ಸಮಿತಿಯು ಸಭೆ ಸೇರಿ ೩೨೩ ಕೋಟಿ ರೂ.ಗಳನ್ನು ಕ್ರಿಯಾಯೋಜನೆ ಮಾಡಿದ್ದು ಅದರಲ್ಲಿ ಶಿಕ್ಷಣ ಕ್ಷೇತ್ರಕ್ಕೆ ೬ ಜಿಲ್ಲೆಗಳಿಗೆ ಕೇವಲ ೪೦ ಕೋಟಿ ರೂ. ಗಳನ್ನು ಕ್ರಿಯಾ ಯೋಜನೆ ಮಾಡುವುದರಮೂಲಕ ಶಿಕ್ಷಣ ಕ್ಷೇತ್ರವನ್ನು ಕಡೆಗಣಿಸಿರುವುದು ತಿಳಿದು ಬರುತ್ತದೆ. ಆದ್ದರಿಂದ ಮುಖ್ಯಮಂತ್ರಿಗಳು ಮದ್ಯಪ್ರವೇಶ ಮಾಡಿ ಹೆಚ್.ಕೆ.ಆರ್.ಡಿ.ಬಿ ಅದ್ಯಕ್ಷರಿಗೆ ಮತ್ತು ಕಾರ್ಯದರ್ಶಿಗಳಿಗೆ  ಶಿಕ್ಷಣ,ಉದ್ಯೂಗ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಪ್ರಥಮ ಆದ್ಯತೆ ನೀಡಲು ತಿಳಿಸಿ ನೀವು ಹೆ.ಚ್.ಕೆ.ಆರ್.ಡಿ.ಬಿ ಪ್ರದೇಶಾಭಿವೃದ್ದಿ ಮಂಡಳಿಗೆ ಘೋಷಣೆ ಮಾಡಿದ ೨೧೫೦ ಕೋಟಿ ರೂಪಾಯಿಗಳಲ್ಲಿ ಉಳಿದ ಹಣವನ್ನು ಈ ಕೂಡಲೇ ಬಿಡುಗಡೆ ಮಾಡಬೇಕು ಮತ್ತು ಬಿಡುಗಡೆಯಾದ ಅನುದಾನ ೩೩೯ ಕೋಟಿ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಲ್ಲಿ ವಿಫಲರಾದ ಸಮಿತಿಯ ಎಲ್ಲಾ ಸದಸ್ಯರ ನಡವಳಿಕೆಯನ್ನು ಎಸ್.ಎಫ್.ಐ ಜಿಲ್ಲಾ ಸಮಿತಿಯು ಪ್ರತಿಭಟನೆಯ ಮೂಲಕ ಖಂಡಿಸುತ್ತದೆ. ಆದ್ದರಿಂದ ಕೂಡಲೇ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ದಿ ದೃಷ್ಟಿಯಿಂದ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಶೀಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಒತ್ತಾಯಿಸುತ್ತಿದೆ.  ಅಮರೇಶ ಕಡಗದ್, ಬಾಳಪ್ಪ ಹುಲಿಹೈದರ್,  ವೀರೇಶ ಕುದುರಿಮೋತಿ, ಉಮೇಶ ರಾಠೋಡ್, ಕೃಷ್ಣ ರಾಠೋಡ್, ಹನುಮಂತು, ರಮೇಶ್ ನಾಯಕ್ ಗಿರೀಶ್, ಕನಕರಾಯ ಸೇರಿದಂತೆ ನೂರಾರು ವಿದ್ಯಾರ್ಥಿಗಳು ನಗರದ ಬಾಲಕರ ಕಾಲೇಜಿನಿಂದ ಮೆರವಣಿಗೆ ಮೂಲಕ ಅಶೋಕ್ ಸರ್ಕಲ್‌ನಲ್ಲಿ ಪ್ರತಿಭಟನೆ ಮಾಡಲಾಯಿತು. 

Related posts

Leave a Comment