fbpx

ಸಾಮೋಹಿಕ ಇಷ್ಟಲಿಂಗ ಪೊಜೆ.

ಗಂಗಾವತಿ-

ನಗರದ ಶರಣ  ಮಡಿವಾಳ ಮಾಚಿದೇವರ  ದೇವಾಸ್ಥಾನದಲ್ಲಿ ದಿ,೧೦.೮.೨೦೧೫ ಸೋಮುವಾರ ಸಾಯಂಕಾಲ ೬-೩೦ಕ್ಕೆ. ೩೦ ದಿನಗಳಿಂದ ನಿರಂತರ ನಡೆಯುತ್ತಿರುವ ವಿಶ್ವ ಧರ್ಮ ಪ್ರವಚನ ನೀಡುತ್ತಿರುವ  ದಾರವಾಡದ ಅಕ್ಕ ಮಾಹಾದೇವಿ ಪೀಠದ ದ್ವಿತಿಯ ಮಹಿಳಾ ಜಗದ್ಗುರುಗಳಾದ ಪೊಜ್ಯ ಗಂಗಾಮಾತಾಜಿ ಯವರು ಇಷ್ಟಲಿಂಗ ಪೊಜೆ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಲಿಂಗಾಯತ ಧರ್ಮದ ಜೀವಾಳವಾದ ಇಷ್ಟಲಿಂಗ ಪೊಜೆ ಯಾವರೀತಿ ಹೇಗೆ ಮಾಡಿಕೊಳ್ಳ ಬೇಕು,  ಬಸವಾದಿ ಶರಣರು ಕನ್ನಡದಲ್ಲಿ ಕೊಟ್ಟ ವಚನ ಸಾಹಿತ್ಯ ಮೂಲಕ ತೊರಿಸಿಕೊಡಲಿದ್ದಾರೆ.  ಮಹಾಜಗದ್ಗುರು ಪೂಜ್ಯ ಶ್ರೀ ಲಿಂಗಾನಂದ ಅಪ್ಪಾಜಿಯವರು  ಹೇಳುವಾಹಾಗೆ ಇಷ್ಟ ಎಂದರೆ ಪೂಜೆ, ಪೂಜೆಗೆ ಅರ್ಹವಾದ ಲಿಂಗವು ಇಷ್ಟ ಲಿಂಗವು. ಇಂಥ ಇಷ್ಟಲಿಂಗವನ್ನು ಪೂಜಿಸಿ ಅನಿಷ್ಟಗಳನ್ನು ಪರಿಹರಿಸಿಕೊಂಡು, ತನ್ನ ಮನದಿಷ್ಟವನ್ನು ಪಡೆದುಕೊಂಡು ಲಿಂಗಾಂಗ ಸಮರಸದಲ್ಲಿ ತಲ್ಲೀನವಾಗುವದು ಪ್ರತಿಯೊಬ್ಬ ಲಿಂಗಾಯತನ ಕರ್ತವ್ಯವಾಗಿದೆ. ಆದಿಶೆಯಲ್ಲಿ ಅಪ್ಪಾಜಿಯವರು  ಹತ್ತಾರು ವರ್ಷಗಳಿಂದ ಪ್ರವಚನ ಹೇಳುತ್ತಾ, ಪ್ರವಚನ ಮಾಡುವಾಗ ಲಿಂಗಾಯತ ಧರ್ಮ ಅವನತಿಯತ್ತ ಸಾಗುವತ್ತಿರುವದು ಕಂಡು, ಬಸವಾದಿ ಶಿವಶರಣರ ಉದಾತ್ತ ತ್ತತ್ವಗಳು ನಶಿಸಿ ಹೊಗಬಾರದೆಂದು. ಅವು ಸತ್ವ ಯುಕ್ತವಾಗಿ ಜನಮನದಲ್ಲಿ ನೆಲೆಗೊಳ್ಳಬೇಕೆಂದು ಸಂಕಲ್ಪ ಹೊತ್ತು. ಬಸವಾದಿ  ಶಿವ ಶರಣರು ನೀಡಿದ ಅಮರ ನುಡಿಗಳನ್ನು ತಲೆಮೇಲೆ ಹೊತ್ತುಕೊಂಡು  ಜನಮನದಲ್ಲಿ ಬಿತ್ತರಿಸುವ ಪವಿತ್ರ ಕಾಯಕವನ್ನು ಕೈಗೊಂಡು  ಆಸಮಯದಲ್ಲಿ ಆವರಿಗೆ ಆಲೋಚನೆ ಮೂಡಿತು ಅದು ಏನೆಂದರೆ ಅದು ಲಿಂಗವಂತರಲ್ಲಿ ಇಷ್ಟ ಲಿಂಗಪೊಜಾನಿಷ್ಟೆ ತುಂಬಾ ಕಡಿಮೆಯಾಗಿz. ಅದಕ್ಕಾಗಿ ಅವರು ಪ್ರವಚನದಲ್ಲಿ ಶಿವಯೋಗದ ವಿಷಯದಲ್ಲಿ ಹೆಚ್ಚು ಹೆಚ್ಚು ಪ್ರತಿಪಾದನೆ ಮಾಡುತ್ತಾ ಬರುತಿದ್ದರು.ಅದನ್ನು ಮುಂದುವರಿಸಿಕೊಂಡು ಬರುತ್ತಿರುವ ಗಂಗಾಮಾತಾಜಿ ಯವರು ಹಲವಾರು ದಶಕಗಳಿಂದ ಕರ್ನಾಟಕ, ಆಂದ್ರ, ತಮಿಳುನಾಡು, ಮಹಾರಾಷ್ಟ್ರಾ,ನಾಡಿನೆಲ್ಲೆಲ್ಲಾ  ಪ್ರವಚನ ಮಾಡುತ್ತ ನಮ್ಮ ನಮ್ಮೂರಲ್ಲಿ ನಿರಂತರ ೩೦ದಿನಗಳಿಂದಪ್ರವಚನ ಮಾಡುತಿದ್ದಾರೆ.  ಆಕಾರ್ಯಕ್ರಮದಲ್ಲಿ ಇಂದು ಇಷ್ಟಲಿಂಗಪೂಜೆ ಮಾಡಿಕೊಳ್ಳು ವಿಧಾನ ತೊರಿಸಿ ಕೊಡುತಿದ್ದಾರೆ. ಇಷ್ಟಲಿಂಗ ಕಪ್ಪು ಬಂಣ ಏಕೆ, ಅಂಗಮೇಲೆ ಲಿಂಗ ಏಕೆ ಕಟ್ಟಿ ಕೊಳ್ಳಬೇಕು,ಯಾವ ಯಾವ ಮಂತ್ರ ಹೆಳಬೇಕು, ಮೂರ್ತಿ ಪೂಜೆಯಲ್ಲ, ಇಷ್ಟ ಲಿಂಗ ಪೂಜೆಮಾತ್ರ ದೇವರ ಪೂಜೆ ಮಾಡಿದಹಾಗೆ,ಲಿಂಗ ಗೊಲಾಕಾರ ಏಕೆ,ಅದು ಸ್ಥಾವರಲಿಂಗವಲ್ಲವೇ, ಇನ್ನೂ ಹಲವಾರು ವಿಷಯಗಳನ್ನು ಪ್ರಾತ್ಯಕ್ಷವಾಗಿ  ಮನಮುಟ್ಟುವಹಾಗೆ ಹೇಳಿ ಮಾಡಿ ತೂರಿಸುವ ಕಾರ್ಯಕ್ರಮ ಇಂದು (ಸೋಮುವಾರ) ಸಾಯಂಕಾಲ ೬-೩೦ಕ್ಕೆ ನಗರದ ಮಡಿವಾಳ ಮಾಚಿದೇವರ ದೇವಸ್ಥಾದಲ್ಲಿ ಹಮ್ಮಿ ಕೊಳ್ಳಲಾಗಿದೆ.ಕಾರಣ ಬಸವಾಭಿಮಾನಿಗಳು, ಲಿಂಗಾತರು ಭಾಗವಹಿಸ ಬೇಕೆಂದು ಬಸವಧರ್ಮ ಪ್ರವಚನ ಆಯೋಜಕರು ವಿನಂತಿಸಿದ್ದಾರೆ.

Please follow and like us:
error

Leave a Reply

error: Content is protected !!