ಕೊಪ್ಪಳದಲ್ಲಿ ಜೆಎಚ್ ಪಟೇಲ್ ಜನ್ಮದಿನಾಚರಣೆ

ಕೊಪ್ಪಳ : ಜೆಹೆಚ್ ಪಟೇಲ್ ಪ್ರತಿಷ್ಠಾನ(ಬೆಂಗಳೂರು) ವತಿಯಿಂದ ಮಾಜಿ ಮುಖ್ಯಮಂತ್ರಿ ದಿ. ಜೆ.ಎಚ್.ಪಟೇಲ್ ರ 80ನೇ ಜನ್ಮದಿನಾಚರಣೆ ಅಕ್ಟೋಬರ್ 1 ರಂದು ಕೊಪ್ಪಳದಲ್ಲಿ ನಡೆಯಲಿದೆ. ಈ ಕುರಿತು ವಿವಿರ ನೀಡಿದ ಸ್ವಾಗತ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಅಮರೇಗೌಡ ಬಯ್ಯಾಪೂರ ಅಂದು ಬೆಳಿಗ್ಗೆ 11 ಗಂಟೆಗೆ ಭಾಗ್ಯನಗರ ರಸ್ತೆಯ ಪಾನಘಂಟಿ ಕಲ್ಯಾಣ ಮಂಟಪದಲ್ಲಿ ನಡೆಯುವ ಜನ್ಮದಿನಾಚರಣೆ ಕಾರ್ಯಕ್ರಮದ ಉದ್ಘಾಟನೆಯ ಬಸವ ಸೇವಾ ಪ್ರತಿಷ್ಠಾನದ ರಂಜಾನ್ ದರ್ಗಾ ನೆರವೇರಿಸುತ್ತಾರೆ. ಸಮಾಜ ಕಲ್ಯಾಣ ಹಾಗೂ ಸಣ್ಣ ನೀರಾವರಿ ಸಚಿವ ಗೋವಿಂ ಕಾರಜೋಳ ಪಟೇಲ್ ಭಾವಚಿತ್ರ ಅನಾವರಣೆ ಗೊಳಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಸಂಸದ ಶಿವರಾಮಗೌಡ, ಮಾಜಿ ಸಂಸದರಾದ ಬಸವರಾ ರಾಯರಡ್ಡಿ, ನಾಗಪ್ಪ ಸಾಲೋಣಿ, ಎಂ.ಪಿ.ನಾಡಗೌಡ, ಉಧ್ಯಮಿ ಶ್ರೀಹರಿ ಖೋಡೆ ,ಶ್ರೀಮತಿ ಸರ್ವಮಂಗಳ ಜೆ ಎಚ್ ಪಟೇಲ್ ಆಗಮಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆ ಶಾಸಕ ಕರಡಿ ಸಂಗಣ್ಣ ಸಾನಿಧ್ಯ ಶ್ರೀ ಗವಿಸಿದ್ದೇಶ್ವರ ಸ್ವಾಮಿಗಳು ವಹಿಸಲಿದ್ದಾರೆ.

Leave a Reply