ಕೊಪ್ಪಳ : ಕೃಷಿ ಮಾರುಕಟ್ಟೆ ಸಮಿತಿಗೆ ಆಯ್ಕೆಯಾದವರು

ಕೊಪ್ಪಳ : ಕೊಪ್ಪಳ ಜಿಲ್ಲೆಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ ನಡೆದ ಚುನಾವಣೆಯಲ್ಲಿ ಕೃಷಿಕರ ಕ್ಷೇತ್ರ, ವರ್ತಕರ ಕ್ಷೇತ್ರ ಹಾಗೂ ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರ ಹಾಗೂ ಕೃಷಿ ಹುಟ್ಟುವಳಿ ಸಂಸ್ಕರಣಾ ಸಹಕಾರ ಸಂಘಗಳ ಕ್ಷೇತ್ರಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ವಿವರವನ್ನು ಪ್ರಕಟಿಸಲಾಗಿದೆ.
ಕೊಪ್ಪಳ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಒಟ್ಟು ೧೪ ಕ್ಷೇತ್ರಗಳಲ್ಲಿ ಕೃಷಿಕರ ಕ್ಷೇತ್ರಗಳಾಗಿರುವ ಕವಲೂರು- ಮಾಯಪ್ಪ ಶಿವಪ್ಪ ಗುಗ್ರಿ ಅವರು ಆಯ್ಕೆಯಾಗಿದ್ದಾರೆ. ಅದೇ ರೀತಿ ಅಳವಂಡಿ- ಗಂಗಮ್ಮ ಶಂಕ್ರಪ್ಪ ಕಲಾದಗಿ, ಬೆಟಗೇರಿ- ಜಯಪ್ಪ ದೇವವ್ವ ಕಂಚಿ, ಹಿರೇಸಿಂದೋಗಿ- ಹನುಮರಡ್ಡಿ ಟಿ. ಹಂಗನಕಟ್ಟಿ, ಕೊಪ್ಪಳ- ಗವಿಸಿದ್ದಪ್ಪ ವೀರಣ್ಣ ಮುದಗಲ್, ಕಿನ್ನಾಳ- ಡಿ. ಮಲ್ಲಪ್ಪ ಉರ್ಫ್ ಮಲ್ಲಿಕಾರ್ಜುನ ಯಲ್ಲಪ್ಪ, ಇರಕಲ್ಲಗಡ- ಸುದೇಶ ವೀರಬಸಪ್ಪ ಪಟ್ಟಣಶೆಟ್ರ, ಇಂದರಗಿ- ಫಕೀರಯ್ಯ ಸದಾಶಿವಯ್ಯ ಹಿರೇಮಠ, ಹಿಟ್ನಾಳ- ಶಿವಲಿಂಗಪ್ಪ ಬೆಟದಪ್ಪ ತಿಪ್ಪವ್ವನವರ, ಗಿಣಿಗೇರಾ- ನೀಲಪ್ಪ ಸಕ್ರಪ್ಪ ಮೇಟಿ ಮತ್ತು ಮುದ್ದಾಬಳ್ಳಿ- ಶರಣಪ್ಪ ಭರಮಪ್ಪ ಸಜ್ಜನ ಆಯ್ಕೆಯಾಗಿದ್ದಾರೆ. ವರ್ತಕರ ಕ್ಷೇತ್ರಕ್ಕೆ ಕಮಲಚಂದ ಮಾಣಿಕಚಂದ ಜಾಂಗಡಾ, ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರ- ಮಲ್ಲಿಕಾರ್ಜುನಗೌಡ ಬಸನಗೌಡ ಪಾಟೀಲ ಹಾಗೂ ಕೃಷಿ ಹುಟ್ಟುವಳಿ ಸಂಸ್ಕರಣಾ ಸಹಕಾರ ಸಂಘಗಳ ಕ್ಷೇತ್ರಕ್ಕೆ ಶೇಖರಪ್ಪ ಬಸವರಡ್ಡೆಪ್ಪ ನಾಗರಹಳ್ಳಿ ಅವರು ಆಯ್ಕೆಗೊಂಡಿದ್ದಾರೆ.
ಯಲಬುರ್ಗಾ ತಾಲೂಕಿನಲ್ಲಿ ಕೃಷಿಕರ ಕ್ಷೇತ್ರಗಳಾಗಿರುವ ಮುಧೋಳ- ಜಯರಾಜ ಬಸಪ್ಪ ದೇಸಾಯಿ, ಯಲಬುರ್ಗಾ- ನಾಗಪ್ಪ ಹಿರೇಕನಕಪ್ಪ ವಡ್ಡರ, ಬಂಡಿ- ಶರಣಯ್ಯ ನಂಜುಂಡಯ್ಯ, ಚಿಕ್ಕಮ್ಯಾಗೇರಿ- ದತ್ತನಗೌಡ ಮಹಾಂತಗೌಡ ಮಾಲಿಪಾಟೀಲ, ಮಂಗಳೂರ- ವಿರೇಂದ್ರ ಪುಂಡರಡ್ಡಿ ಮಾದಿನೂರು, ಬೇವೂರು- ಮಾನಪ್ಪ ದ್ಯಾಮಪ್ಪ ಪೂಜಾರ, ಹಿರೇವಂಕಲಕುಂಟಾ- ಲಕ್ಷ್ಮಪ್ಪ ಗುಂಡಪ್ಪ, ಕುಕನೂರು- ದೇವಪ್ಪ ಮುಡಿಯಪ್ಪ ಹಟ್ಟಿ, ತಳಕಲ್- ಶಂಕ್ರಪ್ಪ ಮಲ್ಲಪ್ಪ ಯರಾಶಿ, ಇಟಗಿ- ಕಪ್ಪತ್ತಪ್ಪ ಮದ್ದಾನಪ್ಪ ಅಂಗಡಿ ಮತ್ತು ಸಿದ್ನೆಕೊಪ್ಪ ಕ್ಷೇತ್ರಕ್ಕೆ ಗಂಗಮ್ಮ ಅಶೋಕ ಕಂಬಳಿ ಆಯ್ಕೆಯಾಗಿದ್ದಾರೆ. ವರ್ತಕರ ಕ್ಷೇತ್ರದಿಂದ ದಾವಲಸಾಬ ಹುಸೇನಸಾಬ ಕುದರಿ, ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರ- ಶಿವಕುಮಾರ ವೀರಯ್ಯ ನಾಗಲಾಪುರಮಠ ಹಾಗೂ ಕೃಷಿ ಹುಟ್ಟುವಳಿ ಸಂಸ್ಕರಣಾ ಸಹಕಾರ ಸಂಘಗಳ ಕ್ಷೇತ್ರದಿಂದ ಶಿವಸಂಗಪ್ಪ ಶೇಖರಪ್ಪ ಹುಚನೂರು ಅವರು ಆಯ್ಕೆಯಾಗಿದ್ದಾರೆ.
ಕುಷ್ಟಗಿ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕೃಷಿಕರ ಕ್ಷೇತ್ರಗಳಾದ ಹನುಮನಾಳ- ರಾಜಶೇಖರಪ್ಪ ಗುಂಡಪ್ಪ ವಡಿಗೇರಿ, ಯರಗೇರಾ- ಶಿವನಗೌಡ ಷಣ್ಮುಖಗೌಡ ಪಾಟೀಲ, ಹೂಲಗೇರಾ- ಗುರನಗೌಡ ಶರಣಗೌಡ, ಹನುಮಸಾಗರ- ಮಾರುತಿ ಕಳಕಪ್ಪ ಭಜಂತ್ರಿ, ಚಳಗೇರಾ- ಮಹಾಲಿಂಗಪ್ಪ ಮಲ್ಲಪ್ಪ ದೋಟಿಹಾಳ, ದೋಟಿಹಾಳ- ಸಂಗಪ್ಪ ಆನಂದಪ್ಪ ಲಮಾಣಿ, ಮುದೇನೂರು- ಹನುಮಗೌಡ ಹೆಚ್. ಪೊಲೀಸ್ ಪಾಟೀಲ, ಕುಷ್ಟಗಿ- ಸಣ್ಣದುರಗಪ್ಪ ಗ್ಯಾನಪ್ಪ ವಡಿಗೇರಿ, ಹಿರೇಮನ್ನಾಪುರ- ನಿಂಗಪ್ಪ ಚನ್ನಪ್ಪ ಕುರ್ನಾಳ, ಜುಮ್ಲಾಪುರ- ಶರಣಪ್ಪ ನಾಗರಡ್ಡೆಪ್ಪ ಮತ್ತು ತಾವರಗೇರಾ- ಮಹಾಂತಪ್ಪ ಸೋಮನಗೌಡ ಪಾಟೀಲ್, ವರ್ತಕರ ಕ್ಷೇತ್ರ- ಶರಣಪ್ಪ ಅಂದಾನೆಪ್ಪ ಅಗಸಿಮುಂದಿನ, ಕೃಷಿ ಉತ್ಪನ್ನ ಮಾರಾಟ ಸಹಕಾರ ಸಂಘಗಳ ಕ್ಷೇತ್ರ- ಸಿದ್ದಣ್ಣ ಪಕೀರಪ್ಪ ಪಟ್ಟಣಶೆಟ್ಟರ ಹಾಗೂ ಕೃಷಿ ಹುಟ್ಟುವಳಿ ಸಂಸ್ಕರಣಾ ಸಹಕಾರ ಸಂಘಗಳ ಕ್ಷೇತ್ರದಿಂದ ಈರಣ್ಣ ವೀರಪ್ಪ ಬಳಿಗಾರ ಅವರು ಆಯ್ಕೆಗೊಂಡಿದ್ದಾರೆ ಎಂದು ಜಿಲ್ಲಾಧಿಕಾರಿ ಕೆ.ಎಸ್. ಸತ್ಯಮೂರ್ತಿ ಅವರು ತಿಳಿಸಿದ್ದಾರೆ.

Please follow and like us:
error