You are here
Home > Koppal News > ಬಿಸರಳ್ಳಿ,ವದಗನಾಳದಲ್ಲಿ ಸೈಯದ್ ಪೌಂಡೇಷನ್‌ನಿಂದ ಉಚಿತವಾಗಿ ನೋಟ್‌ಬುಕ್ ವಿತರಣೆ

ಬಿಸರಳ್ಳಿ,ವದಗನಾಳದಲ್ಲಿ ಸೈಯದ್ ಪೌಂಡೇಷನ್‌ನಿಂದ ಉಚಿತವಾಗಿ ನೋಟ್‌ಬುಕ್ ವಿತರಣೆ

ಕೊಪ್ಪಳ : ಸೈಯದ್ ಪೌಂಡೇಷನ್ ಚಾರಿಟೇಬಲ್ ಟ್ರಸ್ಟ್‌ನಿಂದ ೩೦-೮-೨೦೧೧ರಂದು ಬಿಸರಳ್ಳಿ ಮತ್ತು ವದಗನಾಳ ಗ್ರಾಮದ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್‌ಬುಕ್ ವಿತರಿಸುವ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿದೆ ಮತ್ತು ಸಯ್ಯದ್ ಅಭಿಮಾನಿಗಳ ಬಳಗದ ಉದ್ಘಾಟನೆಯೂ ನಡೆಯಲಿದೆ.
ಬಿಸರಳ್ಳಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ( ಎಸ್‌ಸಿ/ಎಸ್ಟಿ) ಶ್ರೀ ಮರುಳಸಿದ್ದೇಶ್ವರ ದೇವಸ್ಥಾನ ಹತ್ತಿರದ ಶಾಲೆಯಲ್ಲಿ ನಡೆಯುವ ಕಾರ್‍ಯಕ್ರಮದಲ್ಲಿ ಎಸ್ ಡಿ ಎಂಸಿ ಅಧ್ಯಕ್ಷರಾದ ಅಜ್ಜಪ್ಪ ಬಾರಕೇರ ಹಾಗೂ ಎಸ್ ಡಿ ಎಂಸಿ ಸದಸ್ಯರು ಪಾಲ್ಗೊಳ್ಳಲಿದ್ದಾರೆ.ಈ ಕಾರ್‍ಯಕ್ರಮದಲ್ಲಿ ಪ್ರಕಾಶ ಕಮ್ಮರ, ನಾಗರಾಜ ಬಡಿಗೇರ, ಆನಂದ ಮೇಗಳಮನಿ, ರಾಜಾವಲಿ, ಸಲಿಂ ಮಡಕಿನಾಳ, ಭಾರತ್ ಟೈಲರ್, ಸಲೀಂ ಮನಿಯಾರ್ ಮತ್ತಿತರರು ಭಾಗವಹಿಸಲಿದ್ದಾರೆ. ವಿವರಗಳಿಗೆ ವಿಜಯಕುಮಾರ ಮುಂಡರಗಿಮಠ ೯೬೬೩೩೪೧೭೩೪ ಸಂಪರ್ಕಿಸಲು ಕೋರಲಾಗಿದೆ.
ವದಗನಾಳದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬೆಳಿಗ್ಗೆ ೧೧.೩೦ಕ್ಕೆ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿದ್ದು ರವಿ ಹುಡೇದ್ ಎಸ್ ಡಿ ಎಂಸಿ ಅಧ್ಯಕ್ಷರೂ ಸೇರಿದಂತೆ ಸರ್ವ ಸದಸ್ಯರು, ತಿಮ್ಮನಗೌಡ ,ಶ್ರೀಕಾಂತ, ಮಲ್ಲಿಕಾರ್ಜುನ, ಸಿ.ಕೆ.ಪಾಟೀಲ್, ಮುದಿಯಪ್ಪ ಕೋರಿ, ದೇವಪ್ಪ ಮ್ಯಾಗಳಮನಿ, ಮಹಿಬೂಬಸಾಬ, ನಾಗರಾಜ ನಿಟ್ಟಲಿ, ರಮೇಶ ಹನುಮಂತ,ಚಂದ್ರಶೇಖರ ದೊಡ್ಡಮನಿ ಸೇರಿದಂತೆ ಊರಿನ ಗುರು ಹಿರಿಯರು ಪಾಲ್ಗೊಳ್ಳಲಿದ್ದಾರೆ. ವಿವರಗಳಿಗೆ ಮಲ್ಲಿಕಾರ್ಜುನ ಬಂಗ್ಲಿ- ೯೭೪೩೫೯೪೭೯೮ ಸಂಪರ್ಕಿಸಲು ಕೋರಲಾಗಿದೆ.

Leave a Reply

Top