ಕರಡಿ ಸಂಗಣ್ಣಗೆ ಭರ್ಜರಿ ಗೆಲುವು

ಕೊಪ್ಪಳ : ಆಪರೇಷನ್ ಕಮಲದಿಂದಾಗಿ ಉಪಚುನಾವಣೆಗೆ ಕಾರಣೀಕರ್ತರಾಗಿದ್ದ ಕರಡಿ ಸಂಗಣ್ಣ  ಉಪಚುನಾವಣೆಯಲ್ಲಿ ಭರ್ಜರಿ ಜಯ ಸಾಧಿಸಿದ್ದಾರೆ. ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ನ ಬಸವರಾಜ ಹಿಟ್ನಾಳಗಿಂತ 12 ಸಾವಿರ ಹೆಚ್ಚು ಮತ ಪಡೆದು ಜಯಭೇರಿ ಬಾರಿಸಿದ್ದಾರೆ. ಜೆಡಿಎಸ್ ನ ಪ್ರದೀಪಗೌಡ ಮಾಲಿಪಾಟೀಲ್ 20,000 ಮತಗಳನ್ನು ಪಡೆದು  3ನೇ ಸ್ಥಾನಕ್ಕೆ  ತೃಪ್ತಿಪಟ್ಟಿದ್ದಾರೆ. ಕರಡಿ ಸಂಗಣ್ಣ ಅಭಿಮಾನಿಗಳು ನಗರದೆಲ್ಲೆಡೆ ಪಟಾಕಿ ಸಿಡಿಸಿ ಬಣ್ಣ ಎರಚಿಕೊಂಡು ವಿಜಯದ ಕೇಕೆ ಹಾಕುತ್ತಿದ್ದಾರೆ.
ಬಿಜೆಪಿಯ ಕರಡಿ ಸಂಗಣ್ಣವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ಬಸವರಾಜ್ ಹಿಟ್ನಾಳ್ ಅವರನ್ನು 12,488 ಮತಗಳ ಅಂತರದಿಂದ  ಸೋಲಿಸಿ ಗೆಲುವಿನ ನಗು ಬೀರಿದ್ದಾರೆ. ಕರಡಿ ಸಂಗಣ್ಣ-60,405, ಕಾಂಗ್ರೆಸ್‌ನ ಬಸವರಾಜ್ ಹಿಟ್ನಾಳ್-47,917 ಹಾಗೂ ಜೆಡಿಎಸ್‌ನ ಪ್ರದೀಪ್ ಗೌಡ ಮಾಲಿ ಪಾಟೀಲ್ 20,717 ಮತ ಪಡೆದಿದ್ದಾರೆ.

ಕರಡಿ ಸಂಗಣ್ಣವ ತಮ್ಮ ಗೆಲುವಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಕೃಪಾಶೀರ್ವಾದ, ಮುಖ್ಯಮಂತ್ರಿ ಸದಾನಂದ ಗೌಡರ ಸಹಕಾರ ಮತ್ತು ಎಲ್ಲ ಮಂತ್ರಿಗಳು ಹಾಗೂ ಶಾಸಕರ ಬೆಂಬಲ ಕಾರಣ. ಸರಕಾರದ ಸಾಧನೆಗಳೇ ನನ್ನ ಗೆಲುವಿನ ಶ್ರೀರಕ್ಷೆ ಎಂದು ಘೋಷಿಸಿದ್ದು, ತಮ್ಮನ್ನು ಮತ್ತೆ ಬೆಂಬಲಿಸಿದ ಎಲ್ಲ ಮತದಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.

Please follow and like us:
error