ಅಖಿಲ ಕರ್ನಾಟಕ ಜನಶಕ್ತಿ ವೇದಿಕೆಯಿಂದ ೫೯ನೇ ಡಾ| ಬಿ ಆರ್ ಅಂಬೇಡ್ಕರ್ ಪರಿನಿರ್ವಾಣ ದಿನ ಆಚರಿಸಲಾಯಿತು.

ಗದಗ-07- ನಗರಸಭೆಯ ಆವರಣದಲ್ಲಿರುವ ಬಾಬಾ ಸಾಹೇಬ ಅವರ ಪ್ರತಿಮೆಗೆ ಅಖಿಲ ಕರ್ನಾಟಕ ಜನಶಕ್ತಿ ವೇದಿಕೆಯ  ರಾಜ್ಯಧ್ಯಕ್ಷರಾದ ಸಯ್ಯದ ಖಾಲೀದ ಕೊಪ್ಪಳ ರವರು ಮಾಲಾರ್ಪಣೆ ಮಾಡಿದರು. ಈ ಸಂಧರ್ಭದಲ್ಲಿ ಮಾತನಾಡಿದ ಅವರು ಬಾಬಾ ಸಾಹೇಬ ಅವರು ಎಂದೆಂದು ಅಮರವಾಗಿದ್ದಾರೆ ಅವರ ತತ್ವ ಸಿದ್ದಾಂತ ಹಾಗೂ ಮೌಲ್ಯಗಳನ್ನು ಅಳವಡಿಸಿಕೊಂಡರೆ ಸಮಾಜದಲ್ಲಿ ಒಬ್ಬ ಒಳ್ಳೆ ವ್ಯಕ್ತಿ ಯಾಗಬಹುದು ಎಂದು ಹೇಳಿದರು, ಈ ಸಂಧರ್ಬದಲ್ಲಿ ಮಹಿಳಾಘಟಕದ ರಾಜ್ಯಧ್ಯಕ್ಷರಾದ ಪೂಜಾ ಬೇವೂರ, ಕಾರ್ಮಿಕ ಘಟಕದ ಅಧಿಕ್ಷರಾದ ಸಮೀರ ಮುಳಗುಂದ, ರವಿ ವಗ್ಗನವರ ಶಕುಂತಲಾ ಗಂಗಾವತಿ ರಫೀಕ ಹೈದರ ಬಸುರಾಜ ಪತ್ತಾರ ಮುಂತಾದವರು ಉಪಸ್ಥಿತರಿದ್ದರು.
Please follow and like us:
error