ಸಂಭ್ರಮದ ಓಕುಳಿ

ಕೊಪ್ಪಳ: ಕಾತರಕಿ ಗ್ರಾಮದ ಶ್ರೀ ಅವಿನಾಳೇಶ್ವರ ಜಾತ್ರೆ ಸಂಬ್ರಮದಿಂದ ನಡೆಯಿತು ಬೆಳಗ್ಗೆ ಅವಿನಾಳೇಶ್ವರ ಮೂರ್ತಿಗೆ ಅಭಿಶೇಕ ಮಾಡಿ ಹೊಂಡದ ಪೂಜೆ ಮಾಡಲಯಿತು. ನಂತರ ವಿವಿದ ಗ್ರಾಮಗಳ ಬಕ್ತರಿಂದ ದೀರ್ಗದಂಡ ನಮಸ್ಕಾರ, ದಾಸೋಹ, ಮತ್ತು ಜವಳಕಾರ್ಯಕ್ರಮ ಬೆಳಗಿನಿಂದ ನಡೆದು ಬ್ಯಾಟಿಗಿಡ ಕಿತ್ತು ಮುಳ್ಳಿನಲ್ಲಿ ಭಕ್ತರು ಹಾರುತ್ತ ಪವಾಡಕಾರ್ಯಕ್ರಮ ಜರುಗಿತು. ಸಂಜೆ ೬ ಗಂಟೆಗೆ ಗ್ರಾಮದ ಪ್ರಮೂಖ ರಸ್ತೆಯಲ್ಲಿ ಪವಾಡದಾಸಪ್ಪನ ಮೇರವಣಿಗೆ, ಸಂಜೆ ೮ ಗಂಟೆಗೆ ಲಘುರತೋತ್ಸವ, ಡೊಳ್ಳು, ಬಾಜಾ ಭಜಂತ್ರಿಗಳೊಂದಿಗೆ ನಡೆಸಲಾಯಿತು. ಈ ಸಂದರ್ಭದಲ್ಲಿ ತಾಲೂಕ ಪಂಚಯತಿ ಮಾಜಿ ಅಧ್ಯಕ್ಷ ವೆಂಕನಗೌಡ ಹಿರೇಗೌಡ್ರ, ಗ್ರಾಮ ಪಂಚಾಯತಿ ಸದಸ್ಯರಾದ ಯಂಕಪ್ಪ ಕೋರಗಲ್, ದಯಾನಂದ ಪೋಲಿಸ ಪಾಟಿಲ್, ತಿಪ್ಪಣ್ಣ ವಡ್ಡಿನ, ರಾಮನ್ಣ ಮಡಿವಾಳ, ಗ್ರಾಮದ ಹಿರಿಯರಾದ ಈಶಪ್ಪ ಬೈರಣ್ಣನವರ, ಶಂಕರಗೌಡ ನಾಗನಗೌಡ್ರ, ಶಿವಯ್ಯ ಸಾಲಿಮಠ, ಹನಮಪ್ಪ ಪುಜಾರ, ವೆಂಕಟೇಶ ಪೋಲಿಸಪಾಟೀಲ ಸೇರಿದಂತೆ ಸುತ್ತಮುತ್ತಲ ಗ್ರಾಮದ ಸಾವಿರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು.

Leave a Reply