ನಾಯಕ ಸಮಾಜದ ಕೊಡುಗೆ ಅನನ್ಯ

 ಗೊಂಡಬಾಳ
ಕೊಪ್ಪಳ, ಅ. ೨೯. ನಾಯಕ ಸಮಾಜದ ಕೊಡುಗೆ ಸಮಾಜಕ್ಕೆ ಅನನ್ಯವಾದದ್ದು ಎಂದು ಕರ್ನಾಟಕ ವಾಲ್ಮೀಕಿ ಸೇನೆ ರಾಜ್ಯ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಹೇಳಿದರು.
ಅವರು ನಗರದ ತಾಲೂಕ ಪಂಚಾಯತ ಸಂಕೀರ್ಣದಲ್ಲಿ ಕರ್ನಾಟಕ ವಾಲ್ಮೀಕಿ ಸೇನೆ ಮತ್ತು ಸ್ವರಭಾರತಿ ಗ್ರಾಮೀಣಾಭವೃದ್ಧಿ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕರ್ನಾಟಕ ರಾಜ್ಯದಲ್ಲಿ ವಾಲ್ಮೀಕಿ ನಾಯಕ ಜನಾಂಗ ತನ್ನದೇ ಆದ ಇತಿಹಾಸವನ್ನು, ವೈಶಿಷ್ಟ್ಯತೆಯನ್ನು ಹೊಂದಿದೆ ಹಾಗೂ ರಾಜ್ಯದಲ್ಲಿ ದೊಡ್ಡ ಸಮುದಾಯವಾಗಿದೆ ಎಂದರು. ರಾಜಕೀಯ ಪಕ್ಷಗಳು ಸಮಾಜವನ್ನು ಕೇವಲ ತಮ್ಮ ಕೆಲಸದವರಂತೆ ನೋಡಿಕೊಂಡರೆ ಮುಂದೆ ತಕ್ಕ ಶಾಸ್ತಿ ಅನುಭವಿಸಲಿದ್ದಾರೆಂದರು.
ಕಾರ್ಯಕ್ರಮದಲ್ಲಿ ಜೆಡಿಎಸ್ ಜಿಲ್ಲಾ ವಕ್ತಾರ ಜಗದೀಶಗೌಡ ತೆಗ್ಗಿನಮನಿ ಮಾತನಾಡಿ ಸದಾ ಕ್ರಿಯಾಶೀಲರಾಗಿ ಕಾರ್ಯಮಾಡುತ್ತಿರುವ ಮಂಜುನಾಥ ಹಾಗೂ ಅವರ ಸಂಸ್ಥೆಯವರು ಶ್ಲಾಘನೀಯ ಎಂದರು. ಕರವೇ ತಾಲೂಕ ಅಧ್ಯಕ್ಷ ಶಿವನಗೌಡ ಪಾಟೀಲ, ಜೆಡಿಎಸ್ ನಗರ ಎಸ್‌ಸಿ ಘಟಕದ ಅಧ್ಯಕ್ಷ ನಾಗರಾಜ ಚಲುವಾದಿ, ಪಂಚಮಸಾಲಿ ಯುವಕ ಸಂಘದ ಮುಖಂಡ ಗವಿಸಿದ್ದಪ್ಪ ಕರ್ಕಿಹಳ್ಳಿ, ಅಣ್ಣಪ್ಪ ತಳಕಲ್, ಶಂಕ್ರಪ್ಪ ವಾಲ್ಮೀಕಿ, ನಗರ ಎಸ್‌ಟಿ ಘಟಕದ ಮಹಿಳಾ ಅಧ್ಯಕ್ಷೆ ಪಾರ್ವತಿ ವಾಲ್ಮೀಕಿ, ರೇಣುಕಾ ವಾಲ್ಮೀಕಿ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ವೆಂಕಟೇಶ ಈಳಗೇರ ಇತರರು ಇದ್ದರು.
Please follow and like us:
error