You are here
Home > Koppal News > ಕೃಷ್ಣಾ ‘ಬಿ’ ಸ್ಕೀಮ್‌ನ ಅನುಷ್ಠಾನಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಿ – ಹೆಚ್.ಆರ್ ಶ್ರೀನಾಥ

ಕೃಷ್ಣಾ ‘ಬಿ’ ಸ್ಕೀಮ್‌ನ ಅನುಷ್ಠಾನಕ್ಕಾಗಿ ಕಾಂಗ್ರೆಸ್‌ಗೆ ಮತ ನೀಡಿ – ಹೆಚ್.ಆರ್ ಶ್ರೀನಾಥ

ಕೊಪ್ಪಳ : ಇರಕಲ್‌ಗಡಾ ಭಾಗ ಸಂಪೂರ್ಣ ನೀರವಾರಿ ಆಗಲೂ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಬೆಕೆಂದು ಗಂಗಾವತಿ ಕ್ಷೇತ್ರದ ಅಭ್ಯರ್ಥಿ ಹೆಚ್.ಆರ್ ಶ್ರೀನಾಥ ಅವರು ರವಿವಾರ ಹಿರೆಬೊಮ್ಮನಾಳ, ಭಿಮನೂರು, ಚಳ್ಳಾರಿ , ಕಾಮನೂರು ಲೆಬಗೇರಿಗಳಲ್ಲಿ  ಮತದಾರನ್ನ ಉದ್ದೇಶಿಸಿ  ಪ್ರಚಾರ ನಡೆಸಿದರು ಮುಂದೆ ಮಾತನಾಡಿದ ಅವರು ಮೊನ್ನೆ ಇರಕಲ್ಲಗಡಾ ಗ್ರಾಮಕ್ಕೆ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ರಾಮಯ್ಯನವರು ಹೇಳಿದ ಮಾತನ್ನು ನೇನದ ಅವರು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಕೃಷ್ಣಾ’ಬಿ’ ಸ್ಕೀಮ್‌ಗಾಗಿ ಪ್ರತಿ ವರುಷ ಹತ್ತು ಸಾವಿರ ಕೋಟಿ ಪ್ರತ್ಯೆಕವಾಗಿ ತೆಗೆದು ಇಟ್ಟು ಈ ಭಾಗವನ್ನು ಸಂಪೂರ್ಣ ನಿರಾವರಿ ಮಾಡುವುದಾಗಿ ಹೆಳಿದ್ದನ್ನು ಸ್ಮರಿಸಿದರು. ಅಲ್ಲದೆ ಹಿಂದೂಳಿದ ಜನರ ನಾಯಕ ಸಿದ್ರಾಮಯ್ಯನವರನ್ನು ಮುಖ್ಯಮಂತ್ರಿ ಮಾಡಬೇಕಾಗಿದ್ದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳಿಗೆ ಮತ ನೀಡಬೇಕೆಂದು ಕೊರಿದರು ಅಲ್ಲದೆ ನಾಡಿನ ಜನತೆ ಬಿ ಜೆ ಪಿ ಯ ದೂರಾಡಳತೆಯಿಂದ ಬೆಸತ್ತಿದ್ದಾರೆ ಮತ್ತು ಸಮಿಶ್ರ ಸರಕಾರದ ವ್ಯವಸ್ಥೆಯಿಂದ ಕಂಗಾಲಾಗಿದ್ದಾರೆ. ಈ ನಾಡಿನ ಜನತೆಗೆ ಸುಭದ್ರ ಮತ್ತು ಸ್ಥಿರ ಸರಕಾರದ ಅವಶ್ಯಕತೆ ಇದೆ ಸುಭದ್ರ ಮತ್ತು ಸ್ಥಿರ ಸರಕಾರದ ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ ಎಂದು ಅವರು ಕರ್ನಾಟಕದಲ್ಲಿ ಕಾಂಗ್ರೆಸ್ ಆಡಳಿತ ಇದ್ಯಾಗ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಬಗ್ಗೆ  ವಿಶ್ವದ್ಯಾಂತ ಚರ್ಸೆಯಾಗುತ್ತಿತ್ತು. ಆದರೆ ಈಗ ಬಿಜೆಪಿ ಆಡಳಿತ ಮಾಡಿದ ನಂತರ ಭ್ರಷ್ಟಾಚಾರದ ಬಗ್ಗೆ ಚರ್ಚೆ ಆಗುತ್ತಿದೆ. ಇದು ಬಿ ಜೆ ಪಿ ಸರಕಾರದ ಸಾಧನೆ ಎಂದ ಅವರು ಭೂ ಹಗರದಣ, ಗಣಿಲೂಟಿ, ಅಧಿಖಾರಕ್ಕಾಗಿ ಕಿತ್ತಾಟ ಭ್ರಷ್ಟಾಚಾರ ಒಳಜಗಳ ಗುಂಪುಗಾರಿಕೆ ಬಿ.ಜೆ.ಪಿ ಪಕ್ಷದ ಸಾಧನೆ ಎಂದು ಹೆಳಿದರು.ಇನ್ನು ಜೆ.ಡಿ.ಎಸ್ ಬಗ್ಗೆ ಮಾತನಾಡಿದ ಅವರು ಅದು ಒಂದು ಪ್ರಾದೇಶಿಕ ಪಕ್ಷ ಇದು ಕೇವಲ್ ಹಳೆ ಮೈಸೂರು ಭಾಗಕ್ಕೆ ಮಾತ್ರ ಸಿಮೀತವಾಗಿದ್ದು ಪೂಣ್ ಪ್ರಮಾಣದಲ್ಲಿ ಅಧಿಕಾರಕ್ಕೆ ಬರುವುದು ಸಾಧ್ಯವಿಲ್ಲ ಅಂದ ಅವರು ಈ ನಿಟ್ಟಿನಲ್ಲಿ ರಾಷ್ಟ್ರೀಯ ಪಕ್ಷ ವಿಶೇಷವಾಗಿ ಕಾಂಗ್ರೆಸ್ ಪಕ್ಷ ಮಾತ್ರ ಸುಭದ್ರ ಸರಕಾರ ನಿಡಬಲ್ಲದು ಜೆ.ಡಿ.ಎಸ್ ಕೆ.ಜೆ.ಪಿ, ಬಿ.ಎಸ್.ಆರ್ ಸುಭದ್ರ ಸರಕಾರ ನೀಡಲು ಸಾಧ್ಯವೆ ಇಲ್ಲಾ ಎಂದು ಖಡಕ ಆಗಿ ಹೇಳಿದರು. 
ಸಭೆಯಲ್ಲಿ ಹಿರಿಯ ಧುರಿಣರಾದ ರುದ್ರಮುನಿ ಗಾಳಿ, ಕರಿಯಣ್ಣ ಸಂಗಟಿ, ಅರ್ಜುನಸಾ ಕಾಟವಾ ಆಶೀಫ್ ಅಲಿ ವಕೀಲರು ಪ್ರಸನ್ನ ಗಡಾದ, ಟಿ.ಜನಾರ್ಧನ. ರುದ್ರೇಶ, ಇನ್ನೂ ಪಕ್ಷದ ಧುರಿಣರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರೆಂದು ಅರ್ಜುನಸಾ ಕಾಟವಾ ತಿಳಿಸಿದ್ದಾರೆ.    

Leave a Reply

Top