ಮಕ್ಕಳ ಕಲಿಕಾ ಹಬ್ಬ – ಕಲಿಕೋತ್ಸವ:

ಅಗಳಕೇರಾ ಕ್ಲಸ್ಟರ್ ಮಟ್ಟದ ಕಲಿಕೋತ್ಸ ವ:: ಹೊಸಬಂಡಿಹರ್ಲಾಪೂರ.
ಮುನಿರಾಬಾದ: ಕಲಿಕೋತ್ಸವವು ಮಕ್ಕಳ ಕಲಿಕೆಯನ್ನು ಅನಾವರಣಗೊಳಿಸುವ ಹಾಗೂ ಸಮುದಾಯದೊಮದಿಗೆ ಹಂಚಿಕೊಳ್ಳುವ ಮಕ್ಕಳ ಕಲಿಕಾ ಹಬ್ಬವಾಗಿದೆ.  ಇದು ಅವರ ಕಲಿಕೆಯನ್ನು ಗುಣಾತ್ಮಕತೆಯತ್ತ ಕೊಂಡೈಯುದರ ಮೂಲಕ ಸೃಜನಾ ಶೀಲತೆಯನ್ನು ಬೆಳೆಸುವ ಶಿಕ್ಷಣ ಇಲಾಖೆಯ ವಿಶಿಷ್ಟ ಪ್ರಯೋಗವಾಗಿದೆ.  ಎಂದು ತಾಲೂಕ ಪಂಚಾಯತಿಯ ಮಾಜಿ ಅಧ್ಯಕ್ಷರಾದ ಶ್ರೀ ದೇವಣ್ಣ ಮೆಕಾಳೆ ಯವರು ಅಭಿಪ್ರಾಯಪಟ್ಟರು.  
      ಮುನಿರಾಬಾದ ಸಮೀಪದ ಅಗಳಕೇರಿ ಕ್ಲಸ್ಟರ್ ಮಟ್ಟದ ಕಲಿಕೋತ್ಸವವನ್ನು ಹೊಸಬಂಡಿಹರ್ಲಾಪೂರದ ಸರಕಾರಿ ಪ್ರೌಢ ಶಾಲೆಯಲ್ಲಿ ಆಯೋಜಿಸಲಾಗಿತ್ತು.  ದೀಪ ಬೆಳಗಿಸುವದರ ಮೂಲಕ ಉದ್ಘಾಟಿಸಿ ಮಾತಾನಾಡಿದ ಅವರು ಶಿಕ್ಷಣ ಇಲಾಖೆಯ ಅತ್ಯುತ್ತಮ ಕಾರ್ಯಕ್ರಮ ಇದಾಗಿದ್ದು, ಶಿಕ್ಷಕರು ಉತ್ತಮ ರೀತಿಯಲ್ಲಿ ಮಕ್ಕಳನ್ನು ಕಲಿಕೆಗೆ ಅಣಿಗೊಳಿಸಬೇಕು.  ಏಕೇಂದರೆ ಮಕ್ಕಳು ಶಿಕ್ಷಕರ ಪ್ರತಿ ರೂಪವಿದ್ದಂತೆ, ಆ ದೀಶೆಯಲ್ಲಿ ಶ್ರಮಿಸಲು ಸಲಹೆ ನೀಡಿದರು.  ಮುಖ್ಯ ಅತಿಥಿಗಳಾದ ಅಕ್ಷರ ದಾಸೋಹದ ಸಹಾಯಕ ನಿದೇಶಕರಾದ   ಅಶೋಕ ಕುಲಕರ್ಣಿ ಅವರು ಮಾತನಾಡಿ, ಗುರುಕುಲ ಶಿಕ್ಷಣ ಪದ್ದತಿ ಹಾಗೂ ಆದೂನಿಕ ಶಿಕ್ಷಣದ ಉತ್ತಮಾಂಶಗಳನ್ನ ಒಂದುಗೂಡಿಸಿ ರೂಪಿಸಿರುವ ಅತೀ ಶ್ರೇಷ್ಠವಾದ ಕಾರ್ಯಕ್ರಮ ಇದಾಗಿದೆ.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ರತ್ನಮ್ಮ ಬ್ರಹ್ಮಯ್ಯ, ಗ್ರಾಮದ ಹಿರಿಯರಾದ  ಕಾಶಯ್ಯ ಅಜ್ಜನವರು, ಎಸ್.ಡಿ.ಎಂ.ಸಿ. ಅಧ್ಯಕ್ಷರಾದ   ಹಬ್ಬುಲಿಗೇಪ್ಪ ಹಾಗೂ ಎಸ್.ಡಿ.ಎಂ.ಸಿ. ಸದಸ್ಯರುಗಳಾದ ಶಂಕರಗೌಡ, ಹೆಚ್.ಎನ್. ಕೃಷ್ಣ ಹಾಗೂ ಗ್ರಾಮದ ಹಿರಿಯರಾದ ಚನ್ನಕೃಷ್ಣನವರು ಶಾಲೆಯ ಮುಖ್ಯ ಗುರುಮಾತೆಯಾರಾದ ಶ್ರೀಮತಿ ಜೆ. ಸುಜಾತ, ಸಿ.ಆರ್.ಪಿ. ಗಳಾದ   ಸುರೇಶ, ಹಾಗೂ ಗ್ರಾಮ ಪಂಚಾಯಿತಿ ಸರ್ವ ಸದಸ್ಯರು ಸಭೆಯಲ್ಲಿ ಹಾಜರಿದ್ದರು. ಶಿಕ್ಷಕ ಜೀವನಸಾಬ ವಾಲಿಕಾರ ರವರು ಕಾರ್ಯಕ್ರಮವನ್ನು ನಿರ್ವಹಿಸಿದರು.  

Leave a Reply