fbpx

ಲಿಂ.ಡಾ|| ಪಂ.ಪುಟ್ಟರಾಜ ಗವಾಯಿಗಳವರ ಪುಣ್ಯ ಸ್ಮರಣೋತ್ಸವ

ಕೊಪ್ಪಳ,ಏ.೨೯: ಡಾ|| ಪಂಡಿತ ಪುಟ್ಟರಾಜ ಹರಿಕಥಾ ಸಾಂ

ಸ್ಕೃತಿಕ ಕಲಾ ಸಂಘ ಹಿರೇಬಗನಾಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಶ್ರೀ ರಾಘವೇಂದ್ರ ಕಲ್ಯಾಣ ಮಂಟಪದ ಆವರಣದಲ್ಲಿ ಲಿಂ.ಡಾ|| ಪಂಡಿತ ಪುಟ್ಟರಾಜ ಕವಿ ಗವಾಯಿಗಳವರ ಪುಣ್ಯ ಸ್ಮರಣೋತ್ಸವ, ಡಾ|| ಪಂಡಿತ ಪುಟ್ಟರಾಜ ಹರಿಕಥಾ ಸಾಂಸ್ಕೃತಿಕ ಕಲಾ ಸಂಘ ಹಿರೇಬಗನಾಳ ಇದರ ೭ನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಹಿರೇಬಗನಾಳ ಜಾಹಗೀರ ಮಠದ ಲಿಂ.ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ದ್ವಿತೀಯ ವರ್ಷದ ಪುಣ್ಯ ಸ್ಮರಣೋತ್ಸವ ಶಾರದಮ್ಮ ಹಿರೇಮಠ ಮಕ್ಕಳು ಹಾಗೂ ಮೊಮ್ಮಕ್ಕಳು ಹಾಗೂ ಕುಟುಂಬ ವರ್ಗದವರಿಂದ ಸಂಗೀತ ಸಂಜೆ, ಧಾರ್ಮಿಕ-ಸಾಂಸ್ಕೃತಿಕ ಸನ್ಮಾನ ಸಭೆಯನ್ನು ಇತ್ತೀಚಿಗೆ ಯಶಸ್ವಿಯಾಗಿ ಏರ್ಪಡಿಸಲಾಯಿತು.

ದಿವ್ಯ ಸಾನಿಧ್ಯವನ್ನು ವಹಿಸಿದ್ದ ಗದಗನ ಶ್ರೀ ವಿರೇಶ್ವರ ಪುಣ್ಯಾಶ್ರಮದ ಕಲ್ಲಯ್ಯ ಅಜ್ಜನವರ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಆಶೀರ್ವಚನ ನೀಡಿದರು. ಮುಖ್ಯ ಅತಿಥಿಗಳಾಗಿ ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಚೈತನ್ಯಾನಂದ ಸ್ವಾಮಿಜಿ, ಹಿರಿಯ ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡರ, ಜಾನಪದ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಬಸವರಾಜ ಆಕಳವಾಡಿ, ಕಸಾಪ ಜಿಲ್ಲಾಧ್ಯಕ್ಷ ವೀರಣ್ಣ ನಿಂಗೋಜಿ, ಮಹಾರಾಷ್ಟ್ರ ಬ್ಯಾಂಕ್‌ನ ಮ್ಯಾನೇಜರ ಬಿ.ಎಸ್.ಹಿರೇಗೌಡರ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ರಾಜೇಂದ್ರ ಬಾಬು, ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಸಹಕಾರಿ ಸೇವಾ ಬ್ಯಾಂಕ್‌ನ ಅಧ್ಯಕ್ಷರಾದ ಜಿ.ಎಸ್.ಗೋನಾಳ, ಸಂಪಾದಕ ಕೆ.ಎಫ್.ಮುದ್ದಾಬಳ್ಳಿ, ನಿವೃತ್ತ ಡೆಪ್ಯೂಟಿ ತಹಶೀಲ್ದಾರ ರಾಮಣ್ಣ ವೇಮಲಿ,  ನ್ಯಾಯವಾದಿ ವಿ.ಎಸ್.ಕಟ್ಟಿ, ನಂದಿಶ್ವರ ಶಾಲಾ ಸಮಿತಿಯ ಅಧ್ಯಕ್ಷ ಶಿವಪ್ಪ ಶೆಟ್ಟರ್, ನಿವೃತ್ತ ಶಿರಸ್ತೆದಾರ ವೆಂಕಟರಾವ್ ಕುಲಕರ್ಣಿ,  ಮಲ್ಲಣ್ಣ ಜಮೇದಾರ ಅವರು ಆಗಮಿಸಿದ್ದರು.
ಈ ಪುಣ್ಯ ಸ್ಮರಣೋತ್ಸವ ಕಾರ್ಯಕ್ರಮದ ಅಂಗವಾಗಿ ಹಿರಿಯ ಸಾಹಿತಿಗಳಾದ ಅಲ್ಲಮಪ್ರಭು ಬೆಟ್ಟದೂರು, ಸಂಗೀತ ಶಿಕ್ಷಕ ಅಂಬಣ್ಣ ಕೊಪ್ಪರದ ಹಾಗೂ ಕುಷ್ಟಗಿಯ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶರಣಪ್ಪ ವಡಿಗೇರಿ ಅವರಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮ ಸಂಯೋಜಕರಾದ ಮಹಾಂತೇಶ್ವರ ಶಾಸ್ತ್ರಿಗಳು ಕೂಟನೂರು ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು.
ನಂತರ ಸಂಗೀತ ಕಾರ್ಯಕ್ರಮದಲ್ಲಿ ಸ್ಥಳೀಯ ಹಾಗೂ ಅಂತರಾಷ್ಟ್ರೀಯ ಕಲಾವಿದ ಯಮನೂರಪ್ಪ ಭಜಂತ್ರಿ, ಚೆನ್ನಯ್ಯ ರ‍್ಯಾವಣಕಿ, ವಾದಿರಾಜ್ ಪಾಟೀಲ್, ದೊಡ್ಡಯ್ಯ ಗವಾಯಿಗಳು, ಮಹಾಂತಯ್ಯ ಶಾಸ್ತ್ರಿಗಳು ಇವರಿಂದ ದಾಸವಾಣಿ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ನೀಡಿದರೆ ವಿಶೇಷ ಆಹ್ವಾನಿತ ಸಂಗೀತಗಾರರಲ್ಲಿ ಪಂ.ಅಂಬಯ್ಯ ನೂಲಿ, ಬೆಂಗಳೂರಿನ ವಿದ್ವಾನ್ ವೆಂಕಟೇಶ ಆಲ್ಕೋಡ್ ಹಾಗೂ ಮಹೇಶಕುಮಾರ ಹೇರೂರು ಇವರುಗಳಿಂದ ದಾಸವಾಣಿ ಹಾಗೂ ವಚನ ಸಂಗೀತ ಕಾರ್ಯಕ್ರಮ ಜನಮನಸೂರೆಗೊಂಡವು. ಇವರುಗಳಿಗೆ ಸಹ ಕಲಾವಿದರಾಗಿ ಹಾರ‍್ಮೋನಿಯಂ ರಾಮು ಕಂಪ್ಲಿ, ಹುಚ್ಚಯ್ಯ ಕಟಿಗಿನಹಳ್ಳಿ, ನಾರಾಯಣ ದಾಸ ಸಂತೆಕೆಲೂರು ಸಾಥ್ ನೀಡಿದರು. ಶ್ರೀಮಂತಕುಮಾರ ನಿಲೂರು, ಜಲೀಲ್ ಪಾಷಾ ಮುದ್ದಾಬಳ್ಳಿ ತಬಲಾ ಸಾಥ್ ನೀಡಿದರು. ತಾಳ್ ಕೃಷ್ಣಾ ಸೊರಟೂರು ನುಡಿಸಿದರು. 
Please follow and like us:
error

Leave a Reply

error: Content is protected !!