ಶಿಕ್ಷಕ ಸಂಘದ ಪಧಾದಿಕಾರಿಗಳಿಂದ ಜಿಪಂ ನೂತನ ಅಧ್ಯಕ್ಷರಿಗೆ ಅಭಿನಂದನೆ

ಕೊಪ್ಪಳ:ಜಿಲ್ಲಾ ಪಂಚಾಯತ ನೂತನ ಅಧ್ಯಕ್ಷ ಅಮರೇಶ  ಕುಳಗಿ ಇವರಿಗೆ ಹೂ ಮಾಲೆಯನ್ನು ಅರ್ಪಿಸಿ ಜಿಲ್ಲೆಯ, ಕೊಪ್ಪಳ ತಾಲೂಕಿನ ಶಿಕ್ಷಕ ಸಂಘದ ಪಧಾದಿಕಾರಿಗಳಾದ ಶರಣಪ್ಪ ಗೌಡ ಪಾಟೀಲ್ ಹಲಿಗೇರಿ, ಸುಬಾಷ ರೆಡ್ಡಿ, ಮೈಲಾರ ಗೌಡ ಹೊಸಮನಿ, ಶಿಕ್ಷಕ ಸಂಘದ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷರು ಮಹೇಶ ಟಂಕ್ ಸಾಲಿ ಖಚಾಂಚಿ, ಅಂದಾನ ಗೌಡ ಪಾಟೀಲ್ ನಿರ್ದೇಶಕರು, ಸಂಘಪ್ಪ ಅಂಗಡಿ, ದೈಹಿಕ ಶಿಕ್ಷಕರು, ಶಶಿದರ ಜಿರಗಿ, ಬಸವರಾಜ ಕಮಲಾಪುರ, ಪರಶುರಾಮ ಬೆಲಮಕರ್, ವೀರಭದ್ರಪ್ಪ ದೈಹಿಕ ಶಿಕ್ಷಕರು, ಭೀಮಸೇನರಾವ್ ದೇಸಾಯಿ, ಮೊದಲಾದವರು ಗೌರವಾರ್ಪಣೆಯನ್ನು ನೀಡಿ ನಿಮ್ಮ ಆಡಳಿತದ ಅವಧಿಯಲ್ಲಿ ಜಿಲ್ಲಾ ಪಂಚಾಯತಿಯ ಎಲ್ಲ ಇಲಾಖೆಗಳ ಮೂಲಕ ಜಿಲ್ಲೆಯ ಜನತೆಗೆ ಉತ್ತಮ ಆಡಳಿತ ದೊರೆಯಲೆಂದು ಆಶಿಸಿ ಅಭಿನಂದಿಸಿದರು .
      ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಸಾಮಾಜೀಕ ನ್ಯಾಯ ಸಮಿತಿ ಅಧ್ಯಕ್ಷ ಅಶೋಕ ತೋಟದ್, ಜಿಲ್ಲಾ ಸರಕಾರಿ ನೌಕರದಾರರ ಸಂಘದ ಅಧ್ಯಕ್ಷ ನಾಗರಾಜ, ಜಿಲ್ಲಾ ಪಂಚಾಯತಿಯ ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಶ್ರೀನಿವಾಸ ಕುಲಕರ್ಣಿ ಉಪಸ್ಥಿತರಿದ್ದರು. 

Related posts

Leave a Comment