ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಸಾಂಸ್ಕೃತಿಕ ಸೌರಭ.

ಕೊಪ್ಪಳ, ಮಾ.೮ (ಕ
ವಾ) ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸಾಂಸ್ಕೃತಿಕ ಸೌರಭ-೨೦೧೬
ಕಾರ್ಯಕ್ರಮ ಕೊಪ್ಪಳ ತಾಲೂಕು ಕುಣಿಕೇರಿ ಗ್ರಾಮದ ಮಾರುತೇಶ್ವರ ದೇವಸ್ಥಾನದ ಬಯಲುರಂಗ
ಮಂದಿರದಲ್ಲಿ ಮಾ.೧೦ ರಂದು ಸಂಜೆ ೦೫ ಗಂಟೆಗೆ ನಡೆಯಲಿದೆ.ಕೊಪ್ಪಳ ಜಿಲ್ಲಾ ಉಸ್ತುವಾರಿ
ಮತ್ತು ಸಣ್ಣ ನೀರಾವರಿ ಸಚಿವ ಶಿವರಾಜ.ಎಸ್.ತಂಗಡಗಿ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ
ರಾಘವೇಂದ್ರ ಹಿಟ್ನಾಳ್ ಅಧ್ಯಕ್ಷತೆ ವಹಿಸುವರು, ಸಂಸದ ಕರಡಿ ಸಂಗಣ್ಣ, ಶಾಸಕರುಗಳಾದ
ಬಸವರಾಜ ರಾಯರೆಡ್ಡಿ, ಇಕ್ಬಾಲ್ ಅನ್ಸಾರಿ, ದೊಡ್ಡನಗೌಡ ಪಾಟೀಲ್, ವಿಧಾನ ಪರಿಷತ್
ಸದಸ್ಯರುಗಳಾದ ಬಸವರಾಜ ಪಾಟೀಲ್ ಇಟಗಿ, ಶರಣಪ್ಪ ಮಟ್ಟೂರ, ಅಮರನಾಥ ಪಾಟೀಲ್, ಕುಣಿಕೇರಿ
ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಮಲಾಬಾಯಿ ರವಿಕುಮಾರ, ಉಪಾಧ್ಯಕ್ಷ ರಾಮಣ್ಣ ಬೆಳವಿನಾಳ್,
ಜಿ.ಪಂ ಸದಸ್ಯ ಗೂಳಪ್ಪ ಹಲಗೇರಿ, ತಾ.ಪಂ ಸದಸ್ಯ ಚಂದ್ರಕಾಂತ್, ಕೊಪ್ಪಳ ತಹಶಿಲ್ದಾರ್
ಪುಟ್ಟರಾಮಯ್ಯ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ಟಿ.ಕೃಷ್ಣಮೂರ್ತಿ, ಕೊಪ್ಪಳ ಗ್ರಾಮೀಣ
ಆರಕ್ಷಕ ವಲಯ ನಿರೀಕ್ಷಕ ಮೋಹನ್ ಪ್ರಸಾದ್ ಮುಖ್ಯ ಅತಿಥಿಗಳಾಗಿ
ಭಾಗವಹಿಸುವರು.ಸಾಂಸ್ಕೃತಿಕ ಸೌರಭ ಕಾರ್ಯಕ್ರಮದ ಅಂಗವಾಗಿ ಸಂಜೆ ೫.೩೦ ಗಂಟೆಗೆ
ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರಾರಂಭವಾಗಲಿದ್ದು, ಕುಣಿಕೇರಿಯ ಶ್ರೀ ಮಾರುತೇಶ್ವರ
ಝಾಂಝ್ ಮೇಳ ದಿಂದ ಝಾಂಝ್ ಮೇಳ, ಗೊರ್ಲೆಕೊಪ್ಪದ ವೀರಯ್ಯ ಹಿರೇಮಠ ಮತ್ತು ತಂಡದಿಂದ ಕರಡಿ
ಮಜಲು ಪ್ರದರ್ಶನಗೊಳ್ಳಲಿದೆ. ಎಸ್.ಎಸ್.ಹಿರೇಮಠ ಅವರಿಂದ ಹಿಂದೂಸ್ತಾನಿ ವಾದ್ಯ ಸಂಗೀತ,
ತಳಕಲ್ ಗ್ರಾಮದ ಕೆ.ಜಿ. ಕವಿತಾ ಮತ್ತು ತಂಡದಿಂದ ಸಮೂಹ ನೃತ್ಯ, ಸದಾಶಿವ ಪಾಟೀಲ್ ರಿಂದ
ಸುಗಮ ಸಂಗೀತ, ಚೆನ್ನಬಸಪ್ಪ ಬಾವಿಮನಿ ಅವರಿಂದ ಜಾನಪದ ಗೀತೆಗಳು, ರಾಮಚಂದ್ರಪ್ಪ ಉಪ್ಪಾರ.
ಭಾಗ್ಯನಗರ ಇವರಿಂದ ಹಿಂದೂಸ್ತಾನಿ ಶಾಸ್ತ್ರೀಯ ಗಾಯನ, ಶಿವರಾಜ ಶಾಸ್ತ್ರಿ ತಾವರಗೇರಾ
ಇವರಿಂದ ಕಥಾ ಕೀರ್ತನೆ ಸಾಂಸೃತಿಕ ಕಾರ್ಯಕ್ರಮಗಳು ಜರುಗಲಿವೆ.  ಕವಲೂರು ಗ್ರಾಮದ ಬಸವರಾಜ
ಕವಲೂರ ಮತ್ತು ತಂಡದಿಂದ ಪಿ.ಬಿ ದುತ್ತರಗಿ ರಚಿತ ‘ವೀರ ಸಿಂಧೂರ ಲಕ್ಷ್ಮಣ’ ನಾಟಕ
ಪ್ರದರ್ಶನಗೊಳ್ಳಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ
ಟಿ.ಕೊಪ್ರಪ್ಪ ತಿಳಿಸಿದ್ದಾರೆ.
Please follow and like us:
error