ನಾಡಿನ ಭಾಷೆ,ನೆಲ,ಜಲ ಕಾಪಡುವದು ನಮ್ಮೆಲ್ಲರ ಕರ್ತವ್ಯ

ಶಿಡ್ಲಭಾವಿ  ಗ್ರಾಮದ ಶಿವರಾಮೇಗೌಡ ಬಣ ಕರವೇ ಉದ್ಘಾಟಣೆ
ಯಲಬುರ್ಗಾ  : ನಾಡಿನ ನೆಲ,ಜಲ,ಭಾಷೆ ಕಾಪಾಡುವದು   ಕರ್ತವ್ಯವಾಗಿದೆ ಎಂದು ಗದಗ ಜಿಲ್ಲಾಧ್ಯಕ್ಷ ಕೆ.ಎಸ್.ಕೊಡತಗೇರಿ ಹೇಳಿದರು ಅವರು ಯಲಬುರ್ಗಾ ತಾಲೂಕಿನ ಶಿಡ್ಲಭಾವಿ ಗ್ರಾಮದ ಶಿವರಾಮೇಗೌಡ ಬಣ ಕರವೇ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಕರ್ನಾಟಕ ಸರಕಾರ ಎಂಇಎಸ್ ಎಂಬ ಸಂಘಟಣೆಯನ್ನು ನಿಷೇಧಿಸಬೇಕು ಅವರು ರಾಜ್ಯದಲ್ಲಿ ಕೊಮು ಗಲಬೆಗೆ ಕಾರಣವಾಗುತ್ತಾರೆ ಮತ್ತು ಎಂಇಎಸ್ ಶಾಸಕ ತನ್ನ ಬಂಡತನದಿಂದ ರಾಜ್ಯದ ಬಗ್ಗೆ ಅವಹೇಳನಕಾರಿ ಹೇಳಿಕೆಯನ್ನು ಸಾರ್ವಜನಿಕವಾಗಿ ಹೇಳುವದರ ಮುಲಕ ಕನ್ನಡಿಗರನ್ನು ಕೆರಳಿಸುತಿದ್ದಾನೆ ಅಂತವನ ಶಾಸಕತ್ವವನ್ನು ನಿಷೇಧಿಸಬೇಕು ಇಲ್ಲದಿದ್ದರೆ ಮುಂದಿನ ದಿನಮಾನಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಅಂತ ಶಾಸಕರಿಗೆ ತಕ್ಕ ಉತ್ತರ ನೀಡುತ್ತೆವೆ ಎಂದರು.
ನಂತರ ಮಾತನಾಡಿ ಕನ್ನಡ ಪರ ಹೋರಾಟಗಾರರ ಮೇಲಿರುವ ಮೊಕದ್ದಮೆಗಳನ್ನು ಸರ್ಕಾರ ಹಿಮ್ಮಪಡೆಯಬೇಕು ನಾವು ರಾಜ್ಯಕ್ಕೆ ಅನ್ಯಾಯವಾದಗ ಬೀದಿಗಿ ಇಳಿದು ಹೋರಾಟ ಮಾಡುತ್ತವೆ ಆದ್ದರಿಂದ ಮೊಕದ್ದಮೆಗಳನ್ನು ಹಿಮ್ಮಪಡೆಯಬೇಕು ಎಂದು ಒತ್ತಾಯಿಸಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಪ್ಪಳ ಜಿಲ್ಲಾಧ್ಯಕ್ಷ ಅಜ್ಜಪ್ಪ ಕರಡಕಲ್ ಮಾತನಾಡಿ ಜಿಲ್ಲೆಯಲ್ಲಿ ನೀರಾವರಿ ಸೇರಿದಂತೆ ಹಲವಾರು ಸಮಸ್ಯೆಗಳಿದ್ದು ಸರ್ಕಾರ ಹೆಚ್ಚಿನ ರೀತಿಯಲ್ಲಿ ನೀರಾವರಿ ಸೌಲಭ್ಯವನ್ನು ಜಿಲ್ಲೆಗೆ ಒದಗಿಸಿಕೊಡಬೇಕು ಆದ್ದರಿಂದ ಜಿಲ್ಲೆಯ ಶಾಸಕರು ಮತ್ತು ಮಂತ್ರಿಗಳು ಸರ್ಕಾರಕ್ಕೆ ಗಮನ ಹರಿಸಿ ಜಿಲ್ಲೆಗೆ ಅಭಿವೃದ್ದಿ ಕೆಲಸ ಮಾಡಬೇಕು ಅದಕ್ಕೆ ನಾವು ಕೈ ಜೋಡಿಸುತ್ತೇವೆ ಇಲ್ಲದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಪ್ರಸ್ತಾವಿಕ ವಾಗಿ ತಾಲೂಕ ಅಧ್ಯಕ್ಷ ರಾಜಶೇಖರ ಶ್ಯಾಗೋಟಿ ಮಾತನಾಡಿದರು ಕಾರ್ಯಕ್ರಮದಲ್ಲಿ ಜಿಲ್ಲಾ ಕಾರ್ಯಧ್ಯಕ್ಷ ಆರೀಫ ಮುಲ್ಲಾ ಜಿಲ್ಲಾ ಜಂಟಿ ಕಾರ್ಯದರ್ಶಿ ಈಶಪ್ಪ ಮೂಲಿ.ಶಂಕರ ಮೂಲಿ.ಬಸವರಾಜ ಹಳ್ಳಿ.ಶರಣಯ್ಯ ಕಾರಡಿಮಠ.ಹನಮಂತಪ್ಪ ಗೋಸಾಲೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.

Please follow and like us:
error