ಕಡತ ವಿಲೇವಾರಿ ಮಾಸಾಚರಣೆಗೆ ಜಿ.ಪಂ. ಸಿಇಓ ಸೂಚನೆ

  ಜಿಲ್ಲಾ ಪಂಚಾಯತಿ ಹಾಗೂ ತಾಲೂಕ ಪಂಚಾಯತಿಗಳಲ್ಲಿ ಬಾಕಿ ಇರುವ ಕಡತಗಳ ಶೀಘ್ರ ವಿಲೇವಾರಿಗಾಗಿ ನವೆಂಬರ್ ೩೦ ರವರೆಗೆ ಕಡತ ವಿಲೇವಾರಿ ಮಾಸಾಚರಣೆ ಕೈಗೊಳ್ಳುವಂತೆ ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
  ಎಲ್ಲ ಇಲಾಖೆಗಳ ಜಿಲ್ಲಾ, ತಾಲೂಕು, ವಿಭಾಗ ಮಟ್ಟದ ಕಚೇರಿಗಳ ಮುಖ್ಯಸ್ಥರು ನವೆಂಬರ್ ೩೦ ರವರೆಗೆ ಕಡತ ವಿಲೇವಾರಿ ಮಾಸಾಚರಣೆಯನ್ನು ಹಮ್ಮಿಕೊಳ್ಳುವಂತೆ ಸರ್ಕಾರ ಸೂಚನೆ ನೀಡಿದೆ.  ಈ ಸೂಚನೆಯನ್ನು ಎಲ್ಲ ಇಲಾಖೆ ಅಧಿಕಾರಿಗಳು ಕಟ್ಟುನಿಟ್ಟಾಗಿ ಪಾಲಿಸಬೇಕು.  ಅಲ್ಲದೆ ಕಡತ ವಿಲೇವಾರಿ ಕುರಿತ ಮಾಹಿತಿಯನ್ನು ಈ ಮಾಸಾಚರಣೆ ಸಂದರ್ಭದಲ್ಲಿ, ಪ್ರಗತಿ ವರದಿಯನ್ನು ನಿಗದಿತ ನಮೂನೆಯಲ್ಲಿ ಪ್ರತಿ ಸೋಮವಾರದಂದು ಕಡ್ಡಾಯವಾಗಿ ಜಿಲ್ಲಾ ಪಂಚಾಯತಿ ಕಛೇರಿಗೆ ಇ-ಮೇಲ್ ಮೂಲಕ ಹಾಗೂ ಹಾರ್ಡ್ ಕಾಪಿ ಮುಖಾಂತರ ಸಲ್ಲಿಸಬೇಕು. ತಪ್ಪಿದಲ್ಲಿ ಸಂಬಂಧಿಸಿದ ಇಲಾಖಾ ಅಧಿಕಾರಿ, ಅಧೀಕ್ಷಕರು, ವಿಷಯ ನಿರ್ವಾಹಕರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ.ಉದಪುಡಿ   ತಿಳಿಸಿದ್ದಾರೆ. 

Leave a Reply