ಪರೀಕ್ಷೆಯನ್ನು ಆತ್ಮ ವಿಶ್ವಾಸದಿಂದ ಎದುರಿಸಿದರೆ ಮುಂದಿನ ಬದುಕು ಉಜ್ವಲ

ಹೊಸಪೇಟೆ: ಎಸ್‌ಎಸ್‌ಎಲ್‌ಸಿ ಅನ್ನುವುದು ವಿದ್ಯಾರ್ಥಿಗಳ ಬದುಕಿನಲ್ಲಿ ಹೊಸ ತಿರುವು ತೆಗೆದುಕೊಳ್ಳುವ ಅವಕಾಶ. ಈ ಪರೀಕ್ಷೆಯನ್ನು ಆತ್ಮ ವಿಶ್ವಾಸದಿಂದ ಎದುರಿಸಿದರೆ ಮುಂದಿನ ಬದುಕು ಉಜ್ವಲವಾಗಲಿದೆ ಎಂದು ತಾಯಮ್ಮ ಶಕ್ತಿ ಸಂಘದ ಅಧ್ಯಕ್ಷೆ ಕವಿತಾ ಈಶ್ವರ ಸಿಂಗ್ ಹೇಳಿದರು.
ನಗರದಲ್ಲಿ ತಾಯಮ್ಮ ಶಕ್ತಿ ಸಂಘದ ಕಚೇರಿಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಉಚಿತ ಟ್ಯೂಷನ್ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಈ ತರಬೇತಿ ಶಿಬಿರದಲ್ಲಿ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಅಂಕ ಪಡೆದು ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ತಾಯಮ್ಮ ಶಕ್ತಿ ಸಂಘದಿಂದ ಸನ್ಮಾನಿಸಿ ಪುರಸ್ಕರಿಸಲಾಗುವುದು ಎಂದರು. 
ವಿದ್ಯಾರ್ಥಿಗಳಿಗೆ ಉಚಿತವಾಗಿ ತರಬೇತಿ ನೀಡಿದ ಸಂಪನ್ಮೂಲ ವ್ಯಕ್ತಿ ಹಾಗೂ ಪತ್ರಕರ್ತ ರಾಜು ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಿ ಪುರಸ್ಕರಿಸಲಾಯಿತು. ತಾಯಮ್ಮ ಶಕ್ತಿ ಸಂಘದ ಲಲಿತಾ, ಜ್ಯೋತಿ, ಶಾಹಿದ್, ಶಮಾ, ಶೇಖಬೀ, ಚಾಂದನಿ, ಯಲ್ಲಮ್ಮ ಮತ್ತಿತರರು ಹಾಜರಿದ್ದರು.
Please follow and like us:

Related posts

Leave a Comment