ಕೊಪ್ಪಳ, ಜೂ. – ೨೯ ತಾಲೂಕಿನ ಕೋಳೂರು ಗ್ರಾಮ ಪಂಚಾಯತ ನೂತನ ಅಧ್ಯಕ್ಷರಾಗಿ ಬಸವ್ವ ಹನುಮಂತಪ್ಪ ಪೂಜಾರ ದದೇಗಲ್ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಕಾಂಗೇಸ್ ತನ್ನ ಪಾರಪತ್ಯ ಮೇರೆದಿದೆ.
ಹಾಗಿಯೇ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಶಿವವ್ವ ಷಣ್ಮುಕಪ್ಪ ಭೂತಣ್ಣನವರ ಚಿಕ್ಕಸಿಂದೋಗಿ ಅವರು ಬಿಜೆಪಿ ಅಭ್ಯರ್ಥಿ ವಿರುದ್ಧ ವಿಜಯಸಾಧಿಸುವ ಮೂಲಕ ಆಯ್ಕೆಗೊಂಡಿದ್ದು ಕೋಳೂರು ಗ್ರಾ.ಪಂ. ಕಾಂಗ್ರೆಸ್ ವಶಕ್ಕೆ ಬಂದಿದ್ದು ನೂತನ ಅಧ್ಯಕ್ಷ, ಉಪಾಧ್ಯಕ್ಷರು ಗ್ರಾ.ಪಂ. ವ್ಯಾಪ್ತಿಯ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು, ಊರಿನ ಗುರುಹಿರಿಯರು, ಅಭಿಮಾನಿಗಳು ಹಾಗೂ ಸಮಸ್ತ ಮತದಾರ ಬಂಧುಗಳಿಗೆ ಹೃತ್ಪೂರ್ವಕ ಅಭಿನಂಧಿಸಿದ್ದಾರೆ.

Leave a Reply