ಮೀಟರ್ ಬಡ್ಡಿಕೋರರನ್ನು ಮಟ್ಟಹಾಕಿ ಭಾರಧ್ವಾಜ್.

ಕೊಪ್ಪಳ ಜಿಲ್ಲೆಯಲ್ಲಿ ಎಗ್ಗಿಲ್ಲದೇ ಮೀಟರ್ ಬಡ್ಡಿ ದಂಧೆ ನಡೆಸುತ್ತಿರುವವರ ವಿರುದ್ಧ ಕೂಡಲೇ ಕ್ರಮ ಜರುಗಿಸಿ ರೈತರನ್ನು, ಸಣ್ಣ ವ್ಯಾಪಾರಿಗಳನ್ನು ಮತ್ತು ಬಡವರನ್ನು ಕಾಪಾಡಬೇಕೆಂದು ಸಿಇಐಎಂಎಲ್ ಪಕ್ಷ ಸರಕಾರವನ್ನು ಒತ್ತಾಯಿಸುತ್ತದೆ. ಕೊಪ್ಪಳ ಜಿಲ್ಲೆಯ ನಾಲ್ಕು ತಾಲೂಕುಗಳಲ್ಲಿ ಮೀಟರ್ ಬಡ್ಡಿಕೋರರ ಜಾಲ ಬೃಹತ್ತಾಗಿ ಬೆಳೆದಿದ್ದು, ನೂರಕ್ಕೆ ಎಂಬತ್ತರಷ್ಟು ಕುಟುಂಬಗಳು ಈ ಜಾಲದಲ್ಲಿ ಸಿಲುಕಿಕೊಂಡು ಒದ್ದಾಡುತ್ತಿವೆ. ಅಕ್ರಮ ಬಡ್ಡಿಕೋರರು ಎಲ್ಲಾ ರಾಜಕೀಯ ಪಕ್ಷಗಳಲ್ಲಿ ಮುಖಂಡರಾಗಿದ್ದಾರೆ. ರಾಜಕೀಯ ಪಕ್ಷಗಳ ಬೆಂಬಲ ಸಿಗುವವರೆಗೂ ಇವರನ್ನು ಮಟ್ಟ ಹಾಕುವುದು ಸರಕಾರಕ್ಕೆ ಅಷ್ಟು ಸುಲಭವಲ್ಲ. ರಾಜಕೀಯ ಪಕ್ಷಗಳು ನಿಜವಾದ ಜನಪರ ಕಾಳಜಿಯಿದ್ದರೆ ಇಂತಹ ಅಕ್ರಮ ಬಡ್ಡಿ ವ್ಯವಹಾರಿಗಳನ್ನು ಪಕ್ಷಗಳಿಂದ ಹೊರಹಾಕಬೇಕು. ಜಿಲ್ಲಾಡಳಿತ ಕೂಡಲೇ ಮೀಟರ್ ಬಡ್ಡಿಕೋರರ ನಿಯಂತ್ರಣಕ್ಕಾಗಿ ಒಂದು ಸಂಚಾರಿದಳವನ್ನುರೂಪಿಸಿ ಅಕ್ರಮ ಬಡ್ಡಿಕೋರರ ಮಾಹಿತಿ ಸಂಗ್ರಹಿಸಬೇಕು. ಅನಾಮಧೇಯ ಪತ್ರಗಳು, ಮಾಹಿತಿ ಬಂದಾಗ ಜಿಲ್ಲಾಡಳಿತ ಕೂಡಲೇ ಸ್ಪಂದಿಸಿ, ಶೋಷಿತರಿಗೆ ನ್ಯಾಯ ಕೊಡಬೇಕು. ಸಿಪಿಐಎಂಎಲ್ ಪಕ್ಷ ಸಾಲ ಬಾಧಿತರಿಗಾಗಿ ಆಶಾಕಿರಣ ಎಂಬ ಸಂಘಟನೆಯನ್ನು ಪ್ರಾರಂಭಿಸಲಿದ್ದು, ಇದರಲ್ಲಿ ಪ್ರಗತಿಪರ ಯುವಕರು, ಯುವ ವಕೀಲರು ಮತ್ತು ಬುದ್ಧಿಜೀವಿಗಳನ್ನು ಒಳಗೊಂಡು ಕಾನೂನುಬದ್ಧವಾಗಿ ಸಾಲಬಾಧಿತರಿಗೆ ನೆರವು ನೀಡಲಿದೆ ಎಂದು ತಿಳಿಸಿದ್ದಾರೆ.

Related posts

Leave a Comment