
ಮುಖ್ಯ ಅತಿಥಿಗಳಾಗಿ ಮಾತನಾಡಿದ ರಾಘವೇಂದ್ರ ಪಾನಘಂಟಿ ವಕೀಲರು ಭಾಗ್ಯನಗರದಲ್ಲಿ ಮೊದಲಿನಿಂದಲೂ ಸಂಗೀತಾಸಕ್ತಿಯನ್ನು ಬೆಳೆಸಿಕೊಂಡವರನ್ನು ನೆನಪಿಸಿಕೊಂಡು, ಶ್ರೀ ಶಾರದಾ ಪಾಠ ಶಾಲೆ ಸೇರುವ ೨೫ ಮಕ್ಕಳಿಗೆ ಸಮವಸ್ತ್ರವನ್ನು ನೀಡವ ವಾಗ್ದಾನ ಮಾಡಿದರು ಹಾಗೂ ಉದ್ಯಮಿಗಳಾದ ಶ್ರೀನಿವಾಸ ಗುಪ್ತಾರವರು ಸಂಗೀತ ಕಲಿಯಲು ಬೇಕಾಗುವ ಉಪಕರಣಗಳನ್ನು ನೀಡುವದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರಿಮತಿ ಹುಲಿಗಮ್ಮ, ವೀರಣ್ಣ ಅಕ್ಕಸಾಲಿ, ಶಂಕರಗೌಡ್ರು , ನಾಗಣ್ಣ ಭವಾನಸಾ ಮೇಘರಾಜ ಹಾಗೂ ಮೊದಲಾದ ಅನೇಕ ಗುರು ಹಿರಿಯರು ಭಾಗವಹಿಸಿದರು.
ಈ ಸಂದರ್ಭದಲ್ಲಿ ಪರಶುರಾಮ ಬಣ್ಣದ ಹಾಗೂ ಸಂಗಡಿಗರಿಂದ ಸಂಗೀತ ಕಾರ್ಯಕ್ರಮ ನೆಡೆಯಿತು.
Please follow and like us: