ಅಟೋರಿಕ್ಷಾ ಚಾಲಕನ ಪ್ರಾಮಾಣಿಕತೆ.

ಕೊಪ್ಪಳ-22- ನಗರದ ಶ್ರೀಮತಿ
ಸುಮಂಗಲಾ ಸೋಮಲಾಪುರ ಇವರು ಶ್ರೀಮತಿ ಶಾರದಮ್ಮಾ ಕೊತಬಾಳ ಕಾಲೇಜಿನಿಂದ
ಶ್ರೀಗವಿಸಿದ್ದೇಶ್ವರ ಅರ್ಬನ್ ಬ್ಯಾಂಕ್ ನವರೆಗೆ ಅಟೋದಲ್ಲಿ ತೆರಳುತ್ತಿರುವಾಗ  ಅವರ
ದುಬಾರಿ ಬೆಲೆಯ ಕೈಗಡಿಯಾರ ಅಟೋದಲ್ಲಿಯೇ ಬಿದ್ದದ್ದು ಅವರ ಅವರ ಗಮನಕ್ಕೆ ಬಂದಿರಲಿಲ್ಲ.
ಆನಂತರ ಅವರು ಸಂಜೆ ಆಟೋ ಚಾಲಕನ್ನು ಹುಡುಕುವಲ್ಲಿ ಪ್ರಯತ್ನಿಸಿದ್ದರು. ಮರುದಿವಸ
ಅಟೋಚಾಲಕನಾದ ಮೃತ್ಯೂಜಾ ಶರಡಿ ಕೈಗಡಿಯಾರ ಕಳೆದುಕೊಂಡ ಅವರ ಮನೆಗೆ ಹೋಗಿ ಅದನ್ನು
ಕೊಟ್ಟಿದ್ದಾನೆ. ಮತ್ತೊಬ್ಬರ ವಸ್ತುವನ್ನು ಅಪಹರಿಸುವ ಈ ಕಾಲದಲ್ಲಿ  ಅಟೋಚಾಲಕನಾದ  ಯುವ
ಮೃತ್ಯೂಜಾ ಶರಡಿ ಇವರು ಪ್ರಯಾಣಿಕರು ಕಳೆದುಕೊಂಡ ವಸ್ತುಗಳನ್ನು ಮರಳಿ ಅವರಿಗೆ ಒಪ್ಪಿಸುವ
ಅವರ ಪ್ರಾಮಾಣಿಕತೆ ಪ್ರಶಂಸನೀಯ.

Please follow and like us:
error